ಕನ್ನಡ ಪತ್ರಿಕಾ ಲೋಕ (೨೬) - ನವಕಲ್ಯಾಣ

ಕನ್ನಡ ಪತ್ರಿಕಾ ಲೋಕ (೨೬) - ನವಕಲ್ಯಾಣ

ಟಿ. ಸಿದ್ದಪ್ಪ ಅವರ   "ನವಕಲ್ಯಾಣ"

ಕಲಬುರ್ಗಿ ಜಿಲ್ಲೆಯ 'ನವ ಕಲ್ಯಾಣ ಪಬ್ಲಿಕೇಷನ್ಸ್'  ಪ್ರಕಟಿಸುತ್ತಿದ್ದ ಸುದ್ಧಿ ಸಾಪ್ತಾಹಿಕವಾಗಿತ್ತು "ನವ ಕಲ್ಯಾಣ". ಟಿ. ಸಿದ್ದಪ್ಪ ಅವರು ಸಂಪಾದಕರಾಗಿದ್ದರು. "ನವಕಲ್ಯಾಣ", ಮುದ್ರಣವಾಗುತ್ತಿದ್ದುದು ಬೆಂಗಳೂರಿನಲ್ಲಿ. ಇಲ್ಲಿನ ಫ್ರೇಜರ್ ಟೌನ್ ನ ನವೀನ್ ಕನ್ಸ್ಟ್ರಕ್ಷನ್ ಕೋ ಪ್ರೈವೆಟ್ ಲಿಮಿಟೆಡ್ ನ ಬಲದೇವ ವೆರ್ಮ ಅವರು ಮುದ್ರಕರು ಮತ್ತು ಪ್ರಕಾಶಕರಾಗಿದ್ದರು.

ಟ್ಯಾಬ್ಲಾಯ್ಡ್ ನಲ್ಲಿ ಎಂಟು ಪುಟಗಳಲ್ಲಿ ಪ್ರಕಟವಾಗುತ್ತಿದ್ದ " ನವಕಲ್ಯಾಣ"ಕ್ಕೆ ೧೯೬೦ರ ದಶಕದಲ್ಲಿ ೨೦ ಪೈಸೆ ಬೆಲೆಯಾಗಿತ್ತು.

೧೯೬೬ರ ಡಿಸೆಂಬರ್ ನಲ್ಲಿ ಆರಂಭವಾದ "ನವಕಲ್ಯಾಣ" ದಲ್ಲಿ ಸುದ್ಧಿಗಳು, ಲೇಖನಗಳು, ಕಥೆಗಳು, ಕವನಗಳು, ನಾಟಕಗಳು, ಪುಸ್ತಕಗಳ ಅವಲೋಕನ, ವಿನೋದ ಬರಹಗಳು, ವಾರದ ಗ್ರಹಗತಿ ಹೀಗೆ ವೈವಿಧ್ಯಮಯ ಬರಹಗಳು ಪ್ರಕಟವಾಗುತ್ತಿತ್ತು.

~ ಶ್ರೀರಾಮ ದಿವಾಣ