ಕನ್ನಡ ಪತ್ರಿಕಾ ಲೋಕ (೨೮) - ಬಯ್ಯ ಮಲ್ಲಿಗೆ
"ಬಯ್ಯ ಮಲ್ಲಿಗೆ" ಕಾಸರಗೋಡು ಜಿಲ್ಲೆಯಿಂದ ಪ್ರಕಟವಾಗುತ್ತಿದ್ದ ಕನ್ನಡ ಸಂಜೆ ದೈನಿಕ. ೧೯೯೧ರ ಫೆಬ್ರವರಿಯಲ್ಲಿ ಪ್ರಕಟಣೆ ಆರಂಭಿಸಿದ ಪತ್ರಿಕೆಯ ಸಂಪಾದಕರಾಗಿದ್ದವರು ರಾಜೇಶ್ ರೈ ಚಟ್ಲ. ಇವರೀಗ "ಪ್ರಜಾವಾಣಿ" ದೈನಿಕದ ಬ್ಯೂರೋ ಚೀಫ್ ಆಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾಲ್ಕು ಪುಟಗಳ "ಬಯ್ಯ ಮಲ್ಲಿಗೆ" ಪತ್ರಿಕೆಯ ಬೆಲೆ ೬೦ ಪೈಸೆಯಾಗಿತ್ತು."ಕನ್ನಡ ಪತ್ರಿಕಾಲೋಕ" ಬರೆಯುತ್ತಿರುವ ನಾನು (ಶ್ರೀರಾಮ ದಿವಾಣ), ಈ ಪತ್ರಿಕೆಯ ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೆ.
ಕೆಲವು ವರ್ಷಗಳ ಕಾಲ ಕಾಸರಗೋಡು ಕನ್ನಡಿಗರ ಪತ್ರಿಕೆಯಾಗಿ ನಡೆದು, ಬಳಿಕ "ಬಯ್ಯ ಮಲ್ಲಿಗೆ" ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು.
~ ಶ್ರೀರಾಮ ದಿವಾಣ