ಕನ್ನಡ ಮೇಲೆ ಒಂದು ಕವನ

ಕನ್ನಡ ಮೇಲೆ ಒಂದು ಕವನ

ಕವನ

 ಗೋವಿನ ಹಾಲು ತಾಯಿಯ ಮಮತೆ 

ಸಿಹಿ ಇದೆ ಕಬ್ಬಿನ ರಸದಂತೆ
ಹೆಜ್ಜೇನಿದೆ ಗಂಧದ ಕಂಪಿದೆ 
ಮಧು ತುಂಬಿದ ಭಾಷೆ ಕನ್ನಡವಂತೆ
 
ದಾಸರ ಪದವಿದೆ ವಚನವು ಇಲ್ಲಿದೆ
ಹರಡಿದೆ ಕವಿತೆಯು ಕಂಪಂತೆ 
ಸುಸಂಸ್ಕೃತ ತಾಣವು ಕಲೆಗಳ ಸ್ಥಾನವು
ಇತಿಹಾಸವು ಹೊನ್ನಿನ ಕಳಸದಂತೆ