ಕನ್ನಡ ರಾಜ್ಯೋತ್ಸವದ ಝಲಕುಗಳು...

ಕನ್ನಡ ರಾಜ್ಯೋತ್ಸವದ ಝಲಕುಗಳು...

ಕವನ

ಕನ್ನಡವೇ ಎನ್ನಯ ಬಾಳ್

ಕನ್ನಡವೇ ಎನ್ನಯ ಕೂಳ್

ಕನ್ನಡವೇ ಎನ್ನಯ ತೋಳ್ 

ವಿರುದ್ಧವೆನಲ್ ಎಲ್ಲ ಧೂಳ್!            

 

ನಾಡಿದು ಶ್ರೀಗಂಧದ ಗುಡಿ

ತುಂಬಿದೆಯಿಲ್ಲಿ ಹೊನ್ನ ಪಡಿ

ಸುಮಧುರ ಭಾಷೆಯ ನುಡಿ

ನಲ್ನುಡೀ ಮಾತಿನ ಮೋಡಿ!

 

ಕನ್ನಡ ನಮ್ಮಯ ಸಂಪತ್ತು

ಕಲಿತೊಡೆ ಇಲ್ಲವು ಆಪತ್ತು

ಇದಕಿದೆ ಜಗದಲಿ ಕಿಮ್ಮತ್ತು

ಹರಡಲಿ ಇದರ ಘಮ್ಮತ್ತು!

 

ಎನ್ನ ತಾಯಿಯೇ ಕನ್ನಡ

ಕಾಯ್ವಳ್ ಮಾತೆ ಕನ್ನಡ

ಎನ್ನ ಋಣವಿದು ಕನ್ನಡ

ನನ್ನೆದೇ ಸೀಳಲ್ ಕನ್ನಡ!

 

ಕನ್ನಡವೆ ಎನ್ನ ತೊದಲ್ನುಡಿ

ಬರವಣಿಗೆಗಿದು ಸವಿನುಡಿ

ಭಾವದಲಿ ಬೆಸೆವ ಹೊನ್ನುಡಿ

ಜಗಕೇ ಇಡುತಿದೆ ದಾಂಗುಡಿ!

 

ನಮಗಿಹುದು ಕನ್ನಡ ಛಲ

ಇದುವೇ ನಮ್ಮ ತೋಳ್ಬಲ

ಪುರಾತನ ಸಂಸ್ಕೃತೀ ನೆಲ

ಹೆಮ್ಮೆಯ ಕನ್ನಡದೀ ಕುಲ!

 

ಸವಿ ಕನ್ನಡವಿದು ಗೆಳೆಯ

ಸಿರಿ ಸಾಹಿತ್ಯವಿದು ತಿಳಿಯ

ಕನ್ನಡ ಭಾಷೆಯಲೆ ಬರೆಯ

ಬ್ರಹ್ಮ ಲಿಪಿಯೆಂದರಿಯ!

                 

ಕನ್ನಡವಿದು ನಂದಾ ದೀಪ

ಹರಡುತಿದೆ ಎಲ್ಲೆಡೇ ಛಾಪ

ಅವರಿಸಲಿ ಕನ್ನಡದ ಧೂಪ

ಕಳೆವುದು ನಮ್ಮಯ ಪಾಪ!

 

ಕನ್ನಡದ ಪೂಜೆಗೆ ನೀ ಬಾರಾ

ಎಳೆಯಿರಿ ನಮ್ಮಯ ತೇರಾ 

ಹಾಕೋಣ ಹೂವಿನ ಹಾರ

ಕಳೆವುದು ಪಾಪದೆಲ್ಲ ಭಾರ!

 

ಕನ್ನಡಕೆ ಎಲ್ಲರಿಗೂ ಸ್ವಾಗತಂ

ಹೃದಯ ಭಾಷೆಯಿದು ಹಿತಂ

ಕನ್ನಡವೇ ಜಗದಲಿ ಸಮ್ಮತಂ

ಇದಾಗಲಿ ನಮ್ಮ ವಿಶ್ವಮತಂ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್