ಕನ್ನಡ ರಾಜ್ಯೋತ್ಸವ ವಿಶೇಷ...
ಬರಹ
ಕನ್ನಡ ರಾಜ್ಯೋತ್ಸವವನ್ನು ನಮ್ಮ ಟಿ.ವಿ.ಹಾಗೂ ಎಫ್.ಎಂ.ನಿರೂಪಕರು ನಡೆಸಿಕೊಟ್ಟರೆ ಹೇಗಿರಬಹುದು ಎಂದು ಸಣ್ಣ ಉದಾಹರಣೆ...
ಮೊದಲಿಗೆ ನಮ್ಮ ಹಳ್ಳಿ ಹೈದ ನಿರೂಪಕ : ಲೇಡೀಸ್ ಅಂಡ್ ಜೆಂಟಲ್ಮೆನ್ ಟುಡೇ ಇಸ್ ಕನ್ನಡ ರಾಜ್ಯೋತ್ಸವ...ನಾವು ನೀವು ಅಷ್ಟೇ ಅಲ್ಲ ದಿ ಹೋಲ್ ಕರ್ನಾಟಕ ಹೆಮ್ಮೆ ಪಡುವಂತ ದಿನ..ಈ ದಿನ ಈ ಪ್ರೋಗ್ರಾಮ್ ನಡೆಸಿಕೊಡಲು ನನ್ನನ್ನು ಕರೆದಿರುವುದಕ್ಕೆ ಐ ಆಮ್ ಸೊ ಹ್ಯಾಪ್ಪಿ. ಕನ್ನಡ ನಾಡಲ್ಲಿ ಹುಟ್ಟಿರೋದಕ್ಕೆ ಐ ಫೀಲ್ ವೆರಿ ಪ್ರೌಡ್..ಈಗ ಇಂದಿನ ಸ್ಪೆಷಲ್ ಗೆಸ್ಟ್ ಗಳನ್ನು ಸ್ಟೇಜ್ ಗೆ ಕರೆಯೋಣ...ಮೊದಲಿಗೆ ತಮಿಳು ಚಿತ್ರರಂಗದ ಖ್ಯಾತ ನಟ xxxx...ಇವರ ಹಲವು ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗಿವೆ...ನಂತರ ತೆಲುಗಿನ ಖ್ಯಾತ ನಟಿ xxxx...ಇವರು ಬೆಂಗಳೂರಲ್ಲೇ ಹುಟ್ಟಿ ಬೆಳೆದು ಮೌಂಟ್ ಕಾರ್ಮೆಲ್ ಕಾಲೇಜ್ ಅಲ್ಲಿ ಓದಿ ಈಗ ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಭಾರಿ ಫೇಮಸ್ ಆಗಿರೋದಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು..ನಂತರದ ಗೆಸ್ಟ್ ಹಿಂದಿಯ ಪಾಪ್ ಸಿಂಗೆರ್ xxxxx...ಇವರು ಕನ್ನಡದಲ್ಲಿ ಎಷ್ಟೋ ಹಾಡುಗಳನ್ನು ಹಾಡಿ ಇಲ್ಲೂ ಫ್ಯಾನ್ ಗಳನ್ನು ಸಂಪಾದಿಸಿದ್ದಾರೆ...ಪ್ಲೀಸ್ ಗಿವ್ ದೆಮ್ ಎ ಸ್ಟಾನ್ಡಿಂಗ್ ಒವೆಶನ್...ಈಗ ಮುಂದಿನ ಕಾರ್ಯಕ್ರಮ ನಡೆಸಿಕೊಡಲು ದಿ ಒನ್ ಅಂಡ್ ಓನ್ಲಿ ಸ್ವಯಂವರ ಖ್ಯಾತಿಯ ನಿರೂಪಕಿ ಅವರನ್ನು ವೆಲ್ಕಮ್ ಮಾಡುತ್ತಿದ್ದೇನೆ...
ಹಾಯ್ ಗುಡ್ ಇವಿನಿಂಗ್ ಎವೆರಿಬಡಿ...ಇಲ್ಲಿ ಸ್ಟೇಜ್ ಮೇಲೆ ಇರೋ ಎಲ್ಲ ಗೆಸ್ಟ್ ಗಳಿಗೂ ವಂದನೆಗಳು...ಕನ್ನಡ ನಾಡು ನುಡಿಯ ಬಗ್ಗೆ ಮಾತಾಡಲು ಐ ಡೋಂಟ್ ಹಾವ್ ಎನಿ ವರ್ಡ್ಸ್...ಈಗ ತಮಿಳಿನ ಖ್ಯಾತ ನಟ ನಮ್ಮ ನಾಡಿನ ಬಗ್ಗೆ ಕೆಲವು ಮಾತುಗಳನ್ನು ಆಡಬೇಕೆಂದು ಕೋರಿಕೊಳ್ಳುತ್ತೇವೆ...ಎಲ್ಲರಿಕು ನಮಸ್ಕಾರ...ಏನಕ್ಕು ಜಾಸ್ತಿ ಕನ್ನಡ ತೆರಿಯಾದು..ಆತರು ಇವತು ಇವತು (ಪಕ್ಕದಲ್ಲಿ ನಿಂತಿದ್ದವರ ಬಳಿ ಏನೆಂದು ಕೇಳಿ) ಹ ಅತೆ ಅತೆ ಕನ್ನಡ ರಜೋಸ್ತವ...ಎಂದು ನರಿಯ ತಮಿಳ್ ಪಿಚ್ಚರ್ ಕನ್ನಡಲಿ ರೀಮೇಕ್ ಮಾಡಿತಾರೆ ಅದಕ್ಕು ನಂದ್ರಿ...ಎಲ್ಲರಿಕು ನಮಸ್ಕಾರ....ಈಗ ತೆಲುಗಿನ ಖ್ಯಾತ ನಟಿ ನಮ್ಮ ಕನ್ನಡದವರೇ ಆದ xxxx ಅವರು ಒಂದು ನಾಲ್ಕು ಮಾತು ಆಡಬೇಕೆಂದು ಕೇಳಿಕೊಳ್ಳುತ್ತೇವೆ...ಗುಡ್ ಇವಿನಿಂಗ್ ಲೇಡಿಸ್ ಅಂಡ್ ಜೆಂಟಲ್ಮೆನ್ ನನು ಇಲ್ಲೇ ಉತ್ತಿ ಬೆಳೆದೆ...ಹಾದರೆ ನನಗೆ ಕನ್ನಡ ಹಷ್ಟು ಚೆನ್ನಾಗಿ ಬರಲ್ಲ...ಹಿವತ್ತು ಕನ್ನಡ ರಾಜೋಸ್ತವ...ಐ ಆಮ್ ವೆರಿ ಹ್ಯಾಪ್ಪಿ....ಹೇನು ಮಾತಾಡಬೇಕೆಂದು ನನಗೆ ಗೊತ್ತು ಹಾಗ್ತಿಲ್ಲ...ಹದಕ್ಕೆ ಎಲ್ಲರಿಗು ನಮಸ್ಕಾರ....ಥಾಂಕ್ ಯೂ ವೆರಿ ಮಚ್..ಈಗ ಮುಂದಿನ ಕಾರ್ಯಕ್ರಮ ನಡೆಸಿಕೊಡಲು ನಮ್ಮ ಕನ್ನಡ ಎಫ್.ಎಂ.ನ ಫೇಮಸ್ RJ blade ಬಾಬ್ಬಿ ಅವರು ಬರುತ್ತಿದ್ದಾರೆ...
(ಇವರು ವಿದೇಶದಿಂದ ಬಂದವರ ಹಾಗೆ ಮಾತಾಡುತ್ತಾರೆ...ನೀವು ಅದೇ ರೀತಿಯಲ್ಲಿ ಓದಿಕೊಳ್ಳಿ) ...ಗುಡ್ ಇವಿನಿಂಗ್ ಕರ್ನಾಟಕ...ಟುಡೇ ಐ ಆಮ್ ವೆರಿ ಹ್ಯಾಪ್ಪಿ ಯು ನೋ ವೈ ಇವತ್ತು ಇಷ್ಟೊಂದು ಜನ ಸೆಲೆಬ್ರಿಟಿ ಗಳನ್ನು ಮೀಟ್ ಮಾಡಿದ್ದಕ್ಕೆ...ಇವತ್ತು ಕನ್ನಡಕ್ಕಾಗಿ ಎಷ್ಟೋ ಜನ ದುಡಿತ ಇದ್ದಾರೆ...ಅವರಲ್ಲಿ ಪ್ರಮುಖರು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಸೋನು ನಿಗಮ್ ಅವರು, ಶ್ರೇಯ ಘೋಸಲ್ ಅವರು, ಕುನಾಲ್ ಗಾಂಜಾವಾಲ ಅವರು ಇನ್ನು ಹಲವರು...ಇಂದಿನ ಈ ಪ್ರೋಗ್ರಾಮ್ ಗೆ ಅವರನ್ನೆಲ್ಲ ಕರೆದು ಸನ್ಮಾನಿಸಿದ್ದರೆ ಐ ವಿಲ್ ಬಿ ಸೊ ಹ್ಯಾಪ್ಪಿ...ಈಗ ಇಲ್ಲಿನ ಜನರ ಎಂಟರ್ಟೆನ್ಮೆಂಟ್ ಗಾಗಿ ತಮಿಳು ನಟ xxxx ಅವರು ಒಂದು ತಮಿಳು ಹಾಡು, ತೆಲುಗಿನ ನಟಿ ಒಂದು ತೆಲುಗು ಹಾಡು ಹಾಗು ನಮ್ಮ ಹಿಂದಿ ಗಾಯಕ ಅವರು ಒಂದು ಹಿಂದಿ ಹಾಡನ್ನು ಹೇಳಬೇಕಾಗಿ ಕೋರಿಕೊಳ್ಳುತ್ತೇನೆ...(ಅವರ ಹಾಡಿನ ನಂತರ) ಈಗ ವಂದನಾರ್ಪಣೆ ನಮ್ಮ U2 ನಿರೂಪಕಿಯಿಂದ...
ಹೆಲ್ಲರಿಗೂ ನಮಸ್ಕಾರ...ಹಿವತ್ತು ಕನ್ನಡ ರಾಜೋಸ್ತವ...ನಮ್ಮ ನಾಡು ನುಡಿಯ ಬಗ್ಗೆ ಹಿಷ್ಟು ಒತ್ತು ಮಾತಾಡಿದ ನಮ್ಮ ಹತಿಥಿಗಳಿಗೆ ಆರ್ದಿಕ ವಂದನೆಗಳು...ಹಲ್ಲಿಂದ ಹಿಲ್ಲಿಗೆ ಬಂದು ನಮ್ಮ ಹಾದರ ಹಾತಿಥ್ಯಗಳನ್ನು ಸ್ವೀಕರಿಸಿ ಕನ್ನಡ ಜನತೆಯನ್ನು ತಮ್ಮ ಅತ್ಯುತ್ತಮ ಆಡುಗಳಿಂದ ಸಂತೋಷ ಪಡಿಸಿದಕ್ಕಾಗಿ ಮತ್ತೊಮ್ಮೆ ನಮಸ್ಕಾರಗಳು..."ಜೈ ಕರ್ನಾಟಕ", "ಸಿರಿಗನ್ನಡಂ ಗೆಲ್ಗೆ" "ಸಿರಿಗನ್ನಡಂ ಬಾಳ್ಗೆ"..
(ಗೆಳೆಯರೇ ಕನ್ನಡವನ್ನು ಕನ್ನಡ ಮಾಧ್ಯಮದವರೇ ಹೇಗೆ ಕೊಲೆ ಮಾಡುತ್ತಿದ್ದಾರೆ ಎಂದು ನೆನೆದು ಖೇದ ಉಂಟಾಗುತ್ತದೆ...ಇನ್ನಾದರೂ ಕನ್ನಡ ಮಾಧ್ಯಮಗಳಲ್ಲಿ ಕನ್ನಡವನ್ನೇ ಬಳಸಿ ಕನ್ನಡವನ್ನು ಉಳಿಸಲಿ ಎಂದು ಆಶಿಸುತ್ತೇನೆ...)