ಕನ್ನಡ ರಾಜ್ಯೋತ್ಸವ ೨೦೨೩
ಕವನ
ಕನ್ನಡದ ಇಂಪು ಇಳಿಸಂಜೆ ಮುಗಿಲಷ್ಟು ತಂಪು ।।೨।।
ಹರಡಲಿ ಎಲ್ಲ ಕಡೆ ನಮ್ಮ ಕನ್ನಡದ ಸೊಗಡಿನ ಕಂಪು
ನಮ್ಮ ಕನ್ನಡಕ್ಕೆ ೨೦೦೦ ವರ್ಷಗಳ ಇತಿಹಾಸ
ಅನ್ಯಭಾಷೆಯವರೊಂದಿಗೆ ಅವರವರ ಭಾಷೆಯಲ್ಲಿಯೆ-
ಸ್ಪಂದಿಸುವೆವು ಬೀರುತ್ತಾ ಮಂದಹಾಸ
ನಮ್ಮ ಕನ್ನಡ ಕರ್ನಾಟಕಕ್ಕೇ ಮಾತ್ರ ಜ್ಞಾನಪೀಠ ಪ್ರಶಸ್ತಿ ಎಂಟು
ಇಲ್ಲಿ ಕವಿಗಳಿಗೆ, ಸಾಹಿತಿಗಳಿಗೆ ಹಾಗೂ ಕಲೆಗೆ ಅವಿನಾಭಾವ ನಂಟು
ಉದ್ಯೋಗ ಕಲ್ಪಿಸಿದ, ಎಷ್ಟೋ ಚರಿತ್ರೆ ಮೂಡಿಸಿದ ಹೆಮ್ಮೆ ನಮಗುಂಟು
ಲೆಕ್ಕಕ್ಕೆ ಸಿಗದಷ್ಟಿವೆ ಪ್ರವಾಸ ಸ್ಥಳ, ಪುಣ್ಯಕ್ಷೇತ್ರ
ಆಚಾರ ವಿಚಾರಗಳಲ್ಲಿ ವಿಭಿನ್ನ ವಿಚಿತ್ರ ಪಾತ್ರ
ನಂಬುವೆವು ಇದಕ್ಕೆಲ್ಲ ದೈವದ ಕೈಯಲ್ಲಿದೆ ಸೂತ್ರ
ಇವೆಲ್ಲವುಗಳ ಉಳಿಸಲು ಬೇಕಾಗಿರುವುದು -
ನಮ್ಮೆಲ್ಲರ ಒಗ್ಗಟ್ಟು ಮಾತ್ರ
-ಬೋ.ಕು.ವಿ