ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

Comments

ಬರಹ

ಕನ್ನಡ-ಸಕ್ಕದದ ನಂಟು ಹೇಗಿರಬೇಕು?

ಈಗಾಗಲೇ ಕನ್ನಡ-ಸಕ್ಕದದ ಬಗ್ಗೆ ಹಲವು ಸಾರಿ ಮಾತುಕತೆಗಳಾಗಿವೆ. ಕನ್ನಡ ಮತ್ತು ಸಕ್ಕದದ ನಂಟು ಹೇಗಿರಬೇಕೆಂದು ಈ ಹಾಡಿನ ಮೂಲಕ ತಿಳಿಸಲು ಮೊಗಸುವೆ.
ಇದು ಹೆಸರುವಾಸಿಯಾದ ಬರಹಗಾರ ಜಯಂತ ಕಾಯ್ಕಿಣಿಯವರು ಬರೆದಿರುವ ಹಾಡು, 'ಮಿಲನ' ಸಿನಿಮಾದ್ದು. ನಮ್ಗೆಲ್ಲರಿಗೂ ಗೊತ್ತೇ ಇದೆ ಜಯಂತ್ ಅವರ ಎಲ್ಲ ಹಾಡುಗಳು
ಎರ್ರಾಬಿರ್ರಿ ಮಂದಿಯ ಮನಗೆದ್ದಿವೆ. ಅದನ್ನ ವಸಿ ಹತ್ತಿರದಿಂದ ಗಮನಿಸಿದರೆ ನಮಗೆ ಕನ್ನಡ-ಸಕ್ಕದ ಬಳಕೆ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಈ ಹಾಡು ಒಳ್ಳೆ ಮಾದರಿ.

ಕಿವಿಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೇಬೇಕೆಂದು
ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೇಬೇಕಿಂದು

ಹಸಿರಾಗಿದೆ ಜೀವವು ನಿನಗಾಗಿ
ನಸುನಗುತಲೇ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ

ಬಾಗಿಲಿನಾಚೆಗೆ ತಾ ಬಂದು ಕೂಗಿದೆ ಬಾಳು 'ಬಾ' ಎಂದು
ಸಂತಸದಿಂದ 'ಓ' ಎಂದು ಓಡಲೆ ಬೇಕು ನೀನಿಂದು
ಸಾವಿರ ಕಣ್ಣಿನ ನವಿಲಾಗಿ ನಿಂತಿದೆ ಸಮಯ ನಿನಗೆಂದು
ಕಣ್ಣನು ತೆರೆದು ಹಗುರಾಗಿ ನೋಡಲೇ ಬೇಕು ನೀ ಬಂದು

ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
ನಿನ್ನೆಯ ಪಾಲಿನ ಸಂಗೀತ ಹಾಡಲೇ ಬೇಕು ನೀನಿಲ್ಲಿ
ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
ನಿನ್ನೆಯ ಪಾಲಿನ ಈ ಆಟ ಆಡಲೇ ಬೇಕು ನೀನೀಗ

೧) ಮೇಲಿನ ಹಾಡಿನಲ್ಲಿ ಕನ್ನಡದ್ದೆ ಆದ ಸರಿ ಸುಮಾರು ೭೫ ಪದಗಳಿವೆ, ಮತ್ತು ಸಕ್ಕದದ ೫ ಪದಗಳಿವೆ (ಜೀವ, ಸಂಗೀತ, ಸಮಯ, ನದಿ, ಚಲಿಸು = 5/75 = 6.6% ಸಕ್ಕದ)
೨) ಯಾವುದೇ ಮಹಾಪ್ರಾಣ ಮತ್ತು ಶ,ಷ,ಕ್ಷ ಎಂಬ ಕರ್ಕಶದಿಂದ ಕೂಡಿದ ಪದಗಳನ್ನು ಅವರು ಬಳಸಿಲ್ಲ.
೩) ಮೇಲಿನ ಹಾಡು ಅನಿಸು/ಬಾವದಲ್ಲೂ ಕೂಡ ಕೂಡಲೆ ನಿಮ್ಮ ಮನ ಗೆಲ್ಲುತ್ತದೆ. ಇದೇ ಕನ್ನಡದ ಸೊಗಡಿನ ಹೆಚ್ಚುಗಾರಿಕೆ.

ಇದನ್ನೆ ಶಂಕರಬಟ್ರು, ಸಿರಿವಿಜಯ(ಕವಿರಾಜಮಾರ್ಗ) ಇವರೆಲ್ಲ ಹೇಳಿರುವುದು. ಇದಕ್ಕಿಂತ ಇನ್ನು ಸುಲಬ ತೆರದಲ್ಲಿ ಕನ್ನಡ-ಸಕ್ಕದ ಬಳಕೆ ಹೇಗಿರಬೇಕೆಂದು ಬಿಡಿಸಿ ಹೇಳಕ್ಕೆ ನನಗೆ ಬರಲ್ಲ :(

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet