ಕಪಿಲಸಿದ್ಧ "ಬೋವಿ" ಮಲ್ಲಿಕಾರ‍್ಜುನ!

ಕಪಿಲಸಿದ್ಧ "ಬೋವಿ" ಮಲ್ಲಿಕಾರ‍್ಜುನ!

ಕಪಿಲಸಿದ್ಧ “ಬೊವಿ” ಮಲ್ಲಿಕರ್ಜುನ!


ಶರಣಶ್ರೇಷ್ಠ ಸಿದ್ಧರಾಮರ ಜಯಂತಿ ಹೆರಿನಲ್ಲಿ, ಸರಕಾರ ಮೈಸೂರಿನಲ್ಲಿ “ಬೊವಿ” ಜನಾಂಗದ ಸಮ್ಮೇಳನ ನಡೆಸಹೋಗಿತ್ತಿರುವ ಬಗ್ಗೆ ವಿಜಯ ಕರ್ನಾಟಕ ದಲ್ಲಿ ಮಾಹಿತಿ ಪ್ರಕಟವಗಿದೆ.


ಕಾಯಕಯೋಗಿ ಸಿದ್ದರಾಮಗೆ ಜಾತಿ ಗೋಡೆ ಸರಿಯೇ? ಎಂದು ಚೀ. ಜ. ರಾಜೀವ ಪ್ರಶ್ನಿದ್ದಾರೆ. ಜಾತಿ ಗೋಡೆ ಸುತರಾಂ ಸರಿಯಲ್ಲ ಎನ್ನುವುದೇ ನೈಜ ಕಳಕಳಿವಂತರೆಲ್ಲರ ಉತ್ತರವಿದ್ದೀತು!


ಈ ಗೋಡೆ ವೋಟಿನ ರಾಜಕಾರಣದ್ದು. ವೋಟಿನ ರಾಜಕಾರಣವೇ ಸಂಪೂರ್ಣವಾಗಿ ಸಂಸ್ಕೃತಿಹೀನವಾದ್ದು. ಸಾಮಾಜಿಕ ಸಂಬಂಧಗಳನ್ನಾಗಲೀ, ಮನುಷ್ಯತ್ವದ ಮೌಲ್ಯಗಳನ್ನಾಗಲೀ ಅರ್ಥ ಮಾಡಿಕೊಳ್ಳುವ ವಿದ್ಯಾ ಸಂಸ್ಕಾರವೂ, ಜೀವಪರ ಚೈತನ್ಯವೂ ಅದಕ್ಕೆಂದೂ ಇರುವುದಿಲ್ಲ. ಚುನಾವಣೆಯೆಂಬ ಮಹಾ ಸಂಗ್ರಾಮದಲ್ಲಿ ಹಣ, ಹೆಂಡ, ಜಾಳು ಸೀರೆ-ರವಿಕೆಗಳಿಂದ ನಿರ್ದಿಷ್ಟ ಪ್ರಮಾಣದ ವೋಟ್ ಬುಕ್ ಮಾಡಿಕೊಂಡ ನಂತರ, ಗೆಲುವಿವ ಸೂಕ್ಷ್ಮ ಮಾರ‍್ಜಿನ್‌ಗಾಗಿ ಬೋವಿ, ಕುರುಬ, ಹಕ್ಕಿ-ಪಿಕ್ಕಿಯೆಂದು ಸಮಾಜವನ್ನು ಒಡೆದು, ಛಿದ್ರಗಳನ್ನು ಬಿಗಿಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವುದೇ ಇಂದಿನ ಚುನಾವಣಾ ರಣತಂತ್ರ. ಅಂತಹ ಲೆಕ್ಕಾಚಾರಸ್ಥರಿಗೆ ಕನಕದಾಸರು, ಮಾಚಿದೇವರು, ಸಿದ್ದರಾಮಣ್ಣ ಇತ್ಯಾದಿಗಳು ಈ ರಾಜಕೀಯದ ಅಮೂರ್ತ ಏಜಂಟರಾದರೆ ಆಶ್ಚರ‍್ಯವಿಲ್ಲ!


ಆಚಾರ‍್ಯ ಪರಂಪರೆಯ ವೈದಿಕ ಮತ್ತು ವೇದಾತೀತ ಗುರುಮಠ-ಪೀಠಪರಂಪರೆಗಳು, ಈಗಾಗಲೇ ಒಂದಿಲ್ಲೊಂದು ಪಕ್ಷ-ಪುಢಾರಿಗೆ ಬುಕ್ ಆಗಿದ್ದು ರಾಜಕೀಯ ಗಾಳಿಗೆ ತಕ್ಕಂತೆ ನಿಷ್ಠೆ ಬದಲಿಸುತ್ತಾ ಹೋಗುತ್ತಿರುವುದು ನಮ್ಮ ಕಣ್ಣಮುಂದಿನ ಸತ್ಯ! ಈ ರಾಜಗುರುಗಳು, ಅಂದೂ ಅಷ್ಟೆ, ಇಂದೂ ಅಷ್ಟೆ, ಎಂದಿಗೂ ಪ್ರಜಾಪರಂತೂ ಅಲ್ಲ. ಧರ್ಮ ಎನ್ನುವ ಗೊಗ್ಗಯ್ಯನನ್ನು ಕೈವಶದಲ್ಲಿಟ್ಟುಕೊಂಡು, ಒಡೆಯರ ಅನುಕೂಲಕ್ಕೆ ತಕ್ಕಂತೆ ಸಮಾಜದ Traffic ನಿಯಂತ್ರಿಸುವವರು! ಧರ್ಮದ ಈ ಪಾಳೇಗಾರಿಕೆಯನ್ನು ಸಮರ್ಥವಾಗಿ ಪ್ರತಿಭಟಿದ್ದರಿಂದಲೇ ಕನಕದಾಸ, ಸಿದ್ದರಾಮ ಇತ್ಯಾದಿ ಪ್ರಭೃತ್ತಿಗಳು ದೈವೀಕವೆನಿಸಿದ್ದು; ಜನಸಾಮಾನ್ಯರಿಗೆ ಆರಾಧ್ಯರಾದ್ದು! ಅಯೋಗ್ಯರ ಕಪಿಮುಷ್ಟಿಯಲ್ಲಿ ಆ ಹೆಸರುಗಳೇ ಅoಡಿಡಿuಠಿಣ ಆಗಿಹೋಗಿದ್ದ ಶಿವ, ವಿಷ್ಣುಗಳನ್ನು ವಿಮುಕ್ತಿಗೊಳಿಸಿ, ಆ ದೈವೀಕ ದಯೆ-ಕರುಣೆಗಳನ್ನು ಶ್ರದ್ಧಾವಂತರೆಲ್ಲರಿಗೆ ಸಮಾನವಾಗಿ ಅನುಭವಸಿದ್ಧಗೊಳಿಸಿದ ಕ್ರಾಂತಿ ಹರಿದಾಸರದ್ದು; ಶಿವಶರಣರದ್ದು!


ಕೆಲ ಹರಿದಾಸರ ಬಹುತೇಕ ಹಾಡುಗಳನ್ನೂ, ಶಿವಶರಣರ ಬಹಳಷ್ಟು ವಚನಗಳನ್ನೂ ವಸ್ತುನಿಷ್ಠವಾಗಿ, ಆತ್ಮನಿಷ್ಠವಾಗಿ ಅಭ್ಯಾಸ ಮಾಡುವ ಪ್ರಾಮಾಣಿಕ ಅಧ್ಯಯನಶೀಲರಿಗೆ ಇದು ಅನುಭವಕ್ಕೆ ಬರುತ್ತದೆ. ಇದರಿಂದಾಗಿ ನಿಜವಾದ ಜ್ಞಾನ, ಭಕ್ತಿ, ವೈರಾಗ್ಯಗಳನ್ನುಂಮಾಡಿಕೊಳ್ಳುವ ಅವರು, ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ; ಬೆಲ್ಲ ಸವಿದಾ ಮೂಗನ ಅನುಭಾವದಂತೆ ಇದ್ದುಬಿಡುತ್ತಾರೆ. ಅದಾಗಲಾರದ ರಾಜಕೀಯ ವಿದ್ವನ್ಮಣಿಗಳು ತಮ್ಮ ತಮ್ಮ ಬಾಸ್ಗಳ ರಾಜಕೀಯ ತೆವಲಿಗೆ ಹೊಂದುವಂತೆ Theoryಗಳನ್ನು ಹೊಸೆಯುತ್ತಾ ಐಹಿಕ ಪುಣ್ಯ ಸಂಪಾದಿಸಿಕೊಂಡಿರುತ್ತಾರೆ!