ಕರುನಾಡು ಉಗಮವಾಗಿ ೫೦ ವರ್ಷ ಸಂದ ಹಾಗೂ ಕರುನಾಡಿನ , ನಮ್ಮ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಬಂದ ಈ ಸಂದರ್ಬದಲ್ಲಿ ಅಣ್ಣಾವ್ರು ಇದ್ದಿದ್ದರೆ?

ಕರುನಾಡು ಉಗಮವಾಗಿ ೫೦ ವರ್ಷ ಸಂದ ಹಾಗೂ ಕರುನಾಡಿನ , ನಮ್ಮ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಬಂದ ಈ ಸಂದರ್ಬದಲ್ಲಿ ಅಣ್ಣಾವ್ರು ಇದ್ದಿದ್ದರೆ?

ಬರಹ

ಕರುನಾಡು ಉಗಮವಾಗಿ ೫೦ ವರ್ಷ ಸಂದ ಹಾಗೂ ಕರುನಾಡಿನ , ನಮ್ಮ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಬಂದ ಈ ಸಂದರ್ಬದಲ್ಲಿ ಅಣ್ಣಾವ್ರು ಇದ್ದಿದ್ದರೆ ಈ ೨ ಸಂದರ್ಬದಲ್ಲಿ ನಮ್ಮ ಖುಷಿ ಇನ್ನೊ ಅರ್ಥಪೂರ್ಣ ಆಗಿರುತ್ತಿತ್ತು ಅಲ್ಲವೇ?

ಅವರಿಗೆ ಕರುನಾಡ/ ಕನ್ನಡ ನುಡಿ ಮೇಲಿದ್ದ ಅಭಿಮಾನ , ಗೊತ್ತಿದ್ದದ್ದೇ.

ಅದರೂ ನನ್ನ ಪ್ರಕಾರ (ತುಂಬಾ ಜನರ) ಅಣ್ಣಾವ್ರು ಈಗ ಇದ್ದಿದ್ದರೆ ಈ ಎರಡು ಸಂದರ್ಬದಲ್ಲಿ ಕಳೆಯೇ ಇರುತ್ತಿತ್ತು.

ಈವತ್ತಿನ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಕನ್ನಡ ನಾಡು ನುಡಿಗೆ ಸಂಬಂದಿಸಿದ ವಿಚಾರದಲ್ಲಿ ನಡೆಯುವ ಸಭೆ ಮುಷ್ಕರಕ್ಕೆ ಬೆಂಬಲಿಸುತ್ತಿಲ್ಲ ,
ಹೀಗಾಗಿ ಈ ಮೇಲಿನ ಹೋರಾಟ ಎನ್ನುವುದು ಕೇವಲ ಕರ್ನಾಟಕ ರಕ್ಷಣಾ ವೇದಿಕೆಗೆ ಬಿಟ್ಟುಬಿಟ್ಟು ಅರಾಮವಗಿದ್ದೇವೆ ,

ಈವತ್ತಿನ ಪರಿಸ್ಥಿತಿಯಲ್ಲಿ ಯಾರೊಬ್ಬರಿಗೂ ಅಣ್ಣಾವ್ರಿಗೆ ಇದ್ದಂತ ಜನರನ್ನು ಈ ತರದ ಒಂದು ಒಳ್ಳೆ ಕೆಲಸಕ್ಕಾಗಿ ಸೇರಿಸುವ ಮಾಂತ್ರಿಕ ಶಕ್ತಿ ಇಲ್ಲ.

ಈಗ ಕನ್ನಡ ನಾಡು ನುಡಿಗೆ ಮತ್ತೆ ಮಾಂತ್ರಿಕ ಶಕ್ತಿ ಕೊಡಬಲ್ಲ ಜನರನ್ನ ಸೆಳೆಯಬಲ್ಲ ಒಬ್ಬ ವ್ಯಕ್ತಿ/ಶಕ್ತಿಯ ಅವಶ್ಯಕತೆ ಇದೆ,

ನೀವೇನಂತೀರಾ?