ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ಪ್ರಗತಿ'ಗೆ ಪೂರಕವಾಗಿವೆಯೇ; ಮಾರಕವಾಗಿವೆಯೇ!?
ಕಳೆದ 25 ವರ್ಷಗಳಿಂದ ನಾನು ಮುದ್ರಣ ಮಾಧ್ಯಮ ವೃತ್ತಿಯಲ್ಲಿ ಇದ್ದೇನೆ. ಹೀಗಾಗಿ ವೈಯಕ್ತಿಕವಾಗಿ ಮಾಧ್ಯಮಗಳ ಕುರಿತು ನನಗೂ ಒಂದು ಖಚಿತ ಪರಿಕಲ್ಪನೆ ಹಾಗೂ ಆಶಯವಿದೆ. ಮೊದಲು ಅದನ್ನು ಹೇಳಿಬಿಡುತ್ತೇನೆ. ನಂತರ ಚರ್ಚೆ ಆರಂಭಿಸಬಹುದು:
ನನ್ನ ಪ್ರಕಾರ ಸಮೂಹ ಮಾಧ್ಯಮಗಳ ಮೂಲಕ `ನಿಜವಾದ ಪ್ರಗತಿ' ಸಾಧಿಸಬೇಕಾದ ಪರಿಸ್ಥಿತಿ ಸದ್ಯಕ್ಕೆ ತೀರಾ ಹದಗೆಟ್ಟಿದೆ. ದಿನೇ ದಿನೇ ಮೌಲ್ಯಗಳ ಕುಸಿತಕ್ಕೆ ಈ ಸಮೂಹ ಮಾಧ್ಯಮಗಳೂ ತಮ್ಮದೇ ಆದ ಪಾಲು ನೀಡುತ್ತಿವೆ. ದೇಶದ ಮಾನವ ಸಂಪನ್ಮೂಲದ ಏಳಿಗೆಗೆ ತಾನು ಏನು ಮಾಡಬೇಕು? ಸಮೂಹ ಮಾಧ್ಯಮಗಳ ಸತ್ಪರಿಣಾಮಗಳೇನು; ದುಷ್ಪರಿಣಾಮಗಳೇನು? ಸತ್ಪರಿಣಾಮ ಉಂಟಾಗಲು ತಾನು ಏನು ಮಾಡಬೇಕು? ಮುಂದಿನ ಪೀಳಿಗೆಗೆ ಯಾವ ಮಾರ್ಗ ಹಾಕಿಕೊಡಬೇಕು?- ಇತ್ಯಾದಿ ಪರಿಜ್ಞಾನವೆಲ್ಲ ಈಗ ಮಾಯವಾಗಿವೆ.
ದಶಕಗಳ ಹಿಂದಷ್ಟೇ ಪತ್ರಿಕೆಯಲ್ಲಿ ಯಾವುದಾದರೂ ಸಂಬಂಧಪಟ್ಟ ಸುದ್ದಿ ಪ್ರಕಟವಾದರೆ ಜನ ಸಂಭ್ರಮಿಸುತ್ತಿದ್ದರು; ಇಲ್ಲವೇ ಹೆದರುತ್ತಿದ್ದರು. ಈಗ ಪತ್ರಿಕೆಗಳಲ್ಲಿ ಅಥವಾ ಟಿ.ವಿ.ಗಳಲ್ಲಿ ಏನೇ ಬಿತ್ತರವಾದರೂ ಜನರ ಪ್ರತಿಕ್ರಿಯೆ ನೀರಸ ಹಾಗೂ ತನಗೆ ಸಂಬಂಧವೇ ಇಲ್ಲವೆಂಬಂತೆ ಸಿನಿಕವಾಗುತ್ತಿದೆ. ಟಿ.ವಿ.; ಸಿನಿಮಾಗಳಿಂದ ಎಳೆಯ ಮನಸ್ಸುಗಳ ಮೇಲಾಗುತ್ತಿರುವ ದುಷ್ಟರಿಣಾಮಕ್ಕೆ ಟಿ.ವಿ./ಸಿನಿಮಾಗಳು ಕಾರಣವೋ ಅಥವಾ ಅವುಗಳ ವೀಕ್ಷಕರ ಪ್ರತ್ಯಕ್ಷ-ಪರೋಕ್ಷ ಅನುಸರಣೆಯೋ? ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸಮೂಹ ಮಾಧ್ಯಮಗಳ ಪಾತ್ರವೇನು? ಸಮೂಹ ಮಾಧ್ಯಮಗಳು ನೀಡುತ್ತಿರುವ `ಆದ್ಯತೆ'ಗಳ ಕುರಿತು ನಿಮ್ಮಗಳ ಅಭಿಪ್ರಾಯಗಳೇನು?
ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ಪ್ರಗತಿ'ಗೆ ಪೂರಕವಾಗಿವೆಯೇ; ಮಾರಕವಾಗಿವೆಯೇ!?
Comments
ಉ: ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ...
In reply to ಉ: ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ... by hariharapurasridhar
ಉ: ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ...
ಉ: ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ...
In reply to ಉ: ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ... by bhasip
ಉ: ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ...