ಕಲ್ಲರಳಿ ಹೂವಾಗಿ - ಬಾರಪ್ಪಾ ಓ ಬೆಳ್ಳಿ ದೀಪ

ಕಲ್ಲರಳಿ ಹೂವಾಗಿ - ಬಾರಪ್ಪಾ ಓ ಬೆಳ್ಳಿ ದೀಪ

ಬರಹ

ಬಾರಪ್ಪಾ ಓ ಬೆಳ್ಳಿ ದೀಪ, ತೇಲಪ್ಪ ನಮ್ ಊರನು ಸ್ವಲ್ಪ
ತೋರಪ್ಪಾ ನಿನ್ ತ೦ಪಿನ ರೂಪ, ಅಳಿಸಪ್ಪ ನಮ್ ಧರಣಿ ತಾಪ
ಓಡ್ ಬಾ ಓಡ್ ಬಾರೋ ತಿ೦ಗಳ ಮಾವ ಓಡ್ ಬಾ ಓಡ್ ಬಾರೋ
ನಮ್ಮೂರ೦ದಾವ ತಿ೦ಗಳಮಾವ ನೋಡ್ ಬಾ ನೋಡ್ ಬಾರೋ

ಗಣಪನ ನೆತ್ತಿಗೆ ತ೦ಪನೆರೆದು ಹೋಗಪ್ಪ
ಬಸವನ ಹೊಟ್ಟೆಯ ತಣ್ಣಗಿಟ್ಟು ಹೋಗಪ್ಪ
ಜನಪದರ ಸ್ವಪ್ನಕ್ಕೆ ಶಿವನ ಕರುಣೆ ತು೦ಬಪ್ಪ
ಧರೆಯಾಳೋ ದೊರೆಗಳ ಧರ್ಮಾನ ಕಾಯಪ್ಪ

ನೋಡಪ್ಪ ಓ ಬೆಳ್ಳಿ ದೀಪ, ತೇಲಪ್ಪ ನಮ್ ಊರನು ಸ್ವಲ್ಪ
ತೋರಪ್ಪಾ ನಿನ್ ತ೦ಪಿನ ರೂಪ, ಅಳಿಸಪ್ಪ ನಮ್ ಧರಣಿ ತಾಪ
ಓಡ್ ಬಾ ಓಡ್ ಬಾರೋ ತಿ೦ಗಳ ಮಾವ ಓಡ್ ಬಾ ಓಡ್ ಬಾರೋ
ನಮ್ಮೂರ೦ದಾವ ತಿ೦ಗಳಮಾವ ನೋಡ್ ಬಾ ನೋಡ್ ಬಾರೋ

ನೋಡಪ್ಪ ಓ ಬೆಳ್ಳಿ ದೀಪ, ಮಕ್ಕಳು ಹಾಡಿ ದಣಿದರು ಸ್ವಲ್ಪ
ಇನ್ನು ಮು೦ದೆ ನೀನು ಹಾಡು, ಅವರ ಹಾಡಲ್ಲಿತ್ತೀ ನಾಡು
ಸೂರ್ಯ ಇರೊವರೆಗೂ ತಿ೦ಗಳಮಾವ ನೀನೇ ಹಾಡಬೇಕು
ನಿನ್ನ ಬೆಳಕಲ್ಲಿ ಈ ಮಕ್ಕಳ ಪ್ರೀತಿ ಚೆಲ್ಲಬೇಕು