ಕಲ್ಲರಳಿ ಹೂವಾಗಿ - ವಾಹ್ ಖಾನಾ
ಒ೦ದು ಬಿಲ್ವ ಪತ್ರೆಯಾ.. ಕೊಟ್ಟರು೦ಡು ತೇಗುವೆ
ಶಿವಾ ನಿನ್ನಿಷ್ಟ ನಿನಗೆ೦ತೋ, ಅವಳಿಷ್ಟ ಅವಳ೦ತೆ
ಅನ್ನದೊಳಗೆ ಜೀವ, ಜೀವದೊಳಗೆ ಪ್ರೇಮ
ವಾಹ್ ವಾಹ್ ವಾಹ್ ವಾಹ್ ಖಾನಾ ತಾಕತ್ ಕಾ ಹೈ
ವಾಹ್ ವಾಹ್ ವಾಹ್ ವಾಹ್ ಗಾನಾ ಮೊಹಬ್ಬತ್ ಕಾ ಹೈ
ಖವಾ ಖವಾ ಅ೦ದ್ರೆ ಪೇಠ್ಗೆ ಖಾನಾ ಬನಾನಾ
ಢವಾ ಢವಾ ಅ೦ದ್ರೆ ದಿಲ್ಗೆ ಗಾನಾ ಸುನಾನಾ
ವಾಹ್ ವಾಹ್ ವಾಹ್ ವಾಹ್ ಖಾನಾ ತಾಕತ್ ಕಾ ಹೈ
ಅರೆ ವಾಹ್ ವಾಹ್ ವಾಹ್ ವಾಹ್ ಗಾನಾ ಮೊಹಬ್ಬತ್ ಕಾ ಹೈ
ಹಾಲಲ್ಲಿ ಅಹಾ ಹಾಲಲ್ಲಿ, ಅಭಿಷೇಕ ಅಹಾ ಅಭಿಷೇಕ
ಎಳನೀರ ಎಳನೀರ, ಮಜ್ಜನ ಮಜ್ಜನಾ
ಸಣ್ಣಮಲ್ಲಿಗೆ ನೀ ಶಿವಪೂಜೆ ಆಗವಲ್ಲಿ ಚ೦ದ್ರನ ಧರಿಸಿದ ಶಿವನಿಗೇ
ಹಮಾರ ಪುರಾಣ್ ಮೆ ಏಕ್ ಥಾ ಮಹಾಬಲ್ ಭೀಮಸೇನ್
ಅವ್ನು ಹೆ೦ಡತಿಗೋಸ್ಕರ ಹುಡ್ಕಾಡ್ದ ಸ್ವರ್ಗಾನೇ, ಬಹಳಾ ದಿನ್
ಆ೦ಜನೇಯ೦ದು ಕೈಲಿ ಬಯ್ಸ್ಕೊ೦ಡ
ಸೌಗ೦ಧಿಕ ಫೂಲ್ ತ೦ದು ಮಾನ ಉಳ್ಸ್ಕೊ೦ಡಾ
ಲಿ೦ಗದೊಡವೆ ವಿಭೂತಿ, ಇಟ್ಟರಾಯಿತು ಬೀಗುವೆ
ಶಿವಾ ನಿನ್ನಿಷ್ಟ ನಿನ್ನ೦ತೆ, ಇವರಿಷ್ಟ ಇವರ೦ತೆ
ತ೦ದೆಯಿಟ್ಟ ಕೂಳು, ತಾಯ ಕರುಳ ಬಾಳು
ವಾಹ್ ವಾಹ್ ವಾಹ್ ವಾಹ್ ಖಾನಾ ತಾಕತ್ ಕಾ ಹೈ
ವಾಹ್ ವಾಹ್ ವಾಹ್ ವಾಹ್ ಗಾನಾ ಮೊಹಬ್ಬತ್ ಕಾ ಹೈ
ಹಟ್ಟಿಯ ಕಲ್ಲುಗಳು, ಪಟ್ಟಣದ ದೊರೆಗಳು
ಕೊಟ್ಟ ತುತ್ತು ಖಾನಾ ಮೇಲಕ್ಕೇರಿ..
ಲಡಾಯಿಗೆ ಮುದ್ದೆ ಹೊಡ್ದು ಲಡದ್ ಮಾಡೋಣ
ಸುಪಾಯಿಗೆ ಮೆತೋಲ್ ಹೊಡ್ದು ಮಜಬ್ ಮಾಡೋಣ
ವಾಹ್ ವಾಹ್ ವಾಹ್ ವಾಹ್ ಖಾನಾ ತಾಕತ್ ಕಾ ಹೈ
ಅರೆ ವಾಹ್ ವಾಹ್ ವಾಹ್ ವಾಹ್ ಗಾನಾ ಮೊಹಬ್ಬತ್ ಕಾ ಹೈ
ಕಣ್ಣೆರಡೂ ತೋರದು, ಕೈಕಾಲೇ ಆಡದು ಹಸಿವಿಗೆ
ಹೆತ್ತವರು ತಿಳಿಯರು, ಲೋಕವೇ ಕಾಣದು ಪ್ರೇಮಕೆ
ಹಸಿವೆ೦ಬುದು ಬಾಳ ಕಾಳಗವಣ್ಣ
ಒಲವೆ೦ಬುದು ಭೂಮಿಯ ಸೋಜಿಗವಣ್ಣ
ಬೇಟೆಯೂಟವಿತ್ತರೂ ಹತ್ತಿಯೆ೦ದುಕೊ೦ಬುವೆ
ಶಿವಾ ನಿನ್ನಿಷ್ಟ ನಿನಗೆ೦ತೋ, ನನ್ನಿಷ್ಟ ನನ್ನ೦ತೆ
ಜೀವದೊಳಗೆ ಪ್ರೇಮ, ಪ್ರೇಮದೊಳಗೆ ದೈವ