ಕಲ್ಲರಳಿ ಹೂವಾಗಿ - ಹಣತೆಯ ಅಡಿಯಲ್ಲೆ

ಕಲ್ಲರಳಿ ಹೂವಾಗಿ - ಹಣತೆಯ ಅಡಿಯಲ್ಲೆ

ಬರಹ

ಹಣತೆಯ ಅಡಿಯಲ್ಲೆ ಕತ್ತಲೆಯ ತವರು, ಇರುಳಿನ ಬೇರಲ್ಲೆ ಹೊ೦ಬೆಳಕಿನ ಚಿಗುರು
ಬೇಕು ಬೇಡ ನಡುವೆ ನೋಡ, ಕಲ್ಲರಳಿ ಹೂವಾಗಿ...
ಹಣತೆಯ ಅಡಿಯಲ್ಲೆ ಕತ್ತಲೆಯ ತವರು, ಇರುಳಿನ ಬೇರಲ್ಲೆ ಹೊ೦ಬೆಳಕಿನ ಚಿಗುರು
ಬೇಕು ಬೇಡ ನಡುವೆ ನೋಡ, ಕಲ್ಲರಳಿ ಹೂವಾಗಿ...

ಹಾರಿ ಹಾರಿ ಕೇಳುತಿರುವುದೀ ಮನವು, ಮನಸಿನ೦ತೆ ಹಾರಲು೦ಟೆ ತನುವು
ಬೇಡ ಎ೦ಬ ಕಡೆಯೆ ಬಾಳ ತವಕ, ಈ ಒಲವು ನಿಯಮ ಮುರಿಯೋದೆ ಅಣಕ
ನಿಯಮಾ ಬದುಕಿಗೋ, ಬದುಕೇ ನಿಯಮಕೋ
ಹಣತೆಯ ಅಡಿಯಲ್ಲೆ ಕತ್ತಲೆಯ ತವರು..., ಇರುಳಿನ ಬೇರಲ್ಲೆ ಹೊ೦ಬೆಳಕಿನ ಚಿಗುರು...

ಹಣತೆಯ ಅಡಿಯಲ್ಲೆ ಕತ್ತಲೆಯ ತವರು, ಇರುಳಿನ ಬೇರಲ್ಲೆ ಹೊ೦ಬೆಳಕಿನ ಚಿಗುರು
ಬೇಕು ಬೇಡ ನಡುವೆ ನೋಡ, ಕಲ್ಲರಳಿ ಹೂವಾಗಿ...

ಈ ಮಾತಿಗಾಗಿ ಹುಟ್ಟಲಿಲ್ಲ ಪ್ರೇಮಾ, ಮಾತಿಗಿ೦ತ ತೀಕ್ಷ್ಣ ಕಣ್ಣ ಮಾತು..
ಹೃದಯ ಹೃದಯ ಸೇರೋ ಮೌನ ದನಿಯ, ಆ ದೈವ ಮೆಚ್ಚಿ ಮೆಚ್ಚಿ ನಗುವುದ೦ತೆ
ಒಲವೇ ದೈವಕೋ, ದೈವವೇ ಒಲವಿಗೋ
ಹಣತೆಯ ಅಡಿಯಲ್ಲೆ ಕತ್ತಲೆಯ ತವರು..., ಇರುಳಿನ ಬೇರಲ್ಲೆ ಹೊ೦ಬೆಳಕಿನ ಚಿಗುರು...