ಕಳ್ಳ -ಮಂಜ ಕೋಮಲ ಮಾಯಾ!!! ಕನ್ನಡ ಚಿತ್ರ ರಂಗದ ಬಗ್ಗೆ ಒಂದು ವಿಶ್ಲೇಷಣೆ
ಕಾಲ ಬದಲಾಗಿದೆ ಅಂತೆಲ್ಲ ಹೇಳೋದನ್ನ ಕೇಳಿದ್ದೇವೆ, ಕೆಲವೊಮ್ಮೆ ನಾವೇ ಹಾಗೆ ಹೇಳಿದ್ದಿವಿ , ಆದ್ರೆ ಬದಲಾಗಿದ್ದು ಕಾಲ ಅಲ್ಲ, ನಾವೇ.
ಈಗ ವಿಷಯಕ್ಕೆ ಬಂದರೆ, ಹಿಂದೆ ಅಣ್ಣಾವ್ರು, ವಿಷ್ಣು, ಅಂಬರೀಶ್, ಪ್ರಭಾಕರ್, ರವಿಚಂದ್ರನ್, ಶಿವಣ್ಣ ಇರುವ ಕಾರಣಕ್ಕೆ ಕನ್ನಡ ಚಿತ್ರಗಳನ್ನ ನೋಡಲು ಜನ ಮುಗಿ ಬೀಳುತ್ತಿದ್ದರು, ಆದರೆ ಬರು ಬರುತ್ತಾ, ಚಿತ್ರಗಳ ಗುಣಮಟ್ಟ ಕಡಿಮೆಯಾಗಿ, ಹಾಸ್ಯ ಅಪಹಾಸ್ಯವಾಗಿ, ದ್ವಂದ್ವಾರ್ಥದ , ಸಂಭಾಷಣೆಗಳು , ಚಿತ್ರ ವಿಚಿತ್ರ, ಅರ್ಥವೇ ಆಗದ ಹಾಡುಗಳು, ಅಬ್ಬರದ ಸಂಗೀತ, ಹೀಗೆ ಒಟ್ನಲ್ ಜನಕ್ಕೆ, ಅದರಲ್ಲೂ ಸಂಪೂರ್ಣ ಕುಟುಂಬ ಸಮೇತ ಮುಜುಗರವಿಲ್ಲದೆ ನೋಡಬಹುದಾದಂತ ಯಾವ ಚಿತ್ರಗಳೂ ಬರಲಿಲ್ಲ.
ಕೆಲವೊಮ್ಮೆ ಪ್ರಮುಖ ನಾಯಕರ ಚಿತ್ರಗಳೂ ಸಹಾ ಜನರ ಆಸಕ್ತಿಯನ್ನ ಹೆಚ್ಚಿಸಿ ಚಿತ್ರಮಂದಿರಕ್ಕೆ ಕರೆತರುವಲ್ಲಿ ವಿಫಲವಾದವು, ಮಧ್ಯ - ಮಧ್ಯ ಕೆಲವೊಂದು ಒಳ್ಳೆಯ ಚಿತ್ರಗಳು ಬಂದರೂ ಜನರನ್ನು ಸರಿಯಾಗಿ ತಲುಪುವಲ್ಲಿ ವಿಫಲವಾದವು.
ಕಥೆ ಚೆನ್ನಗಿರುವಲ್ಲಿ, ಹಾಡು, ಸಂಗೀತ ಚೆನ್ನಾಗಿರದೆ, ಇದೆಲ್ಲ ಸರಿಯಿದ್ದರೆ ನಾಯಕ ನಾಯಕಿ ಹೊಂದಿಕೆಯಾಗದೇ , ಹೀಗೆ ಏನೇನೋ ಕಾರಣಗಳಿಂದ ಕಾಣದ ಚಿತ್ರ ರಂಗ ಪಾತಾಳಕ್ಕೆ ಕುಸಿಯುತ್ತಿದ್ದರೆ, ಅತ್ತ ಕಡೆ ತೆಲುಗು ತಮಿಳು ಹಿಂದಿಯವರು ಹೆಚ್ಚು ಹಣ ಖರ್ಚು ಮಾಡಿ ಸಿನೆಮಾ ತೆಗೆದು ಅತಿ ಹೆಚ್ಚು ಸಂಖ್ಯೆಯಲ್ಲಿ ಕರ್ನಾಟಕದಲ್ ಬಿಡಿಗಡೆ ಮಾಡಿ ಹಣ ಕೊಳ್ಳೆ ಹೊಡೆದರು. ಬಹು ಪಾಲು ಜನರಂತೂ ಕನ್ನಡ ಚಿತ್ರಗಳಿಗಿಂತ ಬೇರೆಯದೇ ವಾಸಿ ಅಂದುಕೊಂಡು ಹಿಂದಿ ತೆಲುಗು ತಮಿಳ್, ಆಂಗ್ಲ ಚಿತ್ರಗಳತ ಮುಖ ಮಾಡಿದರು.
ಹೀಗಿರುವಾಗ ಕನ್ನಡ ಚಿತ್ರರಂಗಕ್ಕೆ ಸ್ವಲ್ಪ ಮಟ್ಟಿಗೆ ಚೇತರಿಕೆ ಕೊಟ್ಟದ್ದು ಹೊಸ ನಿರ್ದೇಶಕರೇ(ಉಪೇಂದ್ರ ಬಿಟ್ಟು)
ಅವರಲ್ಲಿ ಮುಖ್ಯವಾಗಿ ಪ್ರೇಂ, ಆರ್ ಚಂದ್ರು, ರತ್ನಜ,ಜಯತೀರ್ಥ (ಇವರ ಒಲವೆ ಮಂದಾರ ಪ್ರೇಕ್ಷಕರನ್ನ ಇತ್ತೀಚಿಗೆ ವಿಪರೀತ ಸೆಳೆಯುತ್ತಿದೆ)(ಇದರಲ್ಲಿ ಇನ್ನಸ್ಟು ಹೆಸರುಗಳು ಬಿಟ್ಟು ಹೋಗಿರಬಹುದು) ತರದವರು ಚಿತ್ರರಂಗಕ್ಕೆ ನವ ಚೈತನ್ಯವನ್ನು ಕೊಟ್ಟರೆಂದೇ ಹೇಳಬಹುದು.
ಕೆಲವೊಮ್ಮೆಯಂತೂ ಜನ ನಾಯಕರಿಗಿಂತ,
ನಾಯಕಿ(ಮಾಲಾಶ್ರಿ, ರಾಧಿಕ, ಸುಧಾರಾಣಿ,ಪೂಜಾ ಗಾಂಧೀ),
ಸಂಗೀತ ನಿರ್ದೇಶಕ(ಹಂಸಲೇಖ, ರವಿಚಂದ್ರನ್,ಗುರು ಕಿರಣ್, ಹರಿಕೃಷ್ಣ,ಅಭಿಮಾನ್ ರಾಯ್
),
ನಿರ್ದೇಶಕ(ಉಪೇಂದ್ರ, ರವಿಚಂದ್ರನ್,ದಿನೇಶ್ ಬಾಬು,ಸುನಿಲ್ ಕುಮಾರ್ ದೇಸಾಯಿ
,ಪ್ರೇಂ,ಆರ್ ಚಂದ್ರು, ರತ್ನಜ,ಗುರು ಪ್ರಸಾದ್
(ಇನ್ನು ಮುಂದೆ ಜಯ ತೀರ್ಥ)),
ಸಾಹಿತಿ -ಸಾಹಿತ್ಯ,(ಕೆ ಕಲ್ಯಾಣ್, ಕವಿರಾಜ, ಯೋಗರಾಜ್ ಭಟ್,ಜಯಂತ್ ಕಾಯ್ಕಿಣಿ,ಉಪೇಂದ್ರ,)
ನಿರ್ಮಾಣ(ರಾಜಕುಮಾರ್ ಬ್ಯಾನರ್,ರಾಮು, ರಾಕ್ ಲೈನ್ ವೆಂಕಟೇಶ್ ,
)
ಇನ್ನು ಆಶ್ಚರ್ಯ ಅಂದ್ರೆ ಹಾಸ್ಯ ಕಲಾವಿದರು ಯಾರಿದ್ದಾರೆ ಅಂತ ಕೇಳಿಯೋ ನೋಡಿಯೋ ಚಿತ್ರ ನೋಡಲು ಹೋದವರು ಇದ್ದಾರೆ..
ನಾನೇ ಗಮನಿಸಿರುವ ಹಾಗೆ, ನಾಯಕ ನಾಯಕಿ ಬಂದಾಗ ಎಷ್ಟು ಶಿಳ್ಳೆ ಹೊಡಿತಾರೋ ಅದ್ಕೆ ದುಪ್ಪಟ್ಟು ಶಿಳ್ಳೆ, ಕೋಮಲ್
,ರಂಗಾಯಣ ರಘು, ಸಾಧು ಕೋಕಿಲ, ಟೆನ್ನಿಸ್ ಕೃಷ್ಣ, ದೊಡ್ಡಣ್ ಗೆ ಸಿಗುತ್ತೆ..
ಮೊದ ಮೊದಲು, ಖಳ ನಾಯಕನಾಗಿ(ಸಹೋದರ ಜಗ್ಗೇಶ್ ಚಿತ್ರದಲ್ಲಿ ) ನಂತರ ಹಾಸ್ಯ, ಪೋಷಕ ಪಾತ್ರಗಳಲ್ಲಿ ನಟಿಸುತ್ತ ಕ್ರಮೇಣ ತಮ್ಮ ವಿಶೇಷ ಅಭಿನಯ ಶೈಲಿಯಿಂದ ಜನರನ್ನ ಆಕರ್ಷಿಸುತ್ತಾ, ಎಲ್ಲ ನಟರ ಸಹಜ ಬಯಕೆಯಂತೆ ,
ತಾನು ಪೋಷಕ, ಹಾಸ್ಯ ನಟನನೆಯಿಂದ ನಾಯಕನ ಪಾತ್ರಕ್ಕೆ ಬಡ್ತಿ ಪಡೆಯಲು,ಬಯಸಿ ತೆಗೆದ ಮೊದಲ ಚಿತ್ರವೇ ಚಮ್ಕಾಯ್ಸಿ ಚಿಂದಿ ಉಡಾಯ್ಸಿ!...
(ಅದ್ಕೆ ಮೊದ್ಲು ದಿನೇಶ್ ಬಾಬು ಅವ್ರು,ಕೋಮಲ್ ಮತ್ತು ಅನಂತ್ ನಾಗ್ ಸೇರಿಸಿ ಮಿ. ಗರಗಸ ತೆಗೆದು ಕೋಮಲ್ ಗೆ ಬ್ರೇಕ್ ಕೊಟ್ಟಿದ್ದರು) ಚಮ್ಕಾಯ್ಸಿ ಚಿಂದಿ ಉಡಾಯ್ಸಿ, ಚಂಕಾಯ್ಸ್ಲು ಇಲ್ಲ , ಚಿಂದಿ ಉಡಾಯಿಸಲು ಇಲ್ಲ, ಆದರು ಕೋಮಲ್ ಜಗ್ಗದೆ ಬಗ್ಗದೆ ಮತ್ತೆ ಪ್ರಯತ್ನ ಮಾಡಿ ತೆಗೆದ ಚಿತ್ರವೇ ಕಳ್ಳ ಮಂಜ...
ಚಿತ್ರವೇನು ವಿಭಿನ್ನ ವಿಶಿಷ್ಟ ಅನೇನು ಹೇಳೋಕ್ ಆಗಲ್ಲ, ಆದ್ರೆ ಕುತೂಹಲ ಮೂಡಿಸುವುದು ನಿಜ...
ಕಳ್ಳ ಮಂಜ ಚಿತ್ರದ ಕೆಲ ದೃಶ್ಯಗಳು ಮನಸ್ಸಲೀ ಉಳಿಯುತ್ತೆ ಅದರಲ್ಲಿ
೧.ಸಮುದ್ರ ತೀರದ ಹತ್ತಿರ ನಾಯಕ ನಾಯಕಿ ಸಾಂಗ್ ,
೨.ದ್ವಿತೀಯಾರ್ಧದಲ್ಲಿ ಕೋಮಲ್ ಅಂಡ್ ಗ್ಯಾಂಗ್ ಆಡುವ ದೆವ್ವದ ನಾಟಕ ದಲ್ಲಿ ಮೈಕೆಲ್ ಮಧು ಮೈ ತುಂಬಾ ಬಿಳಿ ಬಟ್ಟೆ ಸುತ್ತ್ಕೊಂಡ್ 'ಮಮ್ಮಿ' ಆಗೋದು,
೩.ಕೋಮಲ್ ರ ವಿವಿಧ ಅವತಾರಗಳು ಅದರಲ್ಲೂ 'ತಲೆಯಲ್ಲಿ ಗರಗಸ ಚುಚ್ಚಿದ ಸ್ವಾಮಿ' ಯಾ ಅವತಾರ ನಗೆಗಡಲಲ್ಲಿ ಮುಳಿಗಿಸೊದು ನಿಜ..
೪.ರಾಜು ತಾಳಿ ಕೋಟೆಯ ಒಂದು ಸಂಬಾಷಣೆ ಸತ್ಯರಾಜ್ ಗೆ ತಾಳಿಕೋಟೆ ಸಣ್ಣ ಮುಲ್ಲ್ಲು ಚ್ಚ್ಚ್ಚಿದೆ ತೆಗೆಯರಿ ಎನ್ನುತಾರೆ, ಅದೇನೆಂದು ನೋಡಿದರೆ ಅದೊಂದು ದೊಡ್ಡ ಕಬ್ಬಿಣದ ಸಲಾಕೆ!
ಇನ್ನು ಅಲ್ಲಲ್ಲಿ ಬರುವ ಕೆಲವೊಂದು ಸಂಭಾಷಣೆಗಳು ಮಜಾ ಕೊಡೋದಂತು ಗ್ಯಾರಂಟಿ..
ಅದರಲ್ಲೂ, ಗುರು ಪ್ರಸಾದ್ ಕೋಮಲ್ ಜೋಡಿಗೆ ಫುಲ್ ಮಾರ್ಕ್ಸ್... ಗುರು ಒಳ್ಳೆ ನಿರ್ದೇಶಕ ಮಾತ್ರ ಅಲ್ಲ ನಟ ಸಹಾ...
ಇವರಿಗೆಜೊತೆಯಾಗಿ, ಥ್ರಿಲ್ಲರ್ ಮಂಜು , ಉತ್ತರ ಕರ್ನಾಟಕದ ಸುಪ್ರಸಿದ್ಧ ಕಲಿಯುಗದ ಕುಡುಕ ಖ್ಯಾತಿಯ ರಾಜು ತಾಳಿಕೋಟೆ, ಮೈಕೆಲ್ ಮಧು, ವಿಶೇಷವಾಗಿ ಗೌರವ ಉಕ್ಕುವಂತ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ, ಹೀಗೆ ಹೊಸಬ ಹಳಬರ ಸಂಗಮವಾದ ಈ ಚಿತ್ರ ನೋಡಲು ಲಾಜಿಕ್ ಇಟ್ಕೊಂಡ್ ನೋಡ ಹೋದ್ರೆ ,ಏನು ಅರ್ಥ ಆಗಲ್ಲ,ಸುಮ್ಮನೆ ಎಂಜಾಯ್ ಮಾಡಬಹುದು.
ದ್ವಿತೀಯಾರ್ಧದಲ್ಲಂತೂ ಹೊಟ್ಟೆ ತುಂಬಾ ನಕ್ಕು ಸುಸ್ತಾಗೋದು ಗ್ಯಾರಂಟಿ. ಅದಕ್ಕೆ ಕಾರಣ ಕೋಮಲ್, ಥ್ರಿಲ್ಲರ್, ಗುರು ಮಾಡೋ ಆಡೋ ದೆವ್ವದ ಆಟ, ಪೂರ್ತಿ ಹೇಳಿದ್ರೆ ಚಿತ್ರದ ಸಂಪಾದನೆಗೆ ಒಳ್ಳೆಯದಲ್ಲ, ಅದ್ಕೆ ಎಲ್ರೂ ಒಮ್ಮೆ ಮಗದೊಮ್ಮೆ ಮತ್ತೊಮ್ಮೆ ಇನ್ನೊಮ್ಮೆ ಈ ಚಿತ್ರ ನೋಡಿ ಖುಷಿ ಪಡಿ..
ಕೊಟ್ಟ ಕಾಸಿಗೆ ಮೋಸ ಇಲ್ಲ..
ಜಾಕಿ, ಮೈಲಾರಿ, ಸೂಪರ್, ಬಾಸ್ , ಒಲವೆ ಮಂದಾರ ಗಳ ಯಶಸ್ವಿ ಓಟ ಕ್ಕೆ ಕೋಮಲ್ ಜಾದೂ ಚಿತ್ರ , ಕಳ್ಳ ಮಂಜನೂ ಸೇರಿದ್ದಾನೆ ಕನ್ನಡ ಚಿತ್ರ ರಂಗಕ್ಕೆ ಇದು ಖಂಡಿತ ಒಳ್ಳೆಯ ಬೆಳವಣಿಗೆ...ಕನ್ನಡ ಚಿತ್ರ ರಂಗ ಇನ್ನಸ್ಟು ಮತ್ತಸ್ತು ಪ್ರಕಾಶಿಸಲಿ ಅನ್ನೋದೇ ಕನ್ನಡ ಚಿತ್ರ ಪ್ರೇಮಿಗಳ ಹರಕೆ ಹಾರೈಕೆ,
Comments
ಉ: ಕಳ್ಳ -ಮಂಜ ಕೋಮಲ ಮಾಯಾ!!! ಕನ್ನಡ ಚಿತ್ರ ರಂಗದ ಬಗ್ಗೆ ಒಂದು ...
In reply to ಉ: ಕಳ್ಳ -ಮಂಜ ಕೋಮಲ ಮಾಯಾ!!! ಕನ್ನಡ ಚಿತ್ರ ರಂಗದ ಬಗ್ಗೆ ಒಂದು ... by kpbolumbu
ಉ: ಕಳ್ಳ -ಮಂಜ ಕೋಮಲ ಮಾಯಾ!!! ಕನ್ನಡ ಚಿತ್ರ ರಂಗದ ಬಗ್ಗೆ ಒಂದು ...
ಉ: ಕಳ್ಳ -ಮಂಜ ಕೋಮಲ ಮಾಯಾ!!! ಕನ್ನಡ ಚಿತ್ರ ರಂಗದ ಬಗ್ಗೆ ಒಂದು ...