ಕವಿತೆ ಎಂದರೆ?

ಕವಿತೆ ಎಂದರೆ?

ಕವನ
ಹೂವ ತುಂಬಿಕೊಂಡ ಮಾಮರವ ಕೇಳಿದೇ ಕವಿತೆ ಏಂದರೇನು? ಮಾಮರ ಹೇಳಿತು, ಕವಿತೆ ಎಂದರೆ ಮಣ್ಣ ಸಾರವ ಹೀರಿ ಸಿಹಿಹಣ್ಣ ನೀಡುವುದು. ಹಸಿರ ಬಯಲಲ್ಲಿ ಮೇಯುತ್ತಿದ್ದ ಹಸುವ ಕೇಳಿದೇ, ಕವಿತೆ ಎಂದರೇನು? ಕವಿತೆ ಎಂದರೆ ಅಂಬಾ ಎನ್ನುವ ಕರುವಿಗೆ ಹಾಲುಣಿಸುವ ವರ್ಣಿಸಿಲಾಗದ ಪುಳಕ. ತೊದಲ ನುಡಿವ ಮಗುವ ಕೇಳಿದೇ ಕವಿತೆ ಎಂದರೇನು? ಮಗು ನಕ್ಕು, ನಗುವೇ ಕವಿತೆ ಎಂದಿತು. ಕೇಳಿದೆ ಮಳೆಯ, ಕವಿತೆ ಎಂದರೇನು? ಕವಿತೆ ಎಂದರೇ ಮಳೆಯ ಸ್ಪರ್ಶದಿಂದ ಭುವಿಯಲ್ಲಿ ಪಸರಿಸಿದ ಘಮಲು. ಕಟ್ಟೆಯ ಮೇಲೆ ಕುಳಿತ ವೃದ್ಥನ ಕೇಳಿದೇ ಕವಿತೆ ಎಂದರೇನು? ಆತ ತಾನು ಸವೆಸಿದ ಬದುಕ ತೆರೆದಿಟ್ಟು ಇದೇ ಅದ್ಬುತ ಕವಿತೆ ಎಂದ. ಬೀಜ ತನ್ನೊಳಗೆ ಉದುಗಿಸಿಕೊಂಡ ಫಲವತ್ತಾದ ಕಪ್ಪು ನೆಲವ ಕೇಳಿದೆ ಕವಿತೆ ಎಂದರೇನು? ಬೀಜದಿಂದ ಚಿಗುರ ಹೊರ ಇಣುಕಿಸಿ ನಸುನಕ್ಕಿತು. ಪ್ರೆಶ್ನೆಗಳ ಹೆಚ್ಚಿದಷ್ಟು ಕವಿತೆಯ ಅರ್ಥ ಮತ್ತಷ್ಟು ವಿಸ್ತಾರವಾಗತೊಡಗಿತ್ತು. ಕವಿತೆ ಮತ್ತಷ್ಟು ರಂಗು ಪಡೆಯತೊಡಗಿತ್ತು.

Comments