ಕವಿತೆ ಹುಟ್ಟುತ್ತಿಲ್ಲ ಮನದೊಳಗೊಂದು,,,,,,

ಕವಿತೆ ಹುಟ್ಟುತ್ತಿಲ್ಲ ಮನದೊಳಗೊಂದು,,,,,,

ಬರಹ

ಕವಿತೆ ಹುಟ್ಟುತ್ತಿಲ್ಲ ಮನದೊಳಗೊಂದು,
ನಿರ್ಭಾವುಕ ಮನ ಏನನ್ನ ತಾನೆ ಸ್ರಷ್ಟಿಸೀತು?
ಕಿಂಚಿತ್ತು ಒಲವಿಲ್ಲದ ಮನ,ಬಿಡುವಿಲ್ಲದ ಮನ,
ಒಡಲಿಲ್ಲದ ಮನ,ಕಡಲನರಿಯದ ಮನ,
ಪದವರಿಯದ ಮನ,ಪರಿಯರಿಯದ ಮನ!

’ಮನಸಿದ್ದರೆ ಮಾರ್ಗವೆಂಬೋ’ ಹಸಿ ಸುಳ್ಳ
ನೆನೆಯುತ್ತಿಹುದು ಮನವೆಂಬೋ ಮನ,
ಛಲವಿಲ್ಲದ ಮನ,ಬಲವಿಲ್ಲದ ಮನ,
ಗುರಿಯಿಲ್ಲದ ಮನ,ಅರಿವಿಲ್ಲದ ಮನ
ತಲುಪುವುದಾದರೂ ಎಲ್ಲಿಗೆ ಮಾನಗೇಡಿ ಮನ!

ಅಂತ್ಯ ಕಾಣದ ಮನ,ಪುಟ್ಟ ಕವಿತೆಗಾಗಿ ಹಂಬಲಿಸಿದ ಮನ
ಸ್ರಜನಶೀಲತೆಗೆ ಮಮ್ಮಲ ಮರುಗಿದ ಮನ
ಬೇಸಿಗೆ ಝಳಕ್ಕೆ ಬತ್ತಿ ಬಾಡಿದ ಮನ,
ಕಾಮನ ಹುಣ್ಣಿಮೆಗೆ ಉದುರಿದ ಸಣ್ಣ ಮಳೆಗೆ
ಚಿಗುರಿ ನಿಂತಿತಲ್ಲಾ ಮನದೊಳಗೊಂದು ಪುಟ್ಟ ’ಕವನ’.