ಕವಿತೆ

ಕವಿತೆ

ಕವನ

 

ತಂಪಾಗಬೇಕು ಈ ನೆಲ 
ಸೂರ್ಯನ ತಪನದಲ್ಲಿ ಬೆಂದು
ಬೆವರನಿಳಿಸಿ ಸೊಂಪಾಗಬೇಕು ಮೈ
ಹಿಡಿಯ ಅನ್ನ ತಿಂದು
 
ಒಡ್ಡಿದರಷ್ಟೆ ತಲೆ, ಉಳುವ ನೆಲಕೆ
ಸುಡು ಬಿಸಿಲಿನಲ್ಲಿ ಕೊಂಚ ಹೊತ್ತು
ತೆನೆ ತೆನೆಯ ಬೆಲೆ ತಿಳಿಯುವುದು;
ಸುಕೃತವು ಖಚಿತ ತಿಂದ ಒಂದು ತುತ್ತು
 
ರಾಮ ರಾಜ್ಯವನ್ನು ಕಟ್ಟಬಹುದು
ನುಡಿಗಟ್ಟುಗಳಲಿ ತೊಟ್ಟು ಖಾದಿ
ದಿಟ್ಟಿಸ ಬಹುದು ಬೆಟ್ಟದ ತುದಿಯನು
ಕಷ್ಟ ಅದರ ಹಾದಿ
-ಮಾಲು