ಕವಿ ಕತ್ತಲೆಯಲಿ......
ಕವನ
ಕತ್ತಲಲ್ಲಿ ನಾ ಕುಳಿತು ,
ಆ ಇರುಳನ್ನೇ ಕುರಿತು ,
ಬರೆದೆನೊಂದು ಕವಿತೆ ಇಲ್ಲೀ.......
ಬೆಳದಿಂಗಳಾ ಬೆಳಕು ಭೂಮಿಯನ್ನು ತಬ್ಬಿರಲು,
ಹಗಲಂತೆ ಕಾಣುತಿದೆ ಅಂದಿನಾ ಇರುಳು ,
ಮತ್ತೆ ರವಿ ಬಂದನೆಂದು ಕತ್ತಲೋಡಿಬರಲು,
ಅದರ ಭಯವ ಕಂಡು ಕವಿಯ ಮನವು ಕರಗಲು,
ಮನೆಯ ಜಾಗ ಬಿಟ್ಟು ಕೊಟ್ಟ ಕತ್ತಲವಿತು ಕೂರಲು,
ಅದರ ಜೊತೆಯೇ ಕಾಲ ಕಳೆದ ಮತ್ತೆ ರವಿಯು ಬರುವವರೆಗೂ.....