ಕಷ್ಟ ಬರ ಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ?

ಕಷ್ಟ ಬರ ಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ?

ಬರಹ

ಕ್ಷಮೆಯೊಂದೇ ಧರೆಯೊಳಗೇ ಪರಮವೆಂದರೆ ಎಲ್ಲ?
ಕ್ಷಮೆಯಾಚಿಸದವನಿಗೆ ಧರೆಯೊಳಗೆ ಕ್ಷಮೆಯೇ ಸಲ್ಲ.

ತಪ್ಪನ್ನು ತಪ್ಪೆಂದರುಹದೊಡೆ ಆ ತಪ್ಪ ನಾಗೈದಂತೆ
ಬಾಯ್ದೆರೆಯದಿದ್ದೊಡೆ ಅನಾಹುತಕ್ಕೆ ಕಾರಣನಾದಂತೆ

ದುರ್ಜನರ ಸಹವಾಸ ಹಾವಿನೊಂದಿಗಿನ ಸರಸದಂತೆ
ಯಾವಾಗ ಎಲ್ಲಿ ಕಡಿಯುವುದೋ ನಮಗರಿಯದಂತೆ

ಮೇಲೆಳೆದುಕೊಂಡು ಮೈ ಎಲ್ಲಾ ಪರಚಿಕೊಳ್ಳಲೇಕೆ?
ಸಂಬಂಧಗಳ ನೆಪದಲ್ಲಿ ಆತ್ಮ ವಂಚನೆ ಮಾಡಲೇಕೆ?

ಅವರಿವರ ಮೆಚ್ಚಿಸಿ ಬಾಳಲಾಗದು ಜೀವನದುದ್ದಕ್ಕೂ
ದೇವ ಮೆಚ್ಚದಿರೆ ಈ ಆತ್ಮಕ್ಕೆ ಗೋಳೇ ಬಾಳಿನುದ್ದಕ್ಕೂ

ಜನರು ಮೂರ್ಖರು ಅವರ ದೇವರೇ ಕ್ಷಮಿಸಲೆನ್ನಲೇಕೆ?
ತನ್ನತನವನೇ ಮರೆತು ನಪುಂಸಕನಾಗಿಲ್ಲಿ ಬಾಳಲೇಕೆ?

ಕಷ್ಟ ಬರ ಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ?
ಅಸತ್ಯವನೇ ಮೆರೆದು ದೇವನಿಗಿಷ್ಟವಿಲ್ಲದವನಂತಾಗಲೇ?
****************************