ಕಸದ ಬುಟ್ಟಿ ಹೇಳಿದ ಕಥೆ
ಎಷ್ಟು ಸಲ ನನ್ನನ್ನು ಖಾಲಿ ಮಾಡ್ತಿರಾ?
ಮತ್ತೆ ತುಂಬುತ್ತ , ತುರುಕುತ್ತಲೇ ಇದ್ದೀರಾ ?
ಉಸಿರು ಸಿಕ್ಕಿಕೊಂಡಿದೆ , ಶ್ವಸೂಚ್ಹಾಸ ಸಾಗುತ್ತಿಲ್ಲ
ಅರ್ಥವಿಲ್ಲದ್ದು ವ್ಯರ್ಥವಾದ್ದದ್ದು ನನ್ನಲ್ಲಿ ತುಂಬಿಸಿ ಓಕೆ
ಒಳ್ಳೆಯ ಬರಹಗಳನ್ನು ನನ್ನೊಳಗೆ ಸೇರಿಸಿದ್ದಿರಿ ಯಾಕೆ?
ಸರಿಯಾಗಿ ಓದದೆ ಬೇಸರದೆ ಅಸಡ್ಡೆ ತೋರಿಸಿದ್ದೀರಿ
ಬರೆದವನ ಪ್ರತಿಭೆ , ಭವಿಶವನ್ನು ಮುದುರಿ ಹಾಕಿದ್ದೀರಿ
ನನ್ನೊಳಗೆ ಸೇರಿಕೊಂಡ , ತಿರಸ್ಕರಿಸಿ ನೀವು ಬಿಸಾಡಿದ
ನೊಂದ ಲೇಖನಗಳು , ದುಃಖಿತ ಅಕ್ಸರಗಳು ನುಡಿದವು
'ಓದುಗನ ಹೃದಯ ಮುತ್ಥಬೇಕಾಗಿದ್ದ ನಮ್ಮ ಸ್ತಿತಿ ನೋಡು ! ಕಸದ ಬುತ್ತಿ
ಬದುಕಿನ ಅನುಭವದಿ ಹೆಕ್ಕಿದ್ದ ರತ್ನಗಳು ನಿನ್ನಲ್ಲಿ ಬಿದ್ದಿವೆ
ನೋಡು ಅದೃಷ್ಟ ಕೆಟ್ಟು !
ಕೊನೆಗೆ ನೀನಾದರೂ ಅವಕಾಶ ಕೊಟ್ಟೆ, ಎಸೆದವರೆಂದರೆ ನಂಗೆ ಹೇಸಿಗೆ
ನೋಡದೋ ಜವಾನ್ ಬಂದ, ಇನ್ನೇನು ಸುರಿಯುವ ಕಸದ ರಾಶಿಗೆ
ನನ್ನನ್ನು ಭೂಗತ ಮಾಡುವತನಕ , ತೃಪ್ತಿಯಿಲ್ಲ ಆಯ್ಕೆ ಮಾಡದವರಿಗೆ
ಟಾಟಾ ಕಸದ ಬುಟ್ಟಿ ! ಹೇಳು ಕರುಣೆ ತೋರಲು 'ಸಂಪಾದಕರಿಗೆ'
ಇನ್ನಾದರೂ ಪ್ರೋತ್ಸಾಹ ಸಿಗಲಿ ಚಿಗುರುತ್ತಿರುವ ಲೇಖಖರಿಗೆ
''ನನ್ನ ಬದುಕೆ ಹಿನವೆಂದುಕೊಂಡಿದ್ದೆ! ಈಗ ನಾನೆ ವಾಸಿ ಅನಿಸುತ್ತೆ
Comments
ಉ: ಕಸದ ಬುಟ್ಟಿ ಹೇಳಿದ ಕಥೆ ** ಕಸದ ಬುಟ್ಟಿ ಇಲ್ಲದ ಏಕೈಕ ಪತ್ರಿಕೆ