ಕಸ್ತೂರಿವಾಹಿನಿಯ ಕಲ್ಲು ಸಕ್ಕರೆ

ಕಸ್ತೂರಿವಾಹಿನಿಯ ಕಲ್ಲು ಸಕ್ಕರೆ

ಬರಹ

ಪ್ರಖ್ಯಾತ ನಿರ್ದೇಶಕರಾದ ಕೆ. ಬಾಲಚಂದರ್ ಅರ್ಪಿಸಿ, ಕವಿತಾಲಯ ಸಂಸ್ಥೆ ನಿರ್ಮಿಸುತ್ತಿರುವ ಶ್ರೀಕಾಂತ್ ಹುಬ್ಲಿಕರ್ ನಿರ್ದೇಶನದಲ್ಲಿ ಕಲ್ಲು ಸಕ್ಕರೆ ಎಂಬ ಧಾರಾವಾಹಿಯು ಈವತ್ತಿನಿಂದ ಕಸ್ತೂರಿ ವಾಹಿನಿಯಲ್ಲಿ ಪ್ರತಿದಿನ ಸಂಜೆ ಮೂಡಿಬರಲಿದೆ.
ಈ ಧಾರಾವಾಹಿಯ ತಾರಾಂಗಣದಲ್ಲಿ ವಿಜಯ್ ಕಾಶಿ, ಸುಚಿತ್ರ, ನಮಿತಾ, ರಾಧಾ ರಾಮಚಂದ್ರ ಇನ್ನೂ ಮುಂತಾದವರಿದ್ದೂ, ಶ್ರೀಕಾಂತ್ ಹುಬ್ಲಿಕರ್ ನಿರ್ದೇಶನದಲ್ಲಿ ಮೂಡಿಬರುವ ಧಾರಾವಾಹಿಯ ಕಥೆ ಕುತೂಹಲ ಮೂಡಿಸುವುದರಲ್ಲಿ ಸಂಶಯವಿಲ್ಲ.
ಧಾರಾವಾಹಿಯಲ್ಲಿ ಬರುವ ಕಥಾನಾಯಕ ಮಂಜುನಾಥ್ ಕಷ್ಟದಲ್ಲಿಯೇ ತನ್ನ ನಾಲ್ವರು ಸಹೋದರಿಯರನ್ನು ಸುಖವಾಗಿ ಬೆಳೆಸಿ ಅವರಿಗೆಲ್ಲ ಒಳ್ಳೆಯ ಕುಟುಂಬದೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾನೆ. ಇಷ್ಟೆಲ್ಲಾ ಕಷ್ಟ ಪಟ್ಟ ಮಂಜುನಾಥನಿಗೆ ಮದುವೆ ಮಾಡಲು ಅವನ ಸಹೋದರಿಯರೆಲ್ಲಾಸೇರಿ ಜೀವನದಲ್ಲಿ ಸಾಕಷ್ಟು ನೊಂದಿರುವ ಜ್ಯೋತಿಯನ್ನು ಆರಿಸಿ ಅವರಿಬ್ಬರ ನಿಶ್ಚಿತಾರ್ಥವನ್ನೂ ಮುಗಿಸಿರುತ್ತಾರೆ.
ಆದರೆ ಮಂಜುನಾಥನ ಕಿರಿಯ ಸಹೋದರಿಯ ನಾದಿನಿ ಚಿತ್ರ ಎನ್ನುವ ಹುಡುಗಿ ಈ ಮದುವೆಗೆ ಅಡ್ಡಗಾಲಾಗುತ್ತಾಳೆ, ಇವಳು ಮದುವೆಯಗಿ ಮೂರು ತಿಂಗಳಲ್ಲೇ ವಿಧುವೆಯಾಗಿರುವ ಈಕೆ ವಿಚಿತ್ರ ವರ್ತನೆಯವಳಾಗಿರುತ್ತಾಳೆ. ಮಂಜುನಾಥನ ಕಿರಿಯ ಸಹೋದರಿಯನ್ನು ಆಕೆಯ ಗಂಡ ಮತ್ತು ಆತ್ತೆಯು ಗಂಡನ ಮನೆಯಿಂದ ಹೊರಹಾಕಿರುತ್ತಾರೆ, ಮಂಜುನಾಥನು ಚಿತ್ರಳನ್ನು ಮದುವೆಯಾದರೆ ಮಾತ್ರ ಕಿರಿಯ ಸಹೋದರಿಯನ್ನು ಮನೆಗೆ ಸೇರಿಸುವುದಾಗಿ ಅವರು ಷರತ್ತು ವಿಧಿಸಿರುತ್ತಾರೆ. ಈ ಪರಿಸ್ಥಿತಿಯಲ್ಲಿ ಧಾರಾವಾಹಿಯ ಮುಖ್ಯಪಾತ್ರಧಾರಿಯಾದ ಮಂಜುನಾಥನು ತಾನು ಇಷ್ಟಪಟ್ಟಿರುವ ಜ್ಯೋತಿಯನ್ನು ಆರಿಸುತ್ತಾನೋ ಇಲ್ಲ ತನ್ನ ತಂಗಿಯ ಸುಖಕ್ಕಾಗಿ ಚಿತ್ರಳನ್ನು ವರಿಸುತ್ತಾನೋ ಎನ್ನುವುದೇ ಈ ಧಾರಾವಾಹಿಯ ಮುಖ್ಯಾಂಶವಾಗಿದೆ. ಹೆಸರೇ ಹೇಳುವಂತೆ ಜೀವನದಲ್ಲಿ ಕಷ್ಟ ಸುಖಗಳ ಮಿಶ್ರಣದಂತೆ ಕಲ್ಲು ಸಕ್ಕರೆಯಂತೆ ಕುತೂಹಲಕರ ಕಥೆಯಾಗಿದೆ.