ಕಾಟು ಮಾವಿನ ಹಣ್ಣು ಗೊಜ್ಜಿ
ಕವನ
ಕಾಟು ಮಾವಿನ
ಹಣ್ಣು ತಪ್ಪಲೆ
ಕಾಟ ಕೊಡೆಡ ಕೂಸೆ ನೀ
ಮರದ ಮೇಲೆ
ಹತ್ತಲೆಡಿಯ
ಬಿದ್ದ ಹಣ್ಣಿನ ಹೆರ್ಕು ನೀ
ಮನಗೆ ತೆಕ್ಕೊಂಡು
ಹೋದ ಮೇಲೆ
ನೀರ್ಲಿ ತೊಳದು ಮಡಿಗೆಕ್ಕು
ಚೋಲಿ ತೆಗದು
ಗೊರಟಿನ ಪುಂಟಿಕ್ಕಿ
ಗುಳವ ಎಲ್ಲಾ ತೆಗೆಯಕ್ಕು
ತೆಗೆದ ಗುಳವ
ಪಾತ್ರೆಲಿ ಹಾಕಿ
ಉಪ್ಪು ಹಾಕಿ ಕರ್ಡ್ಸೆಕ್ಕು
ನೀರುಳ್ಳಿ ಬೆಲ್ಲವ
ಹಾಕಿ ಒಟ್ಟಿಂಗೆ
ಹಸಿ ಮೆಣಸಿನ ಹಾಕೆಕ್ಕು
ಮಾವಿನ ಗೊಜ್ಜಿಗೆ
ಒಗ್ಗರಣೆ ಕೊಟ್ಟು
ಗೊರಟಿನ ಕೂಡ ಸೇರ್ಸೆಕ್ಕು
ಕುಚುಲು ಅಕ್ಕಿಯ
ಹೆಜ್ಜೆಯ ಒಟ್ಟಿಂಗೆ
ಸೆರ್ಸ್ಯೊಂಡು ಕಲೆಸಿ ತಿನ್ನೆಕ್ಕು
-ಹಾ ಮ ಸತೀಶ
ಕವನಕ್ಕೆ ಚಿತ್ರ ಕೃಪೆ :ಡಾ. ಸುರೇಶ್ ನೆಗಳಗುಳಿ
ಚಿತ್ರ್
