ಕಾಡುತ್ತವೆ ...........
ಬರಹ
ಹೀಗೇ..ಹೊರಟು ನಿಂತಾಗ
ಕಣ್ಣಾಲಿಗಳು ತುಂಬಿ ಬಂದು
ಭರವಸೆ ಮಾತಾಡಿದಾಗ
ಕಾಡುತ್ತವೆ ನೆನಪುಗಳು,
ಅಪೂರ್ಣ ಕನಸೊಂದು ಕಾಡಿದಾಗ
ನನ್ನೆಲ್ಲ ಯತ್ನ ಸೋತುಹೋಗಿ
ಅರೆಬರೆ ನಿದ್ದೆಯಲ್ಲಿ ಬರಿ
ಕಾಡುತ್ತವೆ ನೆನೆಪುಗಳು,
ರೈಲು ಹುಚ್ಚೆದ್ದು ಓಡಿದಾಗ
ನನಗೆಲ್ಲೋ ದಿಕ್ಕು ತಪ್ಪಿದಂತಾಗಿ
ದೂರ ಅನಂತವಾದಾಗ, ಬೇಸತ್ತು
ಕಾಡುತ್ತವೆ ನೆನಪುಗಳು,
ಯಾರೋ ನೋವ ಆಲಂಗಿಸಿ
ತಲೆನೇವರಿಸಿ ಮುತ್ತಿಟ್ಟಾಗ
ನೋವು ಆರ್ತನಾದವಾಗಿ
ಕಾಡುತ್ತವೆ ನಿನ್ನ ನೆನಪುಗಳು,,
ನೆನಪುಗಳು ಮತ್ತೆ ಕಾಡಿದಾಗ
ಸೊರಗಿ ನಾ ಮೈಮರೆತು
ಮಂಪರಲ್ಲೂ ಹೆಸರು ಕೇಳಿದಾಗ
ಮತ್ತೆ ಕಾಡುತ್ತವೆ ನಿನ್ನ ನೆನಪುಗಳು,,
ಎಡೆಬಿಡದೆ.............................