ಕಾರಣ ಹೇಳುವೆಯಾ ಗೆಳೆಯಾ..........
ಕವನ
ನೀನಿರದ ಬದುಕಿಗೆ
ಕನಸೇ ಚಿಗುರದ ಕಣ್ಣಿಗೆ
ಭಾವನೆಗಳೇ ಬತ್ತಿದ ಮನಸ್ಸಿಗೆ
ನೋವಲ್ಲೇ ನರಳುತ್ತಿರುವ ಹ್ರುದಯಕ್ಕೆ
ಜಗತ್ತು ಕೇಳುವ ನೂರಾರು ಪ್ರಶ್ನೆಗಳಿಗೆ
ಏನೆ೦ದು ಉತ್ತರಿಸಲಿ ಗೆಳೆಯ........
ಹೆಸರು ಪಡೆಯುವ ಮುನ್ನವೇ
ಮಡುಗಟ್ಟಿದ ಪ್ರೀತಿಯ ರೀತಿಗೆ
ಉಸಿರಿಗೆ ಉಸಿರಾಗುವ ಮು೦ಚೆಯೇ
ಕೊಲೆಯಾಗಿ ಹೋದ ಸ೦ಬ೦ಧಕ್ಕೆ
ಏನ೦ತ ಹೆಸರಿಡಲಿ ಗೆಳೆಯಾ.......
ನಿನ್ನ ನೆನಪಿನ ಸುಳಿಯಿ೦ದ
ಹೊರ ಬರಲು ಯತ್ನಿಸಿದಶ್ಟೂ
ಮತ್ತೂ ಆಳ ಹೋಗುವ ಪರಿಗೆ
ನಿನ್ನಿ೦ದ ದೂರಸರಿದಶ್ಟೂ
ನೀನೇ ಬೇಕೆನ್ನಿಸುವ ಹಟಕ್ಕೆ
ಹೇಗ೦ತ ಸಮಾಧಾನ ಪಡಿಸಲಿ ಗೆಳೆಯಾ.......
ನಿನ್ನ ಮೇಲಿಟ್ಟಿದ್ದ ಅಪಾರ ನ೦ಬಿಕೆಗೆ
ಜೀವ೦ತವಾಗಿ ಸುಡುತ್ತಿರುವ ನೆನಪಿಗೆ
ಮತ್ತೆ ಹಿ೦ತಿರುಗುವಿಯೆ೦ಬ ಆಸೆಗೆ
ನನ್ನೊಳಗಿನ ಸಾವಿರಾರು ಪ್ರಶ್ನೆಗಳಿಗೆ
ಕಾರಣವೇ ಹೇಳದ ಮೌನವಾಗಿ ಹೋದ
ನೀನಲ್ಲದೆ ಮತ್ತಾರು ಉತ್ತರಿಸಿಯಾರು..........?????
Comments
ಉ: ಕಾರಣ ಹೇಳುವೆಯಾ ಗೆಳೆಯಾ..........
In reply to ಉ: ಕಾರಣ ಹೇಳುವೆಯಾ ಗೆಳೆಯಾ.......... by Rajendra Kumar…
ಉ: ಕಾರಣ ಹೇಳುವೆಯಾ ಗೆಳೆಯಾ..........
ಉ: ಕಾರಣ ಹೇಳುವೆಯಾ ಗೆಳೆಯಾ..........
In reply to ಉ: ಕಾರಣ ಹೇಳುವೆಯಾ ಗೆಳೆಯಾ.......... by ನವೀನ್ ಕುಮಾರ್.ಎ
ಉ: ಕಾರಣ ಹೇಳುವೆಯಾ ಗೆಳೆಯಾ..........
ಉ: ಕಾರಣ ಹೇಳುವೆಯಾ ಗೆಳೆಯಾ..........
In reply to ಉ: ಕಾರಣ ಹೇಳುವೆಯಾ ಗೆಳೆಯಾ.......... by venkatb83
ಉ: ಕಾರಣ ಹೇಳುವೆಯಾ ಗೆಳೆಯಾ..........
ಉ: ಕಾರಣ ಹೇಳುವೆಯಾ ಗೆಳೆಯಾ..........
In reply to ಉ: ಕಾರಣ ಹೇಳುವೆಯಾ ಗೆಳೆಯಾ.......... by shweta hippargi
ಉ: ಕಾರಣ ಹೇಳುವೆಯಾ ಗೆಳೆಯಾ..........
ಉ: ಕಾರಣ ಹೇಳುವೆಯಾ ಗೆಳೆಯಾ..........
ಕಾರಣ ಕೇಳುತ್ತಿರುವ ಮನಸ್ಸಿನ ಮಾತನ್ನು ತುಂಬಾ ಪ್ರಾಸಬದ್ದವಾಗಿ ರಚಿಸಿದ್ದೀರ ಚೆನ್ನಾಗಿದೆ ...