ಕಾಲರಾತ್ರಿದೇವಿ (ಮಹಾ ಕಾಳಿ)

ಕಾಲರಾತ್ರಿದೇವಿ (ಮಹಾ ಕಾಳಿ)

ಕವನ

ಕಾರ್ಗತ್ತಲ ದೇವಿ ದಿವ್ಯತಥ್ಯ ವಿಶ್ವಹಾರ್ತಿ

ಶುಭವನ್ನೆ ಕೋರುತಿರುವೆ ದೇವಿ ಶುಭಂಕರಿ

ಕರಮುಗಿದು ಬೇಡುವೆ ನಿನ್ನನ್ನೆ ವಿಶ್ವಕಾರ್ತಿ

ದುಷ್ಟರಿಗೆ ದುಷ್ಕೃತ್ಯ ತೋರುವ ಭಯಂಕರಿ||

 

ಶ್ವಾಸೋಶ್ವಾದಿ ಅಗ್ನಿಜ್ವಾಲೆ ಸದಾ ಹೊಮ್ಮುತ

ಭೀಭತ್ಸೆತೆಯ ಹುಟ್ಟಿಸಿ ವೈರಿಪಡೆ ಸುಡುವಳು

ತ್ರಿನೇತ್ರಧಾರಿ ಗಾಢಾಂಧವ ಹೊದ್ದು ಬರುತ

ಅಸುರರ ಪಾಲಿಗೆ ದುಃಸ್ವಪ್ನದಿ ನಿಲ್ಲುವಳು||

 

ಧರ್ಮನಡೆಯ ಮೆಚ್ಚಿ ಅಧರ್ಮವ ತುಳಿದ

ಮಾತೃ ರೂಪಿಣಿ ಪಾರ್ವತಿಮಾತೆಯಿವಳು

ಜಗದಂಬೆ ಸುಮನ ಒಲವ ಸ್ಫೂರ್ತಿ ಸುಧ

ತಮವ ಅಳಿಸುತ ಬೆಳಕನು ನೀಡುವಳು...

 

ರಕ್ತ ಬೀಜಾಸುರನ ಹಠದಿ ವಧಿಸಿದ ದುರ್ಗೆ

ಯಾ ದೇವಿ ಸರ್ವಭೂತೇಸು ಕಾಲರಾತ್ರಿದೇವಿ

ನಂಬಿದವರ ನಿತ್ಯ ಸಲಹುವ ಕಾರ್ಯಮಾರ್ಗೆ

ಭಕ್ತರ ಕೈಬಿಡದ ದಿವ್ಯ ಗಾರ್ಧಭವಾಹಿನಿದೇವಿ..

 

ವಿದ್ಯುತ್ಮಾಲ ರೂಪಿತ ಚತುರ್ಭುಜ ರೂಪಿಣಿ

ಅಭಯಮುದ್ರೆ ವರಮುದ್ರೆ ತೋರುವ ಮಾತೆ

ಆದಿಶಕ್ತಿ ಪರಾಶಕ್ತಿ ದಿವ್ಯತೇಜ ಸ್ವರೂಪಿಣಿ

ಭಕ್ತರನು ಕಾಪಾಡು ಕಾರ್ಮುಗಿಲ ಪುಣ್ಯದಾತೆ...

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್