"ಕಾಲ"
ಓಂಟಿತನದ ಬೇಗೆಯಲ್ಲಿ ಬೆಂದು ನೊಂದಿದ್ದ
ಹಕ್ಕಿಯೊಂದು ಕಾದು ಕುಳಿತ್ತಿತ್ತು
ತನ್ನ ಜೊತೆಗಾಗಿ ಅಂದು...
ಎಲ್ಲಿಂದಲ್ಲೊ ಬಂದಿತೊಂದು ಹಕ್ಕಿ
ಗೊತ್ತೊ ಗೊತ್ತಿಲ್ಲದಂತೆಯ
ಮೊಡಿತು ಬಿಸಿತು ಮೊಹದ ಅಲೆಯು ಆ ಹಕ್ಕಿಯ ಮೇಲೆ...
ಜೊತೆ ಗೊಡಿದವು ಆಡಿದವು ಕೊಡಿದವು
ಸುಖ ದುಃಖದಲ್ಲಿ ಬಾಗಿಯಾದವು
ಬಿಟ್ಟುದಿಡದಂತೆ ಬಾಳಿದವು ಅಂದು....
ಬೀಗುತ್ತಿದ್ದವು ಸುಖದಲ್ಲಿ
ಯಾರು ಇಲ್ಲ ನಮ್ಮಂತೆ ಎಂದು
ಮುಂದೇಯು ಯಾರು ಇರುವುದಿಲ್ಲ ಈ ಜಗತ್ತಿನಲ್ಲಿ ಎಂದು... ಅಂದು
ಬೇಡವಾಗಿದ್ದರು ಸ್ನೆಹಿತರು...
ಬೇಡವಾಗಿದ್ದರು ಬಂದು ಬಾಂದವರು ...
ಬೇಡವಾಗಿದ್ದಳು ಹಡೆದ್ದವ್ವ ಅಂದು....
ಆದರೆ ಇಂದು ಯಾವ ಸಿಡಿಲು ಬಡಿದಿದೆಯೊ ಗೊತ್ತಿಲ್ಲ
ಯಾರ ದೃಷ್ಟಿ ತಗಲಿದೆಯೊ ಗೊತ್ತಿಲ್ಲ
ಬೆಡವಾಗಿದೆ ಜೊತೆಯಾಟ...
ಇಂದು ಬೇಕಾಗಿದ್ದರೆ ಹೆತ್ತವರು...
ಬಂದು ಬಾಂದವರು...
ಸುಖ ದುಃಖ ಹಂಚಿಕೊಳ್ಳಲು ಸ್ನೆಹಿತರು.....
ಹತ್ತಿರದಲ್ಲಿದ್ದರು ದೂರದಲ್ಲಿರುವಂತೆ
ಅವುಗಳಿಗೆ ಬೇಕೆನಿಸೆದೆ ಓಂಟಿತನ
ಬೇಡವಾಗಿದೆ ಅವುಗಳಿಗೆ ಗೆಳೆತನ....
ಅಂದು ಅಂದಿಕೋಂಡದ್ದೆ ಬೇರೆ
ಇಂದು ಆಗಿರುವುದೇ ಬೇರೆ.....
ಅಂದು ಬಯಸುತ್ತಿದ್ದವು ಸರಸ ಸಲ್ಲಾಪ
ಇಂದು ಬಂದೆರಗಿದೆ ವಿರಹ ನೋವು
ಇದುವೆಯ ವಿದಿಯಾಟ........?
ಇದನ್ನೆ "ಕಾಲ" ಎನ್ನುವುದಿರಬೇಕು.....