"ಕಾವೇರಿ - ಒಂದು ಚಿಮ್ಮು ಒಂದು ಹೊರಳು" ಪುಸ್ತಕ ಬಿಡುಗಡೆ
ಭಾಗ್ಯಲಕ್ಷ್ಮೀ ಪ್ರಕಾಶನ ಪ್ರಕಟಿಸಿರುವ ಪ್ರಸಿದ್ಧ ಸಾಹಿತಿ ಶ್ರೀ ಶೇಷನಾರಾಯಣ ಅವರ
ಕಾವೇರಿ - ಒಂದು ಚಿಮ್ಮು ಒಂದು ಹೊರಳು
ಕನ್ನಡ ಮತ್ತು ತಮಿಳು ಆವೃತ್ತಿಗಳ ಪುಸ್ತಕ ಬಿಡುಗಡೆ ಸಮಾರಂಭ
ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ (ಖ್ಯಾತ ಸಾಬಹಿತಿಗಳು)
ಮುಖ್ಯ ಅಥಿತಿಗಳು: ಡಾ. ಆರ್, ಪೂರ್ಣಿಮಾ (ಉದಯವಾಣಿ ಸಂಪಾದಕರು)
ಅಧ್ಯಕ್ಷತೆ: ಶ್ರೀ ಎ.ಜೆ. ಸದಾಶಿವ (ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರು)
ದಿನಾಂಕ: 2-8-2007 ಗುರುವಾರ ಸಂಜೆ 6ಕ್ಕೆ
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು - 560 002
(ಇದು ಕಾವೇರಿ ನದಿಯ ಪೂರ್ಣ ಚಿತ್ರಣವನ್ನು ವಿವರಿಸುವ ಗ್ರಂಥ. ಶತಮಾನಗಳ ಕಾಲ ಈ ನದಿಯ ಪ್ರಶ್ನೆ ಎರಡು ರಾಜ್ಯಗಳ ಭಾಂದವ್ಯವನ್ನು ಬೆಸುಗೆಯನ್ನು ಬಾಧಿಸಿದೆ. ಪೌರಾಣಿಕ ಕಾಲದಿಂದ ಈಗಿನ ನ್ಯಾಯಮಂಡಳಿ ತೀರ್ಪಿನವರೆಗೂ ಈ ನದಿಯ ಇತಿಹಾಸವನ್ನು ಆಧಾರಪೂರ್ವಕವಾಗಿ ಈ ಗ್ರಂಥ ಚಿತ್ರಿಸುತ್ತದೆ. ಕನ್ನಡದಲ್ಲಿ ಮೊದಲ ಆವೃತ್ತಿ ಪ್ರಕಟವಾದಾಗ "ಕಾವೇರಿ ನದಿಯ ಪೂರ್ಣ ಚಿತ್ರಣ ಇಷ್ಟರವರೆಗೂ ಈ ರೀತಿ ಪ್ರಕಟವಾದದ್ದೇ ಇಲ್ಲ" ಎಂದು ತಾಂತ್ರಿಕ ತಜ್ಞರು, ವಿದ್ವಾಂಸರು, ಪತ್ರಿಕೆಗಳು ಶ್ಲಾಘಿಸಿವೆ.
ಶ್ರೀ ಶೇಷನಾರಾಯಣ ಕನ್ನಡ-ತಮಿಳು ಎರಡೂ ಭಾಷೆಗಳಲ್ಲಿ ಪರಿಣತರಾಗಿದ್ದಾರೆ. ಈ ಗ್ರಂಥವನ್ನು ತಮಿಳಿಗೆ ಅನುವಾದಿಸಿದ್ದಾರೆ. ಕಲ್ಕಿಯಿಂದ ಪ್ರಾರಂಭವಾಗಿ ಅಶೋಕ ಮಿತ್ರನ್ ವರೆಗೆ ಹಲವರ ಉತ್ಕೃಷ್ಟ ಕೃತಿಗಳನ್ನು ತಮಿಳಿನಿಂದ ಕನ್ನಡಕ್ಕೂ ಜ್ಞಾನಪೀಠ ಬಿರುದಾಂಕಿತರಾದ ಮಾಸ್ತಿ ಮುಂತಾದವರ ಕೃತಿಗಳನ್ನು ಕನ್ನಡದಿಂದ ತಮಿಳಿಗೂ ಭಾಷಾಂತರ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಯನ್ನೂ ತಮಿಳುನಾಡು ಸರ್ಕಾರದ ಕುರಳ್ ಪೀಠಂ ಪ್ರಶಸ್ತಿಯನ್ನೂ ಪಡೆದಿದ್ದಾರೆ)