ಕಾವೇರಿ ಪ್ರತಿಭಟನೆ ಮೆಗಾಧಾರಾವಾಹಿ ಆಗಬೇಕೇ?
ಬರಹ
ಕಾವೇರಿ ನ್ಯಾಯಾಧೀಕರಣದ ತೀರ್ಪು ಬಂದು ಈಗಾಗಲೇ ಮೂರು ವಾರಗಳು ಕಳೆದುವು.ತೀರ್ಪು ರಾಜ್ಯದ ಹಿತಕ್ಕೆ ಮಾರಕ,ಅದರ ವಿರುದ್ಧ ನ್ಯಾಯಾಲಯದ ಮೆಟ್ಟಲು ಹತ್ತಬೇಕು ಇಲ್ಲವೇ ನ್ಯಾಯಾಧಿಕರಣದ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎನ್ನುವ ಒಕ್ಕೊರಲಿನ ಕೇಳಿಕೆ ಜನರಿಂದ ಬಂದಿದೆ. ಮಂಡ್ಯದ ಸಂಸತ್ಸದಸ್ಯ ರಾಜೀನಾಮೆ ನೀಡಿ,ದೇಶಕ್ಕೆ ಸಂದೇಶ ಹೋಗುವಂತೆ ಮಾಡಿದ್ದಾಗಿದೆ. ಇನ್ನೆರಡು ದಿನಗಳಲ್ಲಿ ಸರಕಾರದ ನಿರ್ಧಾರವೂ ಸ್ಪಷ್ಟವಾಗಲಿದೆ. ಆದರು ರಾಜ್ಯದಾದ್ಯಂತ ರಸ್ತೆ ತಡೆ,ಪ್ರತಿಕೃತಿ ದಹನ,ಘೆರಾವೋ..ಹೀಗೆ ಚಳುವಳಿ ಅವಿರತವಾಗಿ ನಡೆದಿದೆ.ಈ ರೀತಿ ಪ್ರತಿಭಟನೆಗಳನ್ನು ಮಾಡಿ ಜನರ ದೈನಂದಿನ ಜೀವನವನ್ನು ಇನ್ನಷ್ಟು ತ್ರಾಸದಾಯಕವಾಗಿ ಮಾಡಬೇಕೇ? ಇಂತಹ ಪ್ರದರ್ಶನ ಹೋರಾಟಗಳಿಂದ ಹೊರಬಂದು ನೈಜ ಹೋರಾಟವನ್ನು ನ್ಯಾಯಾಲಯದಲ್ಲಿ ನೀಡುವುದಕ್ಕೆ ಗಮನ ಹರಿಸುವುದು ಬೇಡವೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕಾವೇರಿ ಪ್ರತಿಭಟನೆ ಮೆಗಾಧಾರಾವಾಹಿ ಆಗಬೇಕೇ?