ಕಾಸಿಲ್ಲದ ಖಾಲಿ ಜೇಬು
ಕವನ
ಕಾಸಿಲ್ಲದ ಖಾಲಿ ಜೇಬು
ಕೂತು ತಿನ್ನಲು ಇಲ್ಲ ಜಾಬು //
ಕೈ ಕಾಲು ಸರಿಯಿದೆ
ಮಾತಾಡಲು ಬಾಯಿದೆ
ಜಗ ನೋಡಲು ಕಣ್ಣಿದೆ
ದುಡಿಯಲು ಮೂರಡಿ ಜಾಗ ಇಲ್ಲ
ಮಡಿದರೂ ಹೂಳಲು ನನ್ನವರಿಲ್ಲ
ಇದು......
ಕಾಸಿಲ್ಲದ ಖಾಲಿ ಜೇಬು //
ಮನೆಮನೆಗೆ ತಿರುಗುವೆ ಹೊಟ್ಟೆಪಾಡಿಗೆ
ಬೀದಿಯಲಿ ಅಲೆಯುವೆ ತುಂಡು ಬಟ್ಟೆಗೆ
ಮೆಚ್ಚಿನವರು ಮೆಟ್ಟಿ ನಡೆವರು
ಹುಚ್ಚನೆಂದು ಅಟ್ಟಿಬಿಡುವರು
ನಾನೇನು ಮಾಡಲಿ..? ನನ್ನದು..
ಕಾಸಿಲ್ಲದ ಖಾಲಿ ಜೇಬು //
ಗುಣವನ್ನು ಹಣದಿಂದ ಅಳೆವ ಧಿಮಾಕು
ಹಣವಿಲ್ಲದ ಹೈದ ಹೆಣವಾದರೆ ಸಾಕು
ದುಡ್ಡಿದ್ದರೆ ದಡ್ಡನೂ ಬುದ್ಧಿವಂತ
ಪ್ರೀತಿ, ವಿಶ್ವಾಸ ಹೆಸರಿಗಷ್ಟೇ ಸೀಮಿತ
ನಾನೇನು ಮಾಡಲಿ..? ನನ್ನದು..
ಕಾಸಿಲ್ಲದ ಖಾಲಿ ಜೇಬು
ಪ್ರೀತಿಯೊಂದೇ ನನ್ನ ಜವಾಬು //
-ಭಾರತಿ ಗೌಡ. ಶಿರಸಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್