ಕಿರಿಕಿರಿ

ಕಿರಿಕಿರಿ

ಬರಹ

ತಾರೆಗಳಿಗೇಕಿಂತ ನಾಚಿಕೆ..
ಮುಖ ಮುಚ್ಚಿ, ಬೆರಳ
ಸಂದುಗಳಲ್ಲಿ ನೋಡಿ..
ನಗುತ್ತಿರುವುದಾದರೂ..
ಏತಕೆ ??

ಮುದಿ ಚಂದಿರನಿಗೇಕೋ,
ಏನೋ ಹುಸಿನಗು..
ಅಣಕಿಸಿ ಅಂದಂತೆ..ಇದೆಲ್ಲಾ
ನಾ ವಯಸ್ಸಲ್ಲಿ ಮಾಡಿ..
ಬಿಟ್ಟಿದ್ದಲ್ಲವೇ.. ಮಗು..

ಅವಳ ಬೆಚ್ಚಗಿನ
ಸಾನಿಧ್ಯವ ಸವಿಯಲು ಬಿಡದೆ..
ತರಿಸುವುದು ಚಳಿ..
ಸುಳಿಸುಳಿದು ಸುಮ್ಮನೆ ಮೂಗು
ತೂರಿಸುವ ಅಧಿಕಪ್ರಸಂಗಿ
ತಂಗಾಳಿ..

ಅದೆಷ್ಟೆ..ನಿರ್ಜನ ಜಾಗಕ್ಕೇ..
ಹೋಗಲಿ..ಈ ಮೂವರದ್ದೆ..
ಕಿರಿಕಿರಿ.
ನನ್ನವಳ ಹೇಗೆ ಮುದ್ದಿಸಲಿ,
ಇವರನ್ನೆಲ್ಲಾ ವಂಚಿಸಿ ?
ತಿಳಿಯದಾಗಿದೆ ದಾರಿ..