ಕಿರಿಕ್ಕು ಟ್ರಾಫಿಕ್ಕು

ಕಿರಿಕ್ಕು ಟ್ರಾಫಿಕ್ಕು

ಬರಹ

ಬೆಂಗಳೂರು ಮಹಾನಗರ...ದಿನಾಲು ಬೆಳಿಗ್ಗೆ ಕೆಲ್ಸಕ್ಕೆ ಹೊರಡೋದೇ ತಲೆನೋವು.

2 ವ್ಹೀಲರ್ ಆಗ್ಲಿ, 4 ವ್ಹೀಲರ್ ಆಗ್ಲಿ, ತಲೆಬಿಸಿ..ನಾನು ನನ್ನ ಬೈಕಿನಲ್ಲಿ ಆರ್.ಟಿ. ನಗರದಿಂದ 12 ಕಿಮೀ ದೂರದಲ್ಲಿರೋ ನಮ್ಮ ಆಫೀಸಿಗೆ ದಿನಾಲೂ ಓಡಾಡ್ತೀನಿ. ಡೈಲಿ ಒಂದಲ್ಲಾ ಒಂದು ಕಿರಿಕ್ಕು ಇದ್ದದ್ದೇ. ಆಟೋನವರದ್ದು ಆಗ್ಲಿ, ಬಸ್ಸಿನವರದ್ದಾಗ್ಲಿ, ಪಾದಚಾರಿಗಳದ್ದಾಗ್ಲಿ, ಅಥವಾ, ನಮ್ಮ ಪಕ್ಕದಲ್ಲೇ ಜುಂಯ್ ಅಂಥಾ ಪಾಸ್ ಆಗೋ ದ್ವಿಚಕ್ರಿಗಳದ್ದಾಗ್ಲಿ.

ಇವತ್ತು (17-3-08 ಸೋಮವಾರ) ಆಫೀಸಿಗೆ ಬರಬೇಕಾದ್ರೆ, ಇನ್ಫೆಂಟ್ರಿ ರಸ್ತೆಯಲ್ಲಿ, ಒಂದು ಬಿಎಂಟೀಸಿ ಬಸ್ಸಿನ ಹಿಂದೆ ಬರ್ತಾ ಇದೀನಿ, ಆ ಮನುಷ್ಯನೋ, ಹಾವಿನ ಥರಾ ಜಿಗ್-ಜಾಗ್ ಓಡುಸ್ತಾ ಇದಾನೆ.. ಬಲಗಡೆಯಿಂದ ಟೇಕ್ ಓವರ್ ಮಾಡೋಣಾ ಅಂತ ಬಂದ್ರೆ, ಆ ಕಡೇನೇ ಬರ್ತಾನೆ, ಎಡಗಡೆಯಿಂದ ಮುನ್ನುಗ್ಗೋಣ ಅಂದ್ರೆ, ಪುನಃ ಆ ಕಡೆ ಬರ್ತಾನೆ. ನೋಡೋ ತನಕ ನೋಡಿ, ಸಡನ್ನಾಗಿ ಮುಂದೆ ಬಂದು, ಗಾಡಿ ನಿಲ್ಸಿ, ಅವನನ್ನೂ ನಿಲ್ಸೋ ಹಾಗೆ ಮಾಡ್ದೆ..
ತಕ್ಷಣ ಶುರು ಹಚ್ಕೊಂಡೆ, "ಬೋ ಮಗ್ನೆ, ರಸ್ತೆ ಏನ್ ನಿಮಪ್ಪಂದಾ ? ಅವಾಗ್ಲಿಂದಾ ನೋಡ್ತಾ ಇದೀನಿ, ಒಳ್ಳೇ ಹಾವಿನ್ ಥರಾ ಓಡುಸ್ತಾ ಇದ್ಯಲ್ಲೋ ಬೇವರ್ಸಿ... ಏನ್ ನಿನ್ ಬಸ್ಸು ರಸ್ತೇಲಿ ಹೋಗ್ಬೇಕಾದ್ರೆ, ಯಾರೂ ಓವರ್ಟೇಕ್ ಮಾಡ್ಬಾರ್ದಾ ??".
ಅವ್ನೂ ಕೂಡಾ "ಬೋ ಮಗ್ನೆ, ಏನೋ ನಿಂದು? ಜಾಸ್ತಿ ಮಾತಾಡ್ಬೇಡ, ಸರಿ ಇರಲ್ಲಾ..ಮುಂದೆ ಜಾಗ ಇರೋ ಹಾಗೆ ಓಡುಸ್ತೀನಿ, ನೀನ್ ಯಾರೋ ಕೇಳಕ್ಕೆ" ಅಂದವ್ನೇ, ಬಸ್ಸನ್ನ ಗೇರ್ ಗೆ ಹಾಕಿ, ಆಕ್ಸಿಲರೇಟರ್ ಒತ್ತಿ, ನಂಗೆ ಢಿಕ್ಕಿ ಹೋಡೆಯೋ ಚಮಕ್ ಕೊಡೋಥರಾ ಮಾಡಿದ.. ಅದಕ್ಕೆ ನಾನು, "ತಿ* ಮುಚ್ಕೊಂಡು ಹೋಗೋ ಬೇವರ್ಸಿ, ಗಾಡಿ ಓಡಿಸೋಕ್ಕೆ ಬಂದ್ರೆ, ಓಡ್ಸು, ಇಲ್ಲಾಂದ್ರೆ ತಿ* ಅದುಮ್ಕೋಂಡು ಮನೆಲಿ ಬಿದ್ದಿರು, ಈ ಚಮಕ್ ಎಲ್ಲಾ, ಆ ನಾರ್ಥಿಗಳ ಹತ್ರ ಇಟ್ಕೋ, ಮಗ್ನೆ ನೆಟ್ಟಗೆ ಇರಲ್ಲಾ ನಿನಯ್ಯನ್, ಮುಖ ಮೂತಿ ನೋಡ್ದೆ ಬೀಳ್ತಾವೆ...."ಅಂತ ಆವಾಜ್ ಹಾಕಿ, ಜಾಸ್ತಿ ಜಗಳ ಮಾಡಿ ಕೊಂಡ್ರೆ,ಇಡೀ ದಿನ ಖರಾಬ್ ಆಗಿ ಇರತ್ತೆ ಅನ್ಕೊಂಡು, ಹೊರ್ಟೆ..(ಇನ್ನೂ ಏನೇನೋ ಭಯಂಕರ ಮಾತುಗಳು ನಡೆದ್ವು, ಅದನ್ನೆಲ್ಲಾ ಇಲ್ಲಿ ಹಾಕಕ್ಕೆ ಆಗಲ್ಲ)

ಇದೇನು ತನ್ನ ಶೌರ್ಯದ ಬಗ್ಗೆ, ಅಥವಾ ನನ್ನ ಅತುತ್ತಮ ಬೈಗುಳ ವೊಕ್ಯಾಬುಲರಿ ಬಗ್ಗೆ ಪುಂಗ್ತಾ ಇದಾನೆ ಅನ್ಕೋಬೇಡಿ. ನಾನೊಬ್ನೇ ಅಲ್ಲಾ ಕಣ್ರೀ, ಇದು ಸಾಮಾನ್ಯವಾಗಿ ಎಲ್ರೂ ದಿನಾಗ್ಲೂ ನೋಡೋದು, ಅನುಭವಿಸೋದು ಅಷ್ಟೇನೇ. ಯಾಕೆ ? ನೀವು ಖರಾಬಾಗಿ ಟ್ರಾಫಿಕ್ಕಲ್ಲಿ ಯಾರ ಜೊತೇನೂ ಜಗಳಾ ಕಾದಿಲ್ವಾ ?? ದಿನಾ ಬೆಳಗಾದ್ರೂ ಇದೇ ಹಣೇಬರಹ...
ಯಾಕೆ ಹಿಂಗೆ ಅಂತ ಕೇಳಿ ನೋಡಿ... ಏನು ಉತ್ತರ ಸಿಗುತ್ತೆ ಗೊತ್ತಾ ? "ಅಯ್ಯೋ, ಟೆನ್ಶನ್ನು ಸ್ವಾಮಿ", "ಸರಿಯಾಗಿ ಮಾನಿಟರ್ ಮಾಡೋಕ್ಕೆ ಪೊಲೀಸರು ಇಲ್ಲಾ", "ಆಫೀಸಿಗೆ ಟೈಂ ಆಗುತ್ತೆ, ಅದಕ್ಕೆ".

ಅಲ್ಲ ಕಣ್ರೀ, ಎಲ್ಲಾನೂ ನೋಡ್ಕೊಳಕ್ಕೆ ಪೊಲೀಸ್ರೇ ಆಗ್ಬೇಕು ಅಂದ್ರೆ, ನಮ್ಮದು ಏನು ? ದಿನಾಗ್ಲೂ ಹೇಳ್ತಾರೆ, "ಬೆಂಗಳೂರು ಮಹಾನಗರದ ಟ್ರಾಫಿಕ್ ಸಮಸ್ಯೆ ನಿವಾರಿಸಲು ಅಲ್ಲಿ ಅದನ್ನು ಇಷ್ಟು ಕೋಟಿ ರೂ ಖರ್ಚಿನಲ್ಲಿ ಅಳವಡಿಸಲಾಗುತ್ತಿದೆ, ಇನ್ನಷ್ಟು ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ". ನಿಜವಾದ ಸಮಸ್ಯೆ ಬಗೆಹರಿಯೋದು ಜನರಲ್ಲಿ ಜಾಗೃತಿ ಮೂಡಿಸಿದಾಗ.
ಎಲ್ಲಾ ಬರೀ ರೂಲ್ಸು, ರೂಲ್ಸು ಅಂತ ಬೊಂಬ್ಡಿ ಹಾಕಿ, ಅದನ್ನ ಪಾಲಿಸೋರೇ ಇಲ್ದೆ ಇದ್ರೆ ಏನು ಬಂತು ? ಸರ್ಕಾರ ಎಷ್ಟೇ ಕೋಟಿ ಖರ್ಚು ಮಾಡಿದ್ರೂ, ಎಷ್ಟೆ ಸಿಬ್ಬಂದಿ ನೇಮಿಸಿದ್ರೂ ಕೂಡಾ ಅದು "ಹೊಳೇಲಿ ಹುಣಿಸೇಹಣ್ಣು ಕಿವುಚಿದ ಹಾಗೆ".

ಇದರ ಒಂದು ಲೈವ್ ಉದಾಹರಣೆ ಅಂದ್ರೆ, ಟ್ರಾಫಿಕ್ಕನ್ನು ಮಾನಿಟರ್ ಮಾಡಕ್ಕೆ ಇನ್ಫೆಂಟ್ರಿ ರಸ್ತೆಯ, ಕಾಫಿ ಬೋರ್ಡ್ ಪೊಲೀಸ್ ಕಮಿಷನರ್ ಆಫೀಸ್ ಜಂಕ್ಷನ್ನಲ್ಲಿ CC TV ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಇವತ್ತಿನವರೆಗೂ ಅವು ಕೆಲಸ ಮಾಡ್ತಾ ಇದ್ಯೋ ಇಲ್ವೋ ಅಂತಾ ಕೂಡಾ ಗೊತ್ತಿಲ್ಲ.. ಹಾಗೇ, ಮಾನಿಟರ್ ಎಲ್ಲಿ, ಹೇಗೆ, ಯಾರು ಮಾಡ್ತಾರೆ ಅಂತಾ ಕೂಡಾ ಗೊತ್ತಿಲ್ಲ. ಆ ತೆರನಾದ ಮಾಡ್ರನ್ ಪರಿಕರಗಳ ಪರಿಚಯ, ಕಾರ್ಯವಿಧಾನ ನಮ್ಮ ಪೊಲೀಸ್ ಪಡೆಗೆ ಇದೀಯಾ ಅಂತ ಕೂಡಾ ಡೌಟ್ ಇದೆ.

ಅವಾಗ್ಲೇ ಹೇಳಿದ ಹಾಗೆ, ಈ ಸಮಸ್ಯೆ ಬಗೆಹರಿಯೋದು ಸ್ವಲ್ಪ (ಜಾಸ್ತಿ ಸ್ವಲ್ಪ ) ಡೌಟೇ, ಆದ್ರೂ ಕೂಡಾ ಸಮಸ್ಯೆಯನ್ನ ಕಮ್ಮಿ ಮಾಡಬಹುದು. ಜನರಲ್ಲಿ ಜಾಗೃತಿ ಮುಖ್ಯ. ಈ ನಮ್ಮ ತಲೆಮಾರಲ್ಲಿ ಆಗೋದು ಭಯಂಕರ ಅನುಮಾನ ಇದೆ. ಆದ್ರೆ, ಕಡೇ ಪಕ್ಷ ನಾವು ಟ್ರಾಫಿಕ್ನಲ್ಲಿ ಪಟ್ಟ ಪಾಡು ನಮ್ಮ ಮುಂದಿನ ಪೀಳಿಗೆ ಪಡದೇ ಇರಬೇಕಾದ್ರೆ, ಮಕ್ಕಳಲ್ಲಿ ಈ ಜಾಗೃತಿ ಮೂಡಿಸಬೇಕು.

ಒಬ್ಬ ತಂದೆ, ತನ್ನ ಮಗುವನ್ನು ಗಾಡಿಯಲ್ಲಿ ಸ್ಕೂಲಿಗೆ ಕರ್ಕೊಂಡು ಹೋಗಬೇಕಾದ್ರೆ, ಟ್ರಾಫಿಕ್ ಜಾಮ್ ಅಂತಾ, ಫುಟ್ಪಾತಿನ ಮೇಲೆ ಹೋಗೋದು, ಸಿಗ್ನಲ್ ಜಂಪ್ ಮಾಡೋದು, ರಾಂಗ್ ಸೈಡಿನಲ್ಲಿ ನುಗ್ಗೋದು, ಎಡಗಡೆಯಿಂದ ಓವರ್ ಟೇಕ್ ಮಾಡೋದು, ಸುಮ್ನೆ ಎಡಗೈ ಹೆಬ್ಬೆರಳು ಗಟ್ಟಿ ಇದೆ ಅಂತ ಹಾರನ್ ಹೋಡೀತಾ ಇದ್ರೆ, ಆ ತಂದೆಯ ಜೊತೆ ಇರೋ ಮಗೂಗೆ ಏನ್ರೀ ಟ್ರಾಫಿಕ್ ಸೆನ್ಸ್ ಬರುತ್ತೆ ? ಅದೂ ಕೂಡಾ, "ಹೆಂಗಾದರೂ ಹೋದು, ಯಾವುದರ ಮೇಲಾದ್ರೂ ಹೋಗು.. ಒಟ್ಟಿನಲ್ಲಿ ನೀನು ಗಾಡಿ ಓಡುಸ್ಕೊಂಡ್ ಹೋಗು" ಅನ್ನೋ ಬುದ್ಧಿ ಕಲಿಯುತ್ತೆ. ಚಿಕ್ಕ ವಯಸ್ಸಿನಲ್ಲೇ ಈ ಥರ ಆದ್ರೆ, ದೇವರಾಣೇಗ್ಲೂ ಮುಂದೆ ಅದನ್ನು ತಿದ್ದೋಕ್ಕೆ ಆಗಲ್ಲ.
ಮಕ್ಕಳಿಂದ ಈ awareness ಶುರು ಮಾಡಿದರೆ, ಗ್ಯಾರಂಟಿ ಏನಾದ್ರೂ ಛೇಂಜ್ ಕಾಣಬಹುದು.

ದಯವಿಟ್ಟು, ಆದಷ್ಟೂ ಟ್ರಾಫಿಕ್ ನಿಯಮಗಳನ್ನು ಪಾಲಿಸಿ. ನಿಮ್ಮ ಮನೆ ಮಕ್ಕಳಿಗೆ ಟ್ರಾಫಿಕ್ ಪಾಠ, ರೂಲ್ಸು, ಕಾಮನ್ ಸೆನ್ಸು ಹೇಳಿಕೊಡಿ. ಇದು ನನ್ನ ಒಂದು ವಿನಮ್ರ ರಿಕ್ವೆಸ್ಟ್.
________________________________________________________________________________________

ಕಟ್ಟೆ ಶಂಕ್ರ

ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com