"ಕಿರುಬ"ನ ಕಿತಾಪತಿ

"ಕಿರುಬ"ನ ಕಿತಾಪತಿ

Comments

ಬರಹ

ಈಶ್ವರಪ್ಪನವರಿಗೆ ಖಂಡಿತಾ ಬುದ್ದಿ ಭ್ರಮಣೆಯಾಗಿದೆ. ಇತ್ತೀಚೆಗೆ ಉಡುಪಿಯಲ್ಲಿ ನೀಡಿರುವ ಹೇಳಿಕೆ ಕುರುಬ ಜನಾಂಗದವರನ್ನು ತಲೆತಗ್ಗಿಸುವಂತಾಗಿದೆ. ಕುರುಬ ಜಾತಿಯನ್ನು ಇವರನ್ನೇನು ಗುತ್ತಿಗೆ ಪಡೆದಿರುವರೇನೋ ಎಂಬ ಶಂಕೆ ಹಲವರಲ್ಲಿ ವ್ಯಕ್ತವಾಗಿದೆ. ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಜನಾಂಗದ ಪ್ರಶ್ನಾತೀತ ನಾಯಕರು ಎಂದೊಪ್ಪಲು ಇಷ್ಟಪಡದ ಇವರ ಬಾಲಿಶವಾದ ಇದು.

1950-60 ದಶಕದಲ್ಲಿ ರಾಜ್ಯದ ಹಣಕಾಸು ಸಚಿವರಾಗಿದ್ದ ಟಿ.ಎಂ. ಮರಿಯಪ್ಪ ಕುರುಬ ಸಮಾಜದ ಮೊದಲ ರಾಜಕೀಯ ಜಾಗೃತದಾರರೆನ್ನಬಹುದು. ಅವರು ವಿಧಿವಶರಾದ ನಂತರ ಮುಖಂಡರ ಕೊರತೆಯನ್ನು ಕುರುಬ ಸಮಾಜ ಅನುಭವಿಸುತ್ತಿತ್ತು. ಈ ಸಮುದಾಯ ದಿಕ್ಕು ದೆಸೆ ತಪ್ಪಿದ ಕಾಲದಲ್ಲಿಯೇ ಹೆಚ್‌. ವಿಶ್ವನಾಥ್ ಕಾಂಗ್ರೆಸ್‌ನಲ್ಲಿದ್ದು ಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲಾರಂಭಿಸಿದರು. ಆದರೆ ವಿಶ್ವನಾಥ್ ಕೇವಲ ಹಳೆಯ ಮೈಸೂರು ಪ್ರಾಂತ್ಯಕ್ಕೆ ಮೀಸಲಾದರೇ ಹೊರತು ರಾಜ್ಯಕ್ಕೆ ಸಮಾಜದ ಮುಖಂಡರಾಗಲಿಲ್ಲ. ಈ ಸಮಯದಲ್ಲಿ ಬಿರುಗಾಳಿಯಂತೆ ರಾಜ್ಯ ನಾಯಕರಾದವರು ಸಿದ್ದರಾಮಯ್ಯ ಜನತಾದಳದಲ್ಲಿದ್ದುಕೊಂಡು.

ಬಹುಶಃ ಸಿದ್ದರಾಮಯ್ಯನವರಿಗೆ ಈ ರೀತಿಯ ಜಾತಿಯ ಜಾಗೃತಿ ಆಗಿದ್ದು ಅವರ ರಾಜಕೀಯ "ಗುರು" ಮಾಜಿ ಪ್ರಧಾನಿ ದೇವೇಗೌಡರ ಪ್ರಭಾವ ಹಾಗೂ ವರ್ಚಸ್ಸು ಎನ್ನಬಹುದು. ಅಥವಾ ಗೌಡರ ಪ್ರಲೋಭನೆ ಕೂಡ ಎನ್ನಬಹುದು. ಏಕೆಂದ್ರೆ, ಇದೇ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದುಕೊಂಡೇ ಕೇಳದೇ ಬಂದ ನಸೀಬಿನ ಸಹಾಯದಿಂದ ದೇವೇಗೌಡರು ಪ್ರಧಾನಿ ಮಟ್ಟಕ್ಕೇರಿದರು. ಅದಕ್ಕೂ ಮೊದಲು ರಾಜ್ಯದಲ್ಲಿ "ವಿಶ್ವ ಒಕ್ಕಲಿಗ ಸಮುದಾಯ" ಅಯೋಜಿಸಿ ಯಶಸ್ವಿಯು ಕೂಡ ಆಗಿದ್ದರು.

ಗೌಡರು ಪ್ರಧಾನಿಯಾದ ನಂತರ ನಿರೀಕ್ಷೆಯಂತೆ ಸಿದ್ದರಾಮಯ್ಯಗೆ ಒಳ್ಳೆಯ ಘಳಿಗೆ ಕೂಡಿ ಬಂತೆನ್ನಬಹುದು. ಗುರುಗಳ ಹಾದಿಯನ್ನೇ ತುಳಿದ ಸಿದ್ದು ಪಟೇಲರ ಸಚಿವ ಸಂಪುಟದಲ್ಲಿ ಪ್ರಭಾವಿಯಾದರು. ಇವರು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡಿನಲ್ಲಿ "ಕುರುಬ ಸಮುದಾಯದ ಸಮಾವೇಶ" ಅದ್ದೂರಿಯಾಗಿ ಏರ್ಪಡಿಸಿ ಮಿಂಚಿನಂತೆ ರಾಜ್ಯದ ನಾಯಕರಾದರು. ಅಂದಿನಿಂದ ಕೋಲಾರದಲ್ಲಿ ಅಹಿಂದ ಸಮಾವೇಶ, ಕಾಗಿನೆಲೆ ಪ್ರಾಧಿಕಾರ ರಚನೆ ಸೇರಿದಂತೆ ಇತ್ತೀಚಿನ ಉದುಪಿಯ ಕನಕ ಗೋಪುರ ವಿಚಾರವಾಗಿ ತಮ್ಮ ಸ್ಪಷ್ಟ ಹಾಗೂ ನೇರ ನುಡೆ ಹಾಗೂ ಕೆಲವು ಸಿಡುಕುತನದ ಮೂಲಕ ಮನೆಮಾತಾದರು. ಆಗಲಂತೂ ಈಶ್ವರಪ್ಪನವರ ಹೆಸರು ಶಿವಮೊಗ್ಗ ಬಿಟ್ಟು ಅದೆಷ್ಟೋ ಜನರಿಗೆ ತಿಳಿದೇ ಇರಲಿಲ್ಲ. ಆದರೆ ಇದೀಗ ಬಹಳ ರಾಜರೋಷವಾಗಿ ಮಾತಾಡುತ್ತಿದ್ದಾರೆ , ಅದು ಚೆಡ್ಡಿಗಳ ಪ್ರಭಾವದಿಂದ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕುರುಬ ಸಮಾಜದಿಬ್ಬರು ಸಚಿವರಿದ್ದರೂ ಕಾರ್ಯ ಮಾತ್ರ ಶೂನ್ಯ. ಏನು ತೊಡೆ ದಪ್ಪ ಕೊಟ್ಟು ಬಿಡಿ ಎನ್ನುತ್ತಿಲ್ಲ. ಸ್ವಲ್ಪ ಕಿರುಬೆರಳು ಗಾತ್ರದ ಸಹಾಯ.. ಛೇ.. ಎಲ್ಲಿಂದ ಬರಬೇಕು. ಆ ಬೃಹಸ್ಪತಿಗಳು ಮತ್ಯಾರು ಅಲ್ಲ "ದಿ ಗ್ರೇಟ್ ಈಶ್ವರಪ್ಪ" ಹಾಗೂ ಬೀದರಿನ ನರಸತ್ತ ನಾಯಕ ಅಧಿಕಾರಕ್ಕಾಗಿ ಎಂಜಲು ಎತ್ತಲು ತಯಾರಾಗಿದ್ದ ಬಂಡೆಪ್ಪ ಕಾಶೆಂಪೂರ್‍.

ಆ ಸಮಯದಲ್ಲಿ ಇವರಿಬ್ಬರ ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ಓದಿದವರಿಗೆ ಗೊತ್ತಿರುತ್ತದೆ. ಒಮ್ಮೆ, ಸ್ವಾಮಿ ನಾವು ಕುರುಬರು. ನಮಗೆ ಇಂತಹ ಕೆಲಸ ಆಗಬೇಕಿತ್ತು. ನಾವು ಇಂತಹ ಸಮಾವೇಶ ಹಮ್ಮಿಕೊಂಡಿದ್ದೀವಿ. ತಾವು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶಿರವಹಿಸಿ ಕೇಳಿದರೆ ಇವರಿಬ್ಬರ ಉತ್ತರ ಏನು ಗೊತ್ತೆ...... " ನಮಗೆ ಮುಖ್ಯಮಂತ್ರಿ ಹಾಗೂ ಡೆಪ್ಯೂಟಿ ಸಿಎಂ ಆಜ್ಞೆ ಆಗಿದೆ. ಕುರುಬ ಜಾತಿಯ ಕಾರ್ಯಗಳಿಗೆ ಹಾಜರಾಗುವ ಹಾಗಿಲ್ಲ. ಇದನ್ನು ಮರೆತರೆ ನಮ್ಮ ಅಧಿಕಾರಕ್ಕೇ ಕುತ್ತು ಬರಲಿದೆ" ಎಂದರು . ಇಂತಹ ನರಸತ್ತ ನಾಯಕರು ಸಿದ್ದರಾಮಯ್ಯ, ವಿಶ್ವನಾಥ್ ಕುರಿತು ಮಾತನಾಡುವುದಕ್ಕ ಯಾವುದೇ ನೈತಿಕ ಹಕ್ಕಿಲ್ಲ.

ಅನಂತರ, ಇತ್ತೀಚೆಗೆ ಜರುಗಿದ ಅನೇಕ ಘಟನೆಗಳು ತಮಗೆಲ್ಲಾ ಗೊತ್ತಿರುವ ವಿಚಾರಗಳೇ..

ಅದಕ್ಕೂ ಮೊದಲು ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡರು ಎಂದವರು ಅದೆಷ್ಟೋ ಜನ..... ನೀವೊಮ್ಮೆ ರಾಜಕೀಯ ತಿರುವು ಹಾಕಿ ನೋಡಿ. ಜಾತಿಯಿಂದಲೇ ಮುಖ್ಯಮಂತ್ರಿಯಾದ ದೇವೇಗೌಡ, ಎಸ್ಸೆಂ ಕೃಷ್ಣ ಇವರಿಗೆಲ್ಲಾ ಶ್ರೀ ರಕ್ಷೆಯಾಗಿದ್ದು ಜಾತಿ ಬಲವೇ ಹೊತು ಬೇರೇನು ಅಲ್ಲ. ಅತ್ತ ಮೈಸೂರು ದಿವಾನಗಿರಿಯಲ್ಲಿ ವಿಶ್ವೇಶರಯ್ಯ ಆಗಲಿ ಆರ್ಕಾಟ್ ರಾಮಸ್ವಾಮಿ ಆಗಿರಬಹುದು ಇವರೆಲ್ಲಾರೂ ಅಂದ ಕಾಲದಲ್ಲೇ ತಮಿಳು ಬ್ರಾಹ್ನಣಕ್ಕೆ ಮೊದಲ ಆದ್ಯತೆ ನೀಡುತ್ತಿದ್ದುದ್ದು ಇತಿಹಾಸದಲ್ಲಿ ಗಮನಿಸಬಹುದು. ಹಾಗೆಯೇ ಇವರನ್ನು ಸೆಡ್ಡು ಹೊಡೆಯಲೆಂದೇ ಲಿಂಗಾಯತ ಕೋಮಿನವರನ್ನು ಮೇಲ್ಪಂಕ್ತಿಗೆ ಏರಿಸಿದ್ದು ನಿಜಲಿಂಗಪ್ಪನವರು. ಇಂದಿಗೂ ಯಡಿಯೂರಪ್ಪನವರ ಅಧಿಕಾರ ಒಮ್ಮೆ ನೋಡಿ. ಆಯಕಟ್ಟಿನ ಸ್ಥಳಗಳು ಹಾಗೂ ವರ್ಗಾವಣೆ ವಿಚಾರದಲ್ಲಿ ಅವರ ಮೊದಲ ಮಾನದಂಡ ಯಾವುದೆಂದು ಸ್ಪಷ್ಟವಾಗುತ್ತದೆ.

ನನಗೆ ಖಂಡಿತ ಯಾವ ಕೋಮನ್ನೂ ಅಣಕಿಸುವ, ನೋಯಿಸುವ ಇರಾದೆಯಂತೂ ಇಲ್ಲ. ಒಂದೇ ಕೋಮಿನಲ್ಲಿದ್ದೂ ಇನ್ನೊಬ್ಬ ಮುಖಂಡರನ್ನು ಇನ್ನೊಬ್ಬರ ಅಣತಿಯಂತೆ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಹೇಳಿಕೆ ನೀಡಿದ ಈಶ್ವರಪ್ಪನವರ ಮೇಲಷ್ಟೇ ಸಿಟ್ಟು. ಇನ್ನು ಮೇಲಾದರು ಅಧಿಕಾರಕ್ಕೆ ಅಂಟಿಕೂರದೆ ಸ್ವಂತ ವಿವೇಚನೆಯಿಂದ ವರ್ತಿಸಲು ಮಹಾಸ್ವಾಮಿಗಳು ಮುಂದಾಗಬೇಕು. ಅದು ಬಿಟ್ಟು ಮೊಸರು ತಿಂದು ಮೇಕೆ ಬಾಯಿಗೆ ಉಜ್ಜುವ ತಂತ್ರವನ್ನು ಕೈಬಿಡಲಿ..

ಡೌನ್‌ ಡೌನ್.. ಈಶ್ವರಪ್ಪ ... ಡೌನ್‌ ಡೌನ್‌

- ಬಾಲರಾಜ್‌ ಡಿಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet