ಕೀಯು, ಕೈಗುಳಿಗೆ-2

ಕೀಯು, ಕೈಗುಳಿಗೆ-2

ಬರಹ

ಪೆಲಟಲೈಸೇಷನ್ ಎಂಬ ಪ್ರಕ್ರಿಯೆ ಕನ್ನಡಕ್ಕೆ ಅನ್ಯವಾದುದು.

ಕೀಯುವಿಕೆ  ಎನ್ದರೆ ಕೊಳೆಯುವಿಕೆ. ಕೀವು(ನಾ.) ಇದರಿನ್ದಲೇ ಹುಟ್ಟಿಕೊಣ್ಡಿದೆ.ನಾಮಪದವಾಗಿ ಕೀವು ಮಾತ್ರ ಹೆಚ್ಚು ಬೞಕೆಯಲ್ಲಿದೆ.

ಇತರ ದ್ರಾವಿಡಾದಿ ಭಾಷೆಗಳಲ್ಲಿ:
ಚೀಯು(ಮ.) ಕ್ರಿಯಾಪದವಾಗಿ ಬೞಕೆಯಲ್ಲಿದೆ. ನಾಮಪದವಾಗಿ ವ್ಯಾಪಕ ಬೞಕೆಯಿಲ್ಲ.

ಪೆಲಟಲೈಸೇಷನ್ ಎನ್ದರೆ ,
ಪದಾದಿಯ ಕಂಠ್ಯ ತಾಲವ್ಯವಾಗಿ ಮಾರ್ಪಡುವನ್ತಹುದು.ಮೂಲ ದ್ರಾವಿಡ ತಾಲವ್ಯಾದಿಯಲ್ಲವೆನ್ದು ಊಹಿಸಲಾಗಿದೆ.(ದೊರೆತಿರುವ ದಾಖಲುಗಳನ್ನು ಆಧರಿಸಿ).

 

ಕೆರೆ(ಕ)  - ಚೆರೆ(ಮ), ಎರಡೂ ಬಣ್ಡಿ ರೇಫಗಳು.
ಕೇರೆ (ಕ)- ಚೇರೆ(ಮ)
ಕಿರಿಯ (ಕ)- ಚೆರಿಯ, ಎರಡೂ ಬಣ್ಡಿ ರೇಫಗಳು.
(ಈ ಉದಾಹರಣದಲ್ಲಿ ಇ ~ ಎ ಮಾರ್ಪಾಡೂ ಒಡಮೂಡಿದೆ).
ಗೆದ್ದಲು(ಕ)  -  ಚೆದಲು(ಮ)
ಗೆಯ್ (ಕ) -  ಚೆಯ್  (ಮ)


ಅನ್ದರೆ,

ಮೂಲದ್ರಾವಿಡದಲ್ಲಿ  ಕಂಠ್ಯದಿನ್ದ ತೊಡಗುವ ಒರೆಗಳು ಕನ್ನಡದಲ್ಲಿ ಕಂಠ್ಯವಾಗಿಯೇ ಉಳಿದುಕೊಳ್ಳುತ್ತವೆ ಮತ್ತು ಕೀಯು ಇನ್ತಹ ಬೞಕೆಯ ಒನ್ದು ರೂಪು.

ಕೈಗುಳಿಗೆ: ಮೇಲಣ ಅಂಶಗಳನ್ನು ಪರಿಗಣಿಸಿದರೆ 'ಚೆನ್ದಾವರೆ' ಕನ್ನಡವಲ್ಲವೆನ್ದು ಸ್ಪಷ್ಟ. ಆದರೂ ಕನ್ನಡದಲ್ಲಿ ಚೆನ್ದಾವರೆಯನ್ತಹ ಬೞಕೆಗಳು ಉಳಿದುಕೊಣ್ಡಿರುವುದಕ್ಕೆ ತಾಲವ್ಯ ಪ್ರಕ್ರಿಯೆಗೊಳಪಡುವ ಭಾಷೆಗಳ ಪ್ರಭಾವವೇ ಕಾರಣ. ಈ ದೋಷವನ್ನು ಮನೋಧರ್ಮವೆನ್ದು ಒಪ್ಪಿಕೊಳ್ಳಬಹುದು(ಬೇಕಾದರೆ ಧ್ವನಿಯಲ್ಲಿ). ಹಾಗೆ ಒಪ್ಪಿಕೊಣ್ಡರೂ 'ಚೆನ್ದಾವರೆ' ಕನ್ನಡದ ಮನೋಧರ್ಮವಲ್ಲವೆನ್ದು ನೆನಪಿಡಬೇಕು.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet