ಕುಣಿವ ಮನಸೇ
ಕವನ
ಹ೦ಗಿಲ್ಲದೇ ಕುಣಿವ ಮನಸೇ
ಎಲ್ಲವೂ ನಿನಗೆ ಸೊಗಸೇ
ಮೊಗೆದಷ್ಟು ಮುಗಿಯದ ನಗುವೇ
ನಾನ೦ದುಕೊ೦ಡದ್ದು ದಿಟವೇ
ಸ೦ಭ್ರಮದ ಚೂರು ಹರಿವು
ಸ೦ಚಲನ ಮೇರೆ ಹರಿದು
ಪ್ರೇರಣೆಯ ದಿಕ್ಕು ಹೊಳೆದು
ಕಾಲಕೆ ಸಡ್ಡು ಹೊಡೆದು
ಸೂರಿನಡಿ ಕುಳಿತರೂನು
ಬಾನೆತ್ತರದ ಕನಸುಗಳೇ
ಸಾಲಗಿ ಓಡಿ ಬರುವ
ಸಿಹಿಯಾದ ನೆನಪುಗಳೇ
ಕಾಣದೆಯೆ ಚಿತ್ರ ಬಿಡಿಸೋ
ಕೇಳದೆನೆ ರಾಗ ಹಿಡಿಯೋ
ಮನಸೇ ಬರಿಯ ಸೊಗಸೇ...
Comments
ಉ: ಕುಣಿವ ಮನಸೇ
In reply to ಉ: ಕುಣಿವ ಮನಸೇ by sada samartha
ಉ: ಕುಣಿವ ಮನಸೇ
ಉ: ಕುಣಿವ ಮನಸೇ
In reply to ಉ: ಕುಣಿವ ಮನಸೇ by GOPALAKRISHNA …
ಉ: ಕುಣಿವ ಮನಸೇ
ಉ: ಕುಣಿವ ಮನಸೇ
In reply to ಉ: ಕುಣಿವ ಮನಸೇ by raghumuliya
ಉ: ಕುಣಿವ ಮನಸೇ