ಕುತ್ತಿಗೆ ಸೀಳಿ..ಹಾಲನು ಕುಡಿವೆ…
ಕವನ
ಕುತ್ತಿಗೆ ಕಡಿಯಲು ಇರಿಸಿದ ಕತ್ತಿಯ
ಹಾಲನು ಖುಷಿಯಲಿ ಕುಡಿಯುತಿಹ
ಕತ್ತಿಯ ಹರಿತಕೆ ಸೀಳಿದ ಕುತ್ತಿಗೆ
ಮತ್ತದು ಪಡೆಯದು ಮರುಜೀವ
ಬೆಳೆದಿಹ ವೃಕ್ಷದ ಕಾಂಡವ ಕಡಿಯುತ
ನಡುವಲಿ ಇವನಿಗೆ ದಣಿವಾಯ್ತೆ
ಬಳಲಿಕೆ ಕಳೆಯಲು ನೆರಳನು ನೀಡುವ
ವೃಕ್ಷದ ನೆರವದು ಮರೆತೋಯ್ತೆ
ಅಡೆತಡೆ ಇಲ್ಲದೆ ಅನುದಿನ ಮಾನವ
ಮಾಡುವ ಗಾಳಿಯ ಮಾಲಿನ್ಯ
ಜರಡಿಯನಾಡುತ ಶುದ್ಧದ ಗಾಳಿಯ
ನಮಗದು ಕೊಡುವುದು ಪ್ರತಿನಿತ್ಯ
ಗಿಡವನು ನೆಡುವುದು ಪುಣ್ಯದ ಕಾರ್ಯವು
ಆಗದೆ ಹೋದರೆ ಸುಮ್ಮನಿರು
ಪೀಳಿಗೆಗಾಗಿಯೆ ಇರುವುದ ಉಳಿಸಿಕೊ
ನೀಡದೆ ಉಳಿಯದು ಅದು ಉಸಿರು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
