ಕುರುಕುರು ಚಕ್ಕುಲಿ

ಕುರುಕುರು ಚಕ್ಕುಲಿ

ಬೇಕಿರುವ ಸಾಮಗ್ರಿ

ಅಕ್ಕಿ - ೪ ಕಪ್, ಉದ್ದಿನಬೇಳೆ - ೧ ಕಪ್, ಜೀರಿಗೆ - ೪ ಚಮಚ, ಇಂಗು - ಕಾಲು ಕಪ್, ತುಪ್ಪ - ೧ ಕಪ್, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಅಕ್ಕಿಯನ್ನು ತೊಳೆದು, ಬಸಿದು ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿ. ನೀರಿನ ಪಸೆ ಆರುವವರೆಗೆ ಸ್ವಲ್ಪ ಬಿಸಿ ಮಾಡಿ. ಉದ್ದಿನ ಬೇಳೆಯನ್ನು ಕೆಂಪಗೆ ಹುರಿದು ಅಕ್ಕಿಯೊಂದಿಗೆ ಸೇರಿಸಿ ನುಣ್ಣಗೆ ಹುಡಿ ಮಾಡಿ. ಈ ಹಿಟ್ಟಿಗೆ ಜೀರಿಗೆ, ತುಪ್ಪ, ಇಂಗು, ಉಪ್ಪು ಸೇರಿಸಿ ಕಲಸಿ. ನಂತರ ಈ ಹಿಟ್ಟಿನ ಮಿಶ್ರಣಕ್ಕೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಕಲಸಿದ ಹಿಟ್ಟಿನ ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದು ಚಕ್ಕುಲಿಯ ಒರಳಿನಲ್ಲಿ (ಅಚ್ಚು) ತುಂಬಿ ಕಾದ ಎಣ್ಣೆಯಲ್ಲಿ ಚಕ್ಕುಲಿ ಕರಿಯಿರಿ. ರುಚಿಯಾದ ಕುರುಕುರು ಚಕ್ಕುಲಿ ತಿನ್ನಲು ರೆಡಿ.