ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೩

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೩

ಬರಹ

ಭೂಮಿ ಗುಂಡಾಗಿದೆ ಎಂದು ಹೇಳಿದವರು ಯಾರು?

ಈಗಿನ ನಮ್ಮ ಪಠ್ಯ-ಪುಸ್ತಕಗಳಲ್ಲಿ Kepler, Copernicus, Galileo ಎಂದು ಹೇಳಿರುತ್ತಾರೆ. ಅವರೆಲ್ಲ ೧೬ ಅಥವ ೧೫ ಶತಮಾನಕ್ಕೆ ಸೇರಿದವರು. ನಮ್ಮ ಪ್ರತಿಭಾವಂತ ಭಾರತೀಯರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೇ? ಅವರ ಅರಿವನ್ನು ಅರಸುತ ಅಲೆದರೆ ನಮಗೆ ಏನು ಕಾಣುತ್ತದೆ?

ಭೂ-ಗೋಳ (ಭೂಮಿ-ಗೋಳವಾಗಿದೆ) ಶಾಸ್ತ್ರ ಎಂದಲ್ಲವೆ ನಾವಿದನ್ನು ಓದಿದ್ದು!!!

ಈಗ ವಾಸ್ತವಕ್ಕೆ ಬರೋಣ, ಭೂಗೋಳ ಎಂಬ ಪದ ಎಷ್ಟು ಹಳೆಯದು?
ಸುಪ್ರಸಿಧ್ದ ಭಾರತದ ಖಗೊಳಶಾಸ್ತ್ರಜ್ಞ ಆರ್ಯಭಟ್ಟ(೪೭೬ AD) ಹೀಗೆ ಹೇಳಿದ್ದಾನೆ:

ಭೂಗೋಳಃ ಸರ್ವತೋ ವೃತ್ತಃ(ಆರ್ಯಭಟ್ಟೀಯಂ, ಗೋಲಪಾದ - ಶ್ಲೋಕ ೬)
(ಭೂಮಿಯು ಎಲ್ಲಾ ಕಡೆಗಳಿಂದಲೂ ವೃತ್ತಾಕಾರದಲ್ಲಿದೆ.)
ಆವನು ತನ್ನ ೫ನೇ ಶ್ಲೋಕದಲ್ಲಿ, ಭೂಮಿಯ ವ್ಯಾಸವನ್ನು, ಕರಾರುವಕ್ಕಾಗಿ ಹೇಳಿದ್ದಾನೆ.
ಆರ್ಯಭಟ್ಟೀಯಂ, ಅಧ್ಯಾಯ ೧ - ಶ್ಲೋಕ ೫

ಇನ್ನೊಬ್ಬ ಸುವಿಖ್ಯಾತ ಭಾರತದ ಖಗೊಳಶಾಸ್ತ್ರಜ್ಞ ವರಾಹಮಿಹಿರ(೬ನೇ ಶತಮಾನ ಆಡ್) ಈ ರ್‍ಈತಿ ಹೇಳಿದ್ದಾನೆ..
ಪಂಚ ಮಹಾಭೂತಮಯಸ್ತ್ರಾರಾಗಣ ಪನ್ಜರೇ ಮಹೀಗೋಲಃ
("ಪಂಚ ಸಿಧ್ದಾಂತಿಕ, ೧೩ನೆ ಅಧ್ಯಾಯ - ಶ್ಲೊಕ ೧)
ಪಂಚಭೂತಗಳಿಂದಾಗಿರುವ ಗೋಳಾಕಾರದ ಭೂಮಿಯು ಅಂತರಿಕ್ಷದಲ್ಲಿದೆ, ಅದು ತಾರಾಗಣವೆಂಬ(Celestial Sphere) ಪಂಜರದಲ್ಲಿದೆ ಎಂದು ಸ್ವಾರಸ್ಯಕರವಾಗಿ ಹೇಳಿದ್ದಾನೆ.

ಈಗ ಮೊದಲ ಬಾರಿಗೆ ವೇದದ ವಿಷಯಕ್ಕೆ ಹೋಗೋಣ ವೇದಗಳೂ: ಋಗ್ವೇದ
ಚಕ್ರಾಣಾಸಃ ಪರೀಣಹಂ ಪೃಥಿವ್ಯಾಃ (ಋಗ್ವೇದ ೧.೩೩.೮)
ವೇದದಲ್ಲಿ ಹುಡುಕಿದರೆ ಹೀಗೆ ನಾನಾ ಕಡೆಗಳಲ್ಲಿ ಭೂಮಿ ಗುಂಡಾಗಿದೆ ಎಂದು ಹೇಳಿರುವುದು ಕಂಡುಬರುತ್ತದೆ...

ಸೂರ್ಯ ಸಿಧ್ದಾಂತ, ಮತ್ತು ಪ್ರಾಚೀನ ಭಾರತದ ಖಗೊಳಶಾಸ್ತ್ರ ಗ್ರಂಥಗಳಿಂದ ಅರಿವಿಗೆ ಬರುವುದೇನಂದರೆ,

ಮಧ್ಯೇ ಸಮನ್ತಾಣ್ಡಸ್ಯ ಭೂಗೋಲೋ ವ್ಯೋಮ್ನಿ ತಿಶ್ಥತಿ (೧೨ ಅಧ್ಯಾಯ - ೩೨ ಶ್ಲೊಕ)
ಬ್ರಹ್ಮಾಂಡದ ಮದ್ಯದಲ್ಲಿ ಭೂಮಿ ಸ್ತಿರವಾಗಿ ನಿಂತಿದೆ?
೧೧ ಶತಮಾನದ ಪ್ರಸಿದ್ದ ಗಣಿತಙ್ಞ ಭಾಸ್ಕರಚಾರ್ಯರು ತಮ್ಮ ಗ್ರಂಥ ಲೀಲಾವತಿಯಲ್ಲಿ ಕೊಟ್ಟ ಉತ್ತರ "

ನೀನು ಏನು ನೊಡುತ್ತಿದ್ದೀಯೊ ಅದು ನಿಜವಲ್ಲ. ಭೂಮಿ ನಿನಗೆ ಕಾಣುತ್ತಿರುವಂತೆ ಚಪ್ಪಟೆಯಾಕಾರದಲ್ಲಿಲ್ಲ, ಆದು ಗೋಳಾಕಾರದಲ್ಲಿದೆ. ನೀನು ಒಂದು ದೊಡ್ಡ ಗೋಳವನ್ನು ರಚಿಸಿ, ಅದರ ೧/೪ ಪರದಿಯನ್ನು ನೊಡಿದರೆ ಅದು ಸರಳ ರೇಖೆಯಂತೆ ಕಾಣುತ್ತದೆ, ಆದರೆ ನಿಜವಾಗಿಯೂ ಅದು ವೃತ್ತಾಕಾರದಲ್ಲಿದೆ, ಆದೇ ರೀತಿ ಭೂಮಿಯು ಕೂಡ ಗೋಳಾಕಾರದಲ್ಲಿದೆ.

ಭೂಮಿಯ ವ್ಯಾಸವನ್ನು ಹೇಗೆ ಕಂಡುಹಿಡಿಯಲು ಸಾಧ್ಯ ಎಂಬ ಯೋಚನೆ ಬರುವುದು ಸಹಜವೇ? ಸ್ವಲ್ಪ ವೈಙ್ಞಿನಿಕವಾಗಿ ಯೋಚಿಸಿದಲ್ಲಿ ಉತ್ತರ ಹೊಳೆಯುವುದು ...

ಮೂಲ: ಇ-ಮೇಯ್ಲ್ & Eternally Talented India 108 Facts.