ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
ಓದುಗ ಮಿತ್ರರಿಗೆಲ್ಲ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣಾಷ್ಟಮಿ ಮತ್ತು ಕ್ರಿಸ್ಮಸ್ ಎರಡೂ ಸಂಭ್ರಮದ ಹಬ್ಬಗಳು. ಈ ಎರಡೂ ಭಗವದ್ ಅವತಾರಗಳ ಜೀವನ ಮತ್ತು ಸಂದೇಶಗಳಲ್ಲಿ ಅನೇಕ ಸಾಮ್ಯಗಳಿವೆ. ಕೆಲವು ಕುತೂಹಲಕಾರಿ ಹೋಲಿಕೆಗಳನ್ನು ಪಟ್ಟಿಮಾಡಿದ್ದೇನೆ. ಗಮನಿಸೋಣ.
ಈ ಎರಡೂ ಅದ್ಭುತ ಅವತಾರಗಳೂ ಪೌರಾತ್ಯ ಜಗತ್ತಿನಿಂದ ಉಗಮಿಸಿದ್ದು. ಇವರೀರ್ವರ ತಂದೆ ತಾಯಂದಿರೂ ಧರ್ಮನಿಷ್ಠ ದೈವಭಕ್ತರು. ಯಾದವ ಕೃಷ್ಣ ಸೆರೆಮನೆಯಲ್ಲಿ ಜನಿಸಿದರೆ, ಯೇಸು ಕ್ರಿಸ್ತನ ಜನನ ಕೊಟ್ಟಿಗೆಯಲ್ಲಾಯಿತು. ಬಾಲಕ ಕೃಷ್ಣನಿಗೆ ರಾಜ ಕಂಸನ ಕಾಟವಾದರೆ, ಬಾಲಯೇಸುವಿಗೆ ರಾಜ ಹೆರೋಡ್ನ ಕಾಟ!
ಕೃಷ್ಣ ಗೊಲ್ಲನಾಗಿ ತನ್ನ ಲೀಲೆಗಳನ್ನು ತೋರಿದರೆ, ಯೇಸು ಕುರುಬನಾಗಿ ಪವಾಡಗಳನ್ನು ಮಾಡಿದ. ಅಜ್ಞಾನದ ಸಂಕೇತವಾದ ಕಾಳಿಯನ್ನು ಕೃಷ್ಣ ಜಯಿಸಿದರೆ ಯೇಸು ಸೈತಾನನನ್ನು ಜಯಿಸುತ್ತಾನೆ. ತನ್ನ ಭಕ್ತರನ್ನು ಕೊಂಡೊಯ್ಯುತ್ತಿದ್ದ ಹಡಗನ್ನು ಬಿರುಗಾಳಿಯಿಂದ ಯೇಸು ರಕ್ಷಿಸಿದರೆ, ವಿನಾಶಕಾರಿ ಮಳೆಯಿಂದ ತನ್ನ ಭಕ್ತರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನೇ ಕೃಷ್ಣ ಎತ್ತಿ ಹಿಡಿಯುತ್ತಾನೆ.
ಇಹಲೋಕದ್ದಲ್ಲದಿದ್ದರೂ ಯಹೂದ್ಯರ ರಾಜನೆಂದು ಯೇಸು ಕರೆಸಿಕೊಂಡರೆ, ಕೃಷ್ಣ ಇಹ ಮತ್ತು ಪರಗಳೆರಡರ ಒಡೆಯ. ಯೇಸುವಿನ ಸಂದೇಶ ಸಾರಲು ಮೇರಿ, ಮಾರ್ತ ಮತ್ತು ಮೇರಿ ಮಗ್ದಲೀನ್ ಎಂಬ ಮಹಿಳಾ ಭಕ್ತರಿದ್ದರೆ, ಕೃಷ್ಣನ ಜೀವನದಲ್ಲಿ ರಾಧೆ ಮತ್ತು ಇತರೆ ಗೋಪಿಯರು ಪವಿತ್ರವಾದ ಪಾತ್ರವನ್ನು ವಹಿಸುತ್ತಾರೆ.
ಯೇಸು ಕ್ತಿಸ್ತನನ್ನು ಶಿಲುಬೆಗೆ ಮೊಳೆ ಹೊಡೆದು ಏರಿಸಲ್ಪಟ್ಟರೆ, ಕೃಷ್ಣ ಬೇಡನೊಬ್ಬನ ಬಾಣದಿಂದ ಪ್ರಾಣಾಂತಕವಾಗಿ ಗಾಯಗೊಳ್ಳುತ್ತಾನೆ. ಈ ಎರಡೂ ಅವತಾರಗಳ ಬಗ್ಗೆ ಧರ್ಮಗ್ರಂಥಗಳಲ್ಲಿ ಭವಿಷ್ಯವಾಣಿ ಹೇಳಲ್ಪಟ್ಟಿತ್ತು. ಈ ಅವತಾರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮಗಳಲ್ಲಿ ಅತ್ಯುನ್ನತ ದೈವೀ ಪುರುಷರೆಂದು ಪರಿಗಣಿಸಲಾಗಿದೆ.
ಯೇಸು ಕ್ರಿಸ್ತ ಮತ್ತು ಭಗವಾನ್ ಕೃಷ್ಣ ಪ್ರಪಂಚಕ್ಕೆ ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಪವಿತ್ರ ಗ್ರಂಥಗಳನ್ನು ನೀಡಿದ್ದಾರೆ. ಭಗವದ್ಗೀತೆಯಲ್ಲಿನ ಶ್ರೀ ಕೃಷ್ಣನ ಉಪದೇಶವೂ ಯೇಸು ಸ್ವಾಮಿಯ ಹೊಸ ಒಡಂಬಡಿಕೆಯಲ್ಲಿನ ಸಂದೇಶವೂ ಪಾರಮಾರ್ಥಿಕ ಸತ್ಯದ ಅಭಿವ್ಯಕ್ತಿಯಾಗಿದೆ. ಈ ಎರಡೂ ಪವಿತ್ರ ಗ್ರಂಥಗಳೂ ಮೂಲತಃ ಒಂದೇ ತತ್ವವನ್ನು ಬೋಧಿಸುತ್ತವೆ.
ಕ್ರಿಸ್ತ ಬೋಧಿಸಿದ ಗಹನವಾದ ಧರ್ಮ ಈಗ ಕಣ್ಮರೆಯಾಗಿದೆ ಎಂದು ನನ್ನ ಭಾವನೆ. ಕೃಷ್ಣನಂತೆ ಯೇಸುವೂ ಯೋಗವನ್ನು ತನ್ನ ಅನುಯಾಯಿಗಳಿಗೆ ಕಲಿಸಿಕೊಟ್ಟಿದ್ದ. ಧರ್ಮ ದೇಶಗಳ ಎಲ್ಲೆ ಮೀರಿದ ಈ ಸತ್ಯಗಳನ್ನು ಇಪ್ಪತ್ತೊಂದನೆಯ ಶತಮಾನದ ನಾಗರೀಕ ಸಮಾಜ ಸ್ವೀಕರಿಸುವುದೆಂದು ಆಶಿಸುತ್ತೇನೆ.
(ಎನ್.ಅಂಜನ್ ಕುಮಾರ್ ರವರ ಈ ಬರಹ ದಿನಾಂಕ ೦೪/೦೯/೨೦೦೭ ರಂದು(ಜನ್ಮಾಷ್ಟಮಿ) ದಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟಗೊಂಡಿತ್ತು
Comments
ಉ: ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
In reply to ಉ: ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ by muralihr
ಉ: ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
ಉ: ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
ಉ: ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ