ಕೆಚ್ಚೆದೆಯ ರಾಣಿ ದುರ್ಗಾವತಿ

ಕೆಚ್ಚೆದೆಯ ರಾಣಿ ದುರ್ಗಾವತಿ

ಕವನ

ಚಾಂಡಲ್ ಚಕ್ರವರ್ತಿ ಕೀರತ್ ರೈ ಪುತ್ರಿ ದುರ್ಗಾವತಿ

ಉತ್ತರಪ್ರದೇಶದ ಕಳಂಜರ್ ಕೋಟೆಯ ಮಣ್ಣಿನ ಮಗಳು

ಸಕಲ ಶಸ್ತ್ರಶಾಸ್ತ್ರಾಭ್ಯಾಸಗಳ ಕಲಿತ ಕುವರಿ

ಗೊಂಡ ರಾಜವಂಶದ ದಲ್ಪತ್ ಶಾಹನ ಮಡದಿ

 

ಕುವರ ವೀರನಾರಾಯಣನಿಗೆ ಮಾತೆಯೆನಿಸಿದಳು

ಪತಿಯ ಆಕಸ್ಮಿಕ ಮರಣಕ್ಕೆ ಧೃತಿಗೆಡದ ವೀರನಾರಿ

ಮಗನೊಂದಿಗೆ ರಾಜ್ಯಾಡಳಿತದ ಚುಕ್ಕಾಣಿ ಹಿಡಿದಳು

ಅಧರ್ ಕಾಯಸ್ಥ ಮಾನ್ ಠಾಕೂರ್ ಬೆಂಗಾವಲಿಗೆ ನಿಂತರು

 

ಸಾತ್ಪುರ ಶ್ರೇಣಿಯ ಮೇಲೆ ರಾಜಧಾನಿ ನಿರ್ಮಾಣ

ಭದ್ರಕೋಟೆ ಶತ್ರುಗಳ ಪ್ರವೇಶ ತಡೆಯುವಿಕೆ

ಮಾಲ್ವಾದ ಯುವರಾಜ ದುರ್ಗಾವತಿಗೆ ವಿರೋಧಿ

ರಾಣಿ ಪಡೆ ವಿಜಯಮಾಲೆಯ ಧರಿಸಿತು

 

ಮೊಘಲ್ ದೊರೆ ಅಕ್ಬರ್ ಗಡಿಯವರೆಗೆ ಆಕ್ರಮಿಸಿದ

ರಾಣಿಯ ರಾಜ್ಯ ವಿಸ್ತಾರ ಸಂಪತ್ತು ಮೊಘಲ್ ದೊರೆಯ ಸೆಳೆಯಿತು

ಸಾಮ್ರಾಜ್ಯಶಾಹಿ ಅಕ್ಬರ್ ರಾಣಿಯ ರಾಜ್ಯ ಪ್ರವೇಶಿಸಿದ

ರಾಜಿ ಸಂಧಾನ ಎಂದರೆ ಶರಣಾಗತಿ ಅವಮಾನವೆಂದಳು 

 

ಗೌರವಯುತ ಸಾವೇ ಸರಿಯೆಂದು ಯುದ್ಧ ಸಾರಿದಳು

ಯಾರೇ ಪಿತೂರಿ ನಡೆಸಿದರೂ ರಾಣಿ ವಿಜಯಿಯಾದಳು

ಶತ್ರುಗಳ ಮೇಲೆ ಧಾಳಿ ರಾತ್ರಿ ಎಸಗುವಂತೆ ತಂತ್ರ ಹೆಣೆದಳು.

ತಂತ್ರ ಫಲಿಸದೆ ಗಾಯಗೊಂಡು ಸೋತುಬಿದ್ದಳು 

 

ಕೈಯ ಕಠಾರಿಯನು ತನ್ನೆದೆಗೆ ಚುಚ್ಚಿಕೊಂಡಳು

ಜೂನ್ ಇಪ್ಪತ್ತನಾಲ್ಕು ರಾಣಿಯ ಹುತಾತ್ಮ ದಿನ.

ಇದುವೇ ವರ್ತಮಾನದಲಿ ಬಲಿದಾನ್ ದಿವಸವಾಯಿತು

ಸ್ವಾಭಿಮಾನದ ಕೆಚ್ಚೆದೆಯ ಪುರುಷಸಿಂಹದಂತೆ ‌ಹೋರಾಡಿದಳು

 

ಧೀರ ವೀರ ಮೊಘಲರಿಗೆ ಸಿಂಹಸ್ವಪ್ನ  ಗಾಂಭೀರ್ಯದ ರಾಣಿ

ಭಾರತ ಮಾತೆಯ ಮಡಿಲಿನಲಿ ಘರ್ಜಿಸಿದ ಯುವರಾಣಿ

ಸತ್ತರೂ ಸ್ವಾಭಿಮಾನ ಬಿಡೆನೆಂದ ಕೆಚ್ಚೆದೆಯವಳು

ರಾಣಿಯ ಗೌರವಾರ್ಥ ಅಂಚೆಚೀಟಿ ಬಿಡುಗಡೆ

ಜಬ್ಬಲ್ಪುರ ವಿ.ವಿಗೆ ರಾಣಿ ದುರ್ಗಾವತಿಯ ಹೆಸರು ಘೋಷಣೆ

ಮೊಘಲರ ವಿರುದ್ಧ ಹೋರಾಡಿದ ರಾಣಿಯ ಜನುಮ ದಿನವಿಂದು

ನೆನೆವೆ ಈ ದಿನ ಭರತಖಂಡದ ಅಮೂಲ್ಯ ರತ್ನವನ್ನು

(ಅಕ್ಟೋಬರ್ ೫ ರಾಣಿ ದುರ್ಗವತಿಯ ಜನ್ಮದಿನ)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್