ಕೆಲವು ಹನಿಗಳು...
ಕವನ
ಪೋಲಿಸ್ ಪರೀಕ್ಷೆ
ಮತ್ತೆ ಬಂತು
ಮತ್ತೆ ಬಂತು
ಪೋಲಿಸ್
ಪರೀಕ್ಷೆ-
ಎಚ್ಚರಾ
ಎಚ್ಚರಾ...
ಈ ಬಾರಿ ಸಶಸ್ತ್ರ
ಪೋಲಿಸ್
ಪಡೆಯ ಆಯ್ಕೆ-
ಎಚ್ಚರವಿರಲಿ
ಜೊತೆಯಿದೆ
ಆಯುಧಾ!
***
ವಿಡಂಬನೆ
ಕರ್ನಾಟಕದಲಿ-
ಡಬಲ್
ಎಂಜಿನ್
ಸರ್ಕಾರ;
ರಿವರ್ಸ್ ಗೇರ್
ಸರ್ಕಾರ...
ಒಬ್ಬರನು
ಇನ್ನೊಬ್ಬರು
ಹಳಿಯುವುದೇ
ರಾಜಕೀಯ
ವಿಡಂಬನಾ
ವಿಕಾರ!
***
ನಿರ್ವಹಣೆ/ರಿಪೇರಿ
ಜೀವನದ
ಅತ್ಯುತ್ತಮ
ನಿರ್ವಹಣೆಯೇ
ನಿಮಗೆ
ಬಲು
ಸುಖದಾಯಕವು...
ತಪ್ಪಾದಮೇಲಿನ
ರಿಪೇರಿ
ಆಗುವುದು
ಎಲ್ಲರಿಗೂ
ಬಹು
ಕಷ್ಟದಾಯಕವು!
***
ಬಜೆಟ್
ಬಿಟ್ಟಿ ಭಾಗ್ಯಗಳ
ಅರಸಿ ಆಸೆಯಿಂದ
ಆರಿಸಿದವರಿಗೆ-
ಪರಮ ಉಂಡೇ ನಾಮ;
ಇನ್ನು ಕೆಲವರಿಗೆ
ಬಯಸದೇ ಬಂದ ಭಾಗ್ಯ....
ಯಾರಿಗುಂಟು
ಯಾರಿಗಿಲ್ಲ?
ಯಲ್ಲಮ್ಮನ ಜಾತ್ರೇಲಿ-
ಉಂಡವರೇ
ಪರಮ ಜಾಣರೆಲ್ಲ;
ಸಿಕ್ಕದವರದೇ ದೌರ್ಭಾಗ್ಯ!
***
ಸುಂದರ-ಭೀಕರ
ಜಗವೆಲ್ಲಾ
ಸೌಂದರ್ಯದ
ಹಂದರ-
ಅದು
ಹೇಳಿದಂತೆ
ಕೇಳಿದಾಗ...
ಘೋರಾ
ಭೀಕರ-
ನೀನದಕೆ
ವ್ಯತಿರಿಕ್ತವಾಗಿ
ವ್ಯವಹರಿಸಿ
ನಡೆದಾಗ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್