ಕೆಲವು ಹನಿಗಳು...
ಪ್ರವೀಣ!
ಜನಪ್ರಿಯ
ಗಾದೆ-
ಹುಚ್ಮುಂಡೆ
ಮದುವೇಲಿ
ಉಂಡವನೇ
ಜಾಣ...
ಇದನ್ನು
ಅಕ್ಷರಶಃ
ಸಾಧಿಸಿದವನೇ
ನಮ್ಮೂರ
ರಾಜಕೀಯ
ಪ್ರವೀಣ!
***
ಚಾಪ್ಲಿನ್-ಉವಾಚ
ಸುರಿವ
ಮಳೆಯೊಳಗೆನ್ನ
ನಿಲ್ಲಿಸಿಬಿಡು-
ಮಳೆಯ ಜೊತೆಗೆ
ಕಣ್ಣೀರ ಹನಿಗಳನೂ
ಸುರಿಸಿಬಿಡುವೆ...
ಈ ಜಗದ
ಜನಕೆ
ಅದು ಗೊತ್ತಾಗದಿರಲಿ;
ಆ ಮಳೆ
ನಿಂತೊಡೆನೆಯೇ
ನಾ ನಕ್ಕುಬಿಡುವೆ!
***
ಏಕ ಪತ್ನೀ ವೃತಸ್ಥ...
ಸೀತೆಯನು
ಕಾಡಿಗಟ್ಟಿ
ಪರೀಕ್ಷೆಗೊಳಪಡಿಸಿದರೂ
ಆದನು
ಶ್ರೀರಾಮ
ಪುರುಷೋತ್ತಮ...
ರಾವಣನನ್ನು
ಕೊಂದದ್ದಕ್ಕಲ್ಲ;
ಸದಾಚಾರ ಸಂಪನ್ನ
ಏಕ ಪತ್ನೀ ವೃತಸ್ಥನಾಗಿ
ಮೆರೆದದ್ದೇ
ಉತ್ತಮೋತ್ತಮಾ!
***
ಅಮ್ಮಾ ನಿನ್ನ ಸಮರುಂಟೇ?
ನಿನಗೇನು
ಕೊಡಲಿ
ತಾಯಿ
ನಿನಗೆ
ಕೊಡುವಂತಹ
ವಸ್ತುವುಂಟೇ...
ಹೀಗೆನ್ನುತ್ತಲೇ
ಅವಳನು
ಹೊಗಳೀ
ಹೊಗಳೀ
ಏನೂ
ಕೊಡಲಿಲ್ಲವಂತೆ!
***
ಕನಸು
ಅಕ್ಕ
ಕೇಳವ್ವಾ
ನಾನೊಂದು
ಸುಂದರ
ಕನಸಾ
ಕಂಡೆ...
ಭ್ರಷ್ಟಾಚಾರ
ಇಲ್ಲದ
ಭವ್ಯಭಾರತದ
ರಾಮರಾಜ್ಯ-
ಎನ್ನ ಕನಸಿನ
ಉಂಡೆ!
***
ಅಪರಿಪೂರ್ಣ
ಈ ಜಗತ್ತಿನಲಿ
ಯಾವ
ಅತಿರಥರ
ಆತ್ಮಕಥನಗಳೂ
ಪರಿಪೂರ್ಣ
ಅಲ್ಲವೋ...
ಸತ್ಯವೆಂಬ
ಹೂರಣ-
ಅಸತ್ಯದ
ಕಣಕದಲಿ
ಮುಚ್ಚಿ
ಹೋದಾವೋ...!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
