ಕೇಳಮ್ಮ ಗೆಳತಿ- ಒಂದು ಗಝಲ್

ಕೇಳಮ್ಮ ಗೆಳತಿ- ಒಂದು ಗಝಲ್

ಕವನ

ಮದಿರೆಯನ್ನೇ ಕುಡಿಯಬೇಕೆಂದೇನುಯಿಲ್ಲ ಅದರಂತೆ ವರ್ತಿಸುವವರು ನಮ್ಮ ಜೊತೆಯಾಗುತ್ತಿದ್ದಾರೆ ಗೆಳತಿ

ಉದರದ ನೋವುಗಳ ಕೇಳುವವರನ್ನೇ ಮೂಲೆಗುಂಪು ಮಾಡುವವರೇ ಮತ್ತೆ ಮುಳುವಾಗುತ್ತಿದ್ದಾರೆ ಗೆಳತಿ

 

ಮಳ್ಳಿಮಳ್ಳಗಳ  ಹಾಗೇ ಹಿಂಬಾಲಿಸುವವರಿಗೆ ಶಹಬಾಸ್ಸ್ ಎನ್ನುತ್ತಾ ಅವರ ಕೈಯ ಹಿಡಿದು ತಿರುಗುತ್ತಿದ್ದಾರೆ ಗೆಳತಿ

ಉಪ್ಪರಿಗೆಯಲ್ಲಿ ಕೂರಲು ಅರ್ಹತೆ ಇಲ್ಲದಿದ್ದವರನ್ನೂ ತೊಡೆಯಲ್ಲೇ ಇಟ್ಟು ಬೆಸುಗೆಯೊಳಗೆ ಸಂತೈಸುತ್ತಿದ್ದಾರೆ ಗೆಳತಿ

 

ಮಾತುಗಳ ತೂತುಗಳೆಡೆ ಸಾಗುವವರ ನೋಡಿದಾಗಲೂ ಸುತ್ತಲಿರುವ ಯುಧಿಷ್ಟಿರರು ಸುಮ್ಮನಾಗುತ್ತಿದ್ದಾರೆ ಗೆಳತಿ

ಜೀವನದಲ್ಲಿಯ ರಾಜಕೀಯದ ತೆವಲಿನೊಳಗೆ ಹೊಗುಮನೆಯು ಛಿದ್ರವಾದರೂ ಮುಸುಕೆಳೆಯುತ್ತಿದ್ದಾರೆ ಗೆಳತಿ

 

ಹಾಲು ಹಾಲಹಲವಾಗುವವರೆಗೂ ಕಣ್ಮುಚ್ಚಿದ್ದು ಮುಳ್ಳುಗಳು ಚುಚ್ಚಿದಾಗಲೇ ನೋವಾಯಿತೆಂದು ನರ್ತಿಸುತ್ತಿದ್ದಾರೆ ಗೆಳತಿ

ಅನಾಹುತಗಳ ನಡುವೆಯೂ ಸೆಟೆದುನಿಲ್ಲುವ ಮನೋದೃಢತೆಯ ಕಂಡುಕೊಳ್ಳಲಾರದೆಯೇ ಕೆಡಿಸುತ್ತಿದ್ದಾರೆ ಗೆಳತಿ

 

ಈಶನೊಳಗಿನ ವಿಶಾಲತೆಯ ಅರಿವಿದ್ದರೂ ಹೃದಯಹೀನರಂತೆ ಅರಿವಿಲ್ಲದವರೂ ಗೊತ್ತಿರುವಂತೆ ಛೇಡಿಸುತ್ತಿದ್ದಾರೆ ಗೆಳತಿ

ಧರೆಯೊಳಗಿನ ನೋವುಗಳೆಲ್ಲಾ ಆತ್ಮದೊಳಗೆ ಹುದುಗಿರುವ ಹಿಂಸೆಗಳೆನ್ನುವವರಿಂದ ಹಲವರು ದೂರವಾಗುತ್ತಿದ್ದಾರೆ ಗೆಳತಿ

 

-ಹಾ ಮ ಸತೀಶ

 

ಚಿತ್ರ್