ಕೈಗುಳಿಗೆ

ಕೈಗುಳಿಗೆ

ಬರಹ

ಕನ್ನಡದಲ್ಲಿ ಆಗಮ ಸನ್ಧಿಯಿಲ್ಲವೆಂಬುದು ಒನ್ದು ಪೆರಮೆಯೇ ಆಗಿದೆ. ಕೆಲವು ಬಗೆಯ ಆಗಮ ಸನ್ಧಿಗಳು ಹೇಗಾಗುತ್ತವೆನ್ದು ನನ್ನ ಹಿನ್ದಿನ ಬರೆಹಗಳಲ್ಲಿ ತೋರಿಸಿರುವೆನು.

http://sampada.net/forum/15169
http://sampada.net/forum/14250

ಆದರೆ ಸಂಪದದ ಕೆಲವು ಪುಟಗಳ ಗಮನಿಸಿದಾಗ ಈ ಕೆಳಗಣ ಅನುಮಾನಗಳಿರುವನ್ತೆ ಕಣ್ಡುಬನ್ತು:

ದಾರಿ+ಇಲ್ಲ = ದಾರಿಯಿಲ್ಲ, ಆದರೆ
ಅಲ್ಲಿ+ಇಲ್ಲ = ಅಲ್ಲಿಲ್ಲ.

ದಾರಿ ಮತ್ತು ಅಲ್ಲಿ ಎಂಬ ಎರಡು ಒರೆಗಳೂ ಇ ಅಕ್ಕರದೊನ್ದಿಗೆ ಮುಗಿಯುತ್ತವಾದರೂ ಎರಡರ ನಡುವಣ ಭೇದವೇನೆನ್ದರೆ ಮೊದಲ ಒರೆ ಮೂಲದಲ್ಲೂ ಇಕಾರವೇ, ಎರಡನೇ ಪದ ಹಾಗಲ್ಲ. ಅಲ್ ಎಂಬದು ಮೂಲದಲ್ಲಿ ವ್ಯಂಜನಾನ್ತ.


ಇನ್ತಿರಲು,
ಅಲ್+ಇಲ್ಲ = ಅಲ್ಲಿಲ್ಲ ಎಂಬುದು ದ್ವಿತ್ವ(ಇರ್ಮೆ) ಸನ್ಧಿಯಾಗುತ್ತದೆ.

ಕೈಗುಳಿಗೆ: ತೊಡಗು ಎಂಬ ಒರೆಯ ಅರ್ಥ 'to engage' ಎನ್ದಾಗದು. ಅದರ ಅರ್ಥ ಶುರುಮಾಡು ಎಂಬುದಾಗಿದೆ. ತೊಡಗಿಸು ಸಾಧಿತ ಅರ್ಥದಲ್ಲಿ , 'to engage' ಅಷ್ಟೇ.ಶಂಕರ ಭಟ್ಟರ ಶಬ್ದಕೋಶದಲ್ಲಿ ಅದಕ್ಕೆ 'to engage' ಎನ್ದು ಕೊಡಲಾಗಿದೆ.
ಬೞಕೆಗಳು:
i.   ಮಾಡತೊಡಗು = to start doing

ii.  ಹೋಗತೊಡಗು = to start doing
iii. ಹೇಳತೊಡಗು = to start saying

ಟಿಪ್ಪಣಿ:

1. ಪೆರಮೆ = ಭ್ರಮೆ.
2. ಒರೆ = ಪದ. ಕ್ರಿಯಾಪದವಾಗಿ, ಒರೆಯು = ಹೇಳು. ('ನುಡಿಯು' ಕ್ರಿಯಾಪದವಾಗಿ 'ನುಡಿ' ನಾಮಪದವಾಗುವನ್ತೆ)
ಬೞಕೆಗಳು:
ಸೋಮಶೇಖರ ತನ್ನ ಭಾಮಿನಿಗೊರೆದಿಹ ರಾಮಮನ್ತ್ರವ ಜಪಿಸೋ!(ದಾಸರ ಪದ).
3. ಕೈಗುಳಿಗೆ<<ಕಯಿಗುಳಿಗೆ<<ಕಹಿಗುಳಿಗೆ.