ಕೈ ಜೋಡಿಸೋಣ

ಕೈ ಜೋಡಿಸೋಣ

ಕವನ

ಉಳಿಸೋಣ ಉಳಿಸೋಣ 

ನೀರಿನ ಮೂಲವ ಉಳಿಸೋಣ

ಹಿತಮಿತವಾಗಿ ಬಳಸೋಣ

ಎಲ್ಲರೊಂದಾಗಿ ಕೈ ಜೋಡಿಸೋಣ

 

ಸೋಗೆ ಮುಳಿಹುಲ್ಲು ಹೋಯ್ತಲ್ಲ

ಹಂಚಿನ ಮಾಡು ಬೇಡವಲ್ಲ

ತಾರಸಿ ಮನೆಯೇ ಬೇಕಲ್ಲ

ಫಲವನು ಈಗ ಕಾಣ್ತೇವಲ್ಲ

 

ಮಳೆಯ ನೀರು ದೇವನ ಕೊಡುಗೆ

ಉಳಿತಾಯ ಮಾಡುತ ಸಂರಕ್ಷಿಸುತ

ಹನಿಹನಿ ಜಲವು ಅಮೂಲ್ಯ ನಮಗೆ

ಪೋಲು ಮಾಡದೆ ಉಳಿಸಿ ಮನುಜರೆ

 

ಹಸಿರು ಉಸಿರು ಎರಡೂ  ಬೇಕು

ಜೀವಕೆ ಸಂಜೀವಿನಿ ಅದುವೇ ಕೊಡುಗೆ

ಗಿಡಮರ ನೆಟ್ಟು ಸಾಕೋಣ

ಮಾಲಿನ್ಯವನು ತಡೆಯೋಣ

 

ಉಸಿರಿಲ್ಲದಿರೆ ನಾವಿಲ್ಲ

ಜೀವವ ಕಾವುದು ಅದುವಣ್ಣ

ಆರೋಗ್ಯ ಭಾಗ್ಯವ ಪಡೆಯೋಣ

ನೆಮ್ಮದಿ ಬಾಳು ಬದುಕೋಣ

 

ಇಂಗು ಗುಂಡಿ ಮಾಡುತಲಿ

ಅಂತರ್ಜಲ ಮಟ್ಟ ಏರಿಸೋಣ

ಕುಡಿಯುವ ಜಲವು ಅಮೃತವೆಂದು

ಸಾರಿಸಾರಿ ಹೇಳುತಲಿಂದು

 

ದಿಣ್ಣೆ ಬದುಗಳ ನಿರ್ಮಿಸೋಣ

ನೀರಿನ ಒರತೆ ಹೆಚ್ಚಿಸೋಣ

ಕಾಡಿನ ನಾಶ ತಪ್ಪಿಸೋಣ

ಎಲ್ಲರು ಸೇರುತ ನಲಿಯೋಣ

 

-ರತ್ನಾ ಕೆ ಭಟ್ ತಲಂಜೇರಿ

(ವಿಶ್ವ ಜಲ ದಿನ ಸಂದರ್ಭದಲ್ಲಿ ಬರೆದ ಕವನ)

ಚಿತ್ರ್