ಕೊಂಡುಕೊಳ್ಳುವೆಯ ನೀ, ಪ್ರೀತಿಯ ರುಪಾಯಿ ಕೊಟ್ಟು
ಏಕಾಂತದಲಿ
ಮೈ ಮರೆಯೋಣ ಎಂದರೆ
ನಿನ್ನ ನೆನಪು ಬಿಡುತ್ತಿಲ್ಲ.
ನದಿಯ ತೀರವೊಂದು ಪ್ರತಿರಾತ್ರಿ
ಸಾವಿರ-ಸಾವಿರ ನಕ್ಷತ್ರಗಳನು
ಹೆತ್ತು ತನ್ನೊಡಲಲ್ಲಿ ಬಚ್ಚಿಟ್ಟರೂ
ಅದಕ್ಕೆ ದಕ್ಕದ ಹಾಗೆ.
ನೇಸರದ ನಾವಿಕನಿಗೆ,
ಇನಾಮು ಕೊಟ್ಟವರಾರು,
ಭೂಮಿಯನು, ಪ್ರೀತಿಸಿ
ಗಿರಕಿ ಹೊಡೆಯಲು,,,
ಅವನಂತೆಯೇ ನಾನು, ನಿನ್ನ
ನೆನಪಿನೊಳಗೆ ಗಿರಕಿ ಹೊಡೆಯುತ್ತಿದ್ದೇನೆ.
ಸೇತುವೆ ಇಲ್ಲದ ನದಿಯನ್ನು ದಾಟುವುದು
ನಿನ್ನ ನೆನಪಿನ ನದಿಯೊಳಗೆ ಈಜುವುದು.
ಎರಡೂ ಒಂದೇ,,,,,,,,,
ಈಜುವವ ನಾನೆ ಅಲ್ಲವೇ.
ನೆನಪು ನೀರಿನ ಹಾಡು
ನಿಲ್ಲುವುದು ಯಾವಾಗ,
ನನ್ನೊಡಲ ಒಂದು ಹಿಡಿ ನೆನಪನ್ನಾದರೂ
ಕೊಂಡುಕೊಳ್ಳುವೆಯ ನೀ, ಪ್ರೀತಿಯ ರುಪಾಯಿ ಕೊಟ್ಟು......
-ಜೀ ಕೇ ನ