ಕೊಲಾವೇರಿ ಕೊಲಾವೇರಿ ಡೀ
ಆಹ್ಹ್ ಅದ್ಭುತ! ಇಂದಿನ ಮ್ಯಾಚ್ ನೋಡಿದವರು ಖಂಡಿತ ಈ ಮಾತು ಹೇಳ್ತಾರೆ...ವಿರಾಟ್ ಕೊಹ್ಲಿಯ ಕೆಚ್ಚೆದೆಯ ಹೋರಾಟ,,ರೈನಾ ಸಾಥ್,ಸಚಿನ ಸೇಹ್ವಾಗ ಆರ್ಭಟ,ಗಂಭೀರನ ಗಂಭೀರ ಆಟ ಇಂದಿನ ಪಂದ್ಯದ ಮುಖ್ಯ ಅಂಶವಾಗಿತ್ತು.೨೫೦ ಕ್ಕೆ ಲಂಕಾದವರನ್ನ ಆಲೌಟ್ ಮಾಡಿ ೪೦ ಓವರ್ನಲ್ಲಿ ಆದನ್ನು ಬೆನ್ನತ್ತುವುದು ಭಾರತದ ಪ್ಲಾನ್ ಆಗಿತ್ತು.ಆದರೆ ದಿಲ್ಶಾನ್ ಮತ್ತು ಸಂಗಕ್ಕಾರ ಬ್ಯಾಟಿಂಗ್ ಈ ಲೆಕ್ಕಚಾರನ ತಲೆಕೆಳಗೆ ಮಾಡಿತ್ತು.ದಿಲ್ಶಾನ್ ಅಂತು ಭಾರತದ ಬೌಲರ್ ಅನ್ನು ಮನಸೋ ಇಚ್ಚೆ ದಂಡಿಸಿದರು..೧೧ ಬೌಂಡರಿ ಹಾಗು ೩ ಮನಮೋಹಕ ಸಿಕ್ಸರ್ ಇದಕ್ಕೆ ಸಾಕ್ಷಿಯಾದವು.ಕೊನೆಗೆ ಭಾರತದ ಮುಂದಿದಿದ್ದು ೩೨೧ ರನ್ ಗಳ ಅಸಾಧಾರಣ ಮೊತ್ತ.
ಇಂದು ಮೊದಲು ಲಂಕಾದ ಬ್ಯಾಟಿಂಗ್ ನೋಡಿದ ಆರ್ಧ ಜನ ಚಾನೆಲ್ ಚೇಂಜ್ ಮಾಡಿರ್ತಾರೆ.ಇವರು ಗೆಲ್ಲಲ್ಲ ಅದು ಆಗಲ್ಲ ಅಂತ ಅಂದಿರೋರೆ ಜಾಸ್ತಿ,ನಾನು ಅಂದಿದ್ದೆ.ಆದರೆ ಯಾಕೋ ಸಚಿನ್ ಹಾಗು ಸೆಹ್ವಾಗ್ ಬೌಂಡರಿ ಸಿಕ್ಸರ್ ಗಳಿಂದಲೇ ಪಂಧ್ಯ ಆರಂಭಿಸಿದ್ದು ನೋಡಿ ಎಲ್ಲೊ ಒಂದು ಕಡೆ ಗೆಲ್ಲಬಹುದು ಅನ್ಕೊಂಡೆ.ಏನಾದರೂ ಆಗಲಿ ಒಂದು ಕೈ ನೋಡೇಬಿಡೋಣ ಎಂದು ಮೈದಾನಕ್ಕೆ ಬಂದಂತಿದ್ದ ಸಚಿನ್ ಹಾಗು ಸೆಹ್ವಾಗ್ ಎರಡನೆ ಓವರ್ ನಿಂದ ನಾ ಮುಂದು ತಾ ಮುಂದು ಅಂತ ಬೌಂಡರಿ ಬಾರಿಸಿದರು.ಆರಂಭದ ಆರ್ಭಟದ ನಂತರ ಇಬ್ಬರು ವಿಕೆಟ್ ಚೆಲ್ಲಿದಾಗ ಮತ್ತೆ ಸೋಲು ಖಾಯಂ ಅನ್ನಿಸಿತು.ಆದರೆ ಆಗಿದ್ದು ಮಾತ್ರ ಹಿಂದೆಂದೂ ನೋಡದ ಅವಿಸ್ಮರಣೀಯ ಆಟ. ಮುಂಬರುವ ಟೀಂ ಇಂಡಿಯಾ ನಾಯಕ ಎಂದು ಬಿಂಬಿಸಲಾಗುತ್ತೀರುವ ಕೊಹ್ಲಿ ಬರಬರುತ್ತಲೇ ಬೌಂಡರಿ ಬಾರಿಸಿ ಸಚಿನ ಮಹಾಶತಕದ ದುಃಖ ಕ್ಷಣಮಾತ್ರದಲ್ಲಿ ಮರೆಸಿದ್ದರು.ಗಂಭಿರರೊಂದಿಗೆ ಕ್ಲಿಷ್ಟ ಪರಿಸ್ಥಿತಿಯಲ್ಲಿ ಮುಖ್ಯವಾದ ಜೊತೆಯಾಟದಲ್ಲಿ ಪಾಲ್ಗೊಂಡು ರನ್ ರೇಟ್ ಕಾಯ್ದುಕೊಂಡಿದ್ದು ಗಮನ ಸೆಳೆಯಿತು.ಕೊಹ್ಲಿ ಇಂದು ೮೬ ಚೆಂಡು ಎದುರಿಸಿ ಬಾರಿಸಿದ್ದು ಬರೋಬ್ಬರಿ ೧೩೩ ರನ್..ಇದರಲ್ಲಿ ೧೬ ಬೌಂಡರಿ ಹಾಗು ಎರಡು ಮನಮೋಹಕ ಸಿಕ್ಸರ್ ಸೇರಿವೆ. ಟೀಕಾಕರರು ಇಂದು ಮತ್ತೆ ತಮ್ಮ ಚಾಳಿಯಲ್ಲಿ ಟೀಂ ಇಂಡಿಯಾನ ಜರಿಯೋದು ಹೇಗೆ ಎಂದು ಯೋಚಿಸುವಾಗಲೇ ವಿರಾಟ ತನ್ನ ವಿರಾಟ ಆಟ ತೋರಿಸಿದ್ದ.ಭಾರತ ೩೬.೪ ಓವರ್ ಒಳಗಡೆನೆ ಪಂಧ್ಯ ಗೆದ್ದು ತೋರಿಸಿ ಕ್ರಿಕೆಟ್ ಜಗತ್ತಿನ ಎಲ್ಲರ ಹುಬ್ಬೆರಿಸಿತು. ಗೆಲ್ಲಬಹುದು ಎಂದು ಯಾರೊಬ್ಬರು ಊಹಿಸಲಿಕ್ಕಿಲ್ಲದ ಪಂದ್ಯವದು .ಇಂದಿನ ಆಟ ನೋಡಿದರೆ ೫೦೦ರ ಮೊತ್ತ ಕೂಡ ದಾಟಬಲ್ಲರು ಎನ್ನಿಸಿದ್ದು ಸುಳ್ಳಲ್ಲ.ಸತತ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಭಾರತಕ್ಕೆ ಇಂದಿನ ಜಯ ಬೇಕಾದ ಆತ್ಮವಿಶ್ವಾಸ ಮತ್ತೆ ದೊರಕಿಸಿದೆ.ರೊಟೇಶನ್ ಪದ್ಧತಿ ಬಿಟ್ಟು ಮೂವರು ದಿಗ್ಗಜರನ್ನು ಬ್ಯಾಟಿಂಗ್ ಮಾಡಿಸಿದ್ದು ಧೋನಿಗೆ ವರದಾನವಾಯಿತು.ತಾ ಬರುವ ಮುನ್ನವೇ ತನ್ನ ಹುಡುಗರು ವಿಜಯ ಪತಾಕೆ ಹಾರಿಸಿದ್ದು ಧೋನಿಗೆ ಕೂಡ ನಿರುಮ್ಮಳವಾಗುವಂತೆ ಮಾಡಿದೆ.ಭಾರತದ ಮಾಜಿ ಕ್ರಿಕೆಟ್ ದಿಗ್ಗಜರು ಇಂದು ಬಾಯಿ ಚಪ್ಪರಿಸಿ ಧೋನಿ ಹಾಗು ತಂಡವನ್ನು ನ್ಯೂಸ್ ಚಾನೆಲ್ಲುಗಳಲ್ಲಿ ಹೊಗಳಲು ಶುರು ಮಾಡಿದ್ದಾರೆ. ಇನ್ನೇನಿದ್ದರೂ ಲೆಕ್ಕಾಚಾರದ ಆಟ..ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ ಸೋತರೆ ಭಾರತ ಫೈನಲ್ ಪ್ರವೇಶ.ಆದರೆ ಇಂದಿನ ಪಂಧ್ಯದಲ್ಲಿ ಶ್ರೀಲಂಕಾದ ಸ್ಲಿಂಗಾ ಅರ್ಥಾತ್ ಮಾಲಿಂಗಾ ಮಾತ್ರ ಹಣ್ಣುಗಾಯಿ ನಿರುಗಾಯಿ ಆದರು.ಸಚಿನರ ಮಹಾಶತಕ ತಪ್ಪಿಸಿದಕ್ಕೆ ಕೊಹ್ಲಿ ಬಡ್ಡಿ ಸಮೇತ ರನ್ ವಸೂಲಿ ಮಾಡಿದರು.೩೪ನೆ ಓವರನಲ್ಲಿ ೨೪ ರನ್ ಕೊಟ್ಟಿದ್ದು ಹಾಗು ಕಳೆದ ಪಂಧ್ಯ ಒಂದರಲ್ಲಿ ೫ ಎಸೆತದ ಕರಾಳ ಓವರ್ ಶ್ರೀಲಂಕಾ ಹಾಗು ಸ್ಲಿಂಗಾ ಯಾವತ್ತು ಮರೆಯಲಿಕ್ಕಿಲ್ಲ.....ಇಂದು ಪಂಧ್ಯದ ನಂತರ ಕೊಹ್ಲಿ ಮಾಲಿಂಗಗೆ ಹಸ್ತಲಾಘವ ಮಾಡೋವಾಗ ಮಾಲಿಂಗಾ ಕೊಹ್ಲಿಗೆ ಕೇಳಿರಬಹುದು ವೈ ದಿಸ್ ಕೊಲಾವೇರಿ ಕೊಲಾವೇರಿ ಕೊಲಾವೇರಿ ಡೀ?
ಚಿತ್ರದ ಮೂಲ/ಸಂಗ್ರಹ : https://www.google.co.in/
ಚುಕ್ಕಿ,
(ಪ್ರವೀಣ್.ಎಸ್.ಕುಲಕರ್ಣಿ)