ಕೋಪವೇಕೆ ಕನಕಾಂಗಿ

ಕೋಪವೇಕೆ ಕನಕಾಂಗಿ

ಬರಹ

ಕೋಪವೇಕೆ ಕನಕಾಂಗಿ
ಮರೆಯಾದರೆ ಮತ್ತೆ ನಾನು ಏಕಾಂಗಿ
ಹುಣ್ಣಿಮೆಯ ಮುಖದೊಳಗೇಕೆ ಅಮಾವಾಸ್ಯೆಯ ಇಣುಕು
ಅರಳಲಿ ತುಟಿ ಮತ್ತೆ ಬೆಳಗಲಿ ನಿನ್ನ ಮುಖದ ಬೆಳಕು

ಸಿರಿಸಾಗರ ನನ್ನಲ್ಲಿಲ್ಲ
ಹಡಗು ಕಟ್ಟುವ ಮನಸ್ಸು ನನ್ನದಲ್ಲ
ಪ್ರೇಮಸಾಗರದೊಳಗೊಂದು ದೋಣಿ ಕಟ್ಟಿ ತೆಲಿಸುವೆನು ಕೇಳು ಗೆಳತಿ
ತೌರಸುಖವು ನನ್ನಲ್ಲಿಲ್ಲ
ಅರಮನೆಯ ಕನಸು ತೋರಿಸುವುದಿಲ್ಲ
ನಿನ್ನ ಎದೆಯೊಳಗೊಂದು ಗೂಡು ಕಟ್ಟಿ ತೋರಿಸುವೆನು ನೋಡು ಗೆಳತಿ

ನಿನ್ನ ಹೃದಯವ ನಾನು ಬಲ್ಲೆ
ನಿನ್ನ ಉಸಿರಿನಾಳವ ನಿನಗಿಂತ ಹೆಚ್ಚು ಬಲ್ಲೆ
ಬಿಸಿಉಸಿರಿನಿಂದ ನನ್ನ ಸುಡಬೇಡ ನನ್ನವಳೆ
ನಿನ್ನ ಕಣ್ಣೀರಿಗೊಂದಿಷ್ಟು
ನನ್ನ ರಕ್ತವ ಹರಿಸಿಯೆನು
ಕಣ್ಣೀರ ತುಟಿ ಮೇಲೆ ತರಬೇಡ ನನ್ನವಳೆ

ತಾಳಿಯನು ಕಟ್ಟಿಯೆನು
ಸಿಂಧುವನು ಹಚ್ಚಿಯೆನು
ಹಣೆಯ ಮೇಲೇಕೆ ಈ ಚಿಂತೆಯ ರೇಖೆ ನನ್ನ ಗೆಳತಿ
ಕೊಡಿಸುವೆನು ಸಿರೆಯನು
ಮುಡಿಸುವೆನು ಮಲ್ಲಿಗೆಯನು
ಚಿಂತೆಯ ಮಲ್ಲಿಗೆಯನು ಮುಡಿಬೇಡ ಮನದ ಒಡತಿ

ನಾಳೆ ಇನ್ನು ಬಂದಿಲ್ಲ
ಇಂದು ಇನ್ನು ಕಳೆದಿಲ್ಲ
ಕಳೆದುಹೋದ ನಿನ್ನೆಯ ಬಗ್ಗೆ ಬೇಸರವೇಕೆ ಗೆಳತಿ
ನನ್ನ ಕೈ ಬಿಡಬೇಡ
ಹೀಗೆ ಹಠ ಹಿಡಿಬೇಡ
ತಂದುಕೊಡುವೆ ಚಂದ್ರನೊಂದು ಅವಸರವೇಕೆ ಗೆಳತಿ