ಕ್ಯಾಪ್ಸಿಕಮ್ ಬಾತ್

ಕ್ಯಾಪ್ಸಿಕಮ್ ಬಾತ್

ಬೇಕಿರುವ ಸಾಮಗ್ರಿ

ಉದುರಾದ ಅನ್ನ, ಕ್ಯಾಪ್ಸಿಕಮ್, ಹಸಿರು ಬಟಾಣಿ ಅಥವಾ ಶೆಂಗಾ, ಈರುಳ್ಳಿ, ಹುಣಸೇ ಹಣ್ಣು, ಕರಿಬೇವು, ಉದ್ದಿನ ಬೇಳೆ, ಉಪ್ಪು, ಚಿಟಕಿ ಸಕ್ಕರೆ, ಎಣ್ಣೆ, ತುಪ್ಪ, ಬಾತ್ ಪೌಡರ್.

ಪೌಡರ್ ಮಾಡುವದು: ಕಡ್ಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸು, ಚಕ್ಕೆ, ಲವಂಗ, ಧನಿಯಾ, ಎಳ್ಳು, ಹಾಕಿ ಹುರಿದು ಪುಡಿ ಮಾಡಿಕೊಳ್ಳುವುದು.

ತಯಾರಿಸುವ ವಿಧಾನ

ಪಾತ್ರೆಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು, ಅರಿಶಿನ, ಸಾಸಿವೆ ಹಾಕಿ ಚಟ್‌ಪಟ್ ಎಂದಮೇಲೆ, ಹೆಚ್ಚಿದ ಕ್ಯಾಪ್ಸಿಕಮ್, ಬೇಯಿಸಿದ ಹಸಿರು ಬಟಾಣಿ ಅಥವಾ ಶೆಂಗಾ, ಈರುಳ್ಳಿ, ಹಾಕಿ ಚೆನ್ನಾಗಿ ಹುರಿದ ಮೇಲೆ ಬಾತ್ ಪೌಡರ್ ಹಾಕಿ, ಉಪ್ಪು, ಹುಣಸೆ ರಸ ಚಿಟಕಿ ಸಕ್ಕರೆ ಹಾಕಿ ಕೈಯ್ಯಾಡಿಸಿ ಅದಕ್ಕೆ ಉದುರಾದ ಅನ್ನ ಹಾಕಿ ಕಲಸಿದರೆ ಕ್ಯಾಪ್ಸಿಕಮ್ ಬಾತ್ ಸಿದ್ದ.

-ಕಲ್ಪನಾ ಪ್ರಭಾಕರ ಸೋಮನಳ್ಳಿ