ಕ್ರೆಡಿಟ್ ಕಾರ್ಡ್ ನ ಸೌಲಭ್ಯಗಳು...

ಕ್ರೆಡಿಟ್ ಕಾರ್ಡ್ ನ ಸೌಲಭ್ಯಗಳು...

ಬರಹ

ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...

ಆತ್ಮೀಯ ಸಂಪದಿಗರೇ ನನ್ನ ಬಹುಪಾಲು ಬರಹಗಳು ಮಿಂಚಂಚೆಯಿಂದ ಅನುವಾದಿತ ಲೇಖನಗಳು

ನನ್ನ ಉದ್ದೇಶ ಕೇವಲ ಮನರಂಜನೆ ಮಾತ್ರ...ಯಾರಿಗಾದರು ಇದು ತಪ್ಪು ಅನಿಸಿದಲ್ಲಿ ತಿಳಿಸಿ...ಇನ್ನು ಮುಂದೆ ಅಂಥಹ ಲೇಖನಗಳನ್ನು ಹಾಕುವುದಿಲ್ಲ..


ಸಾಫ್ಟ್ವೇರ್ ಕಂಪನಿ ಒಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಮೋಹನ್ ಗೆ ಸೋಮವಾರ ಮಧ್ಯಾಹ್ನ ಒಂದು ಕರೆ ಬಂತು..


 


ಹಲೋ ಸರ್...ನಾವು HDFC ಬ್ಯಾಂಕ್ ಇಂದ ಕರೆ ಮಾಡುತ್ತಿರುವುದು..ನಿಮಗೊಂದು ಅದ್ಭುತ ಅವಕಾಶ ಕೊಡುತ್ತಿದ್ದೇವೆ...ನಮ್ಮ ಗೋಲ್ಡನ್ ಕ್ರೆಡಿಟ್ ಕಾರ್ಡ್ ಉತ್ತಮ ಕೊಡುಗೆ ನೀಡುತ್ತಿದೆ...ಅತಿ ಹೆಚ್ಚಿನ


ತಿಂಗಳ ಲಿಮಿಟ್ ಹಾಗು ಅತಿ ಕಡಿಮೆ ಬಡ್ಡಿ ದರಗಳನ್ನು ನೀಡುತ್ತಿದೆ...ನೀವು ಬಿಡುವಾಗಿದ್ದರೆ ಒಂದು ೨ ನಿಮಿಷ ನಿಮ್ಮ ಹತ್ತರ ಮಾತನಾಡಬಹುದ..??


ಹಾ ಹೇಳಿ ಹೇಳಿ ನನಗೆ ಅದು ಬೇಕಿತ್ತು...ಸರಿಯಾದ ಸಮಯಕ್ಕೆ ಕರೆ ಮಾಡಿದ್ದೀರಾ...ಆದರೆ ನನಗೆ ೫ ಗಂಟೆಗೆ ಒಂದು ಮೀಟಿಂಗ್ ಇದೆ...ಪರವಾಗಿಲ್ಲ ಈಗಿನ್ನು ೨ ಗಂಟೆ...ಶುರು ಮಾಡಿ..


 


ತುಂಬಾ ಧನ್ಯವಾದಗಳು ಸರ್... ಸರ್ ಈ ಕಾರ್ಡ್ ಇಂದ ನಿಮಗೆ ಅನಿಯಮಿತ ಕೊಡುಗೆಗಳು, ರಿಯಾಯಿತಿಗಳು ಸಿಗುವುದು...


ಸರಿ ಮುಂದೆ ಹೇಳಿ..


ಅಷ್ಟೇ ಅಲ್ಲ ಸರ್ ನಿಮಗೆ EMI ಸೌಲಭ್ಯ ಸಹ ಸಿಗುವುದು..


ಅದ್ಭುತ...ಮುಂದೆ..


 


ಆಕೆ ಕಾರ್ಡಿನ ಬಗ್ಗೆ ಸುಮಾರು ೨ ಗಂಟೆ ಎಲ್ಲ ಬಗೆಯ ಪ್ರಯೋಜನಗಳನ್ನು ಹೇಳಿ ನಂತರದಲ್ಲಿ..."ಸರ್, ಈಗ ಈ ಕಾರ್ಡನ್ನು ಕೊಳ್ಳಲು ಬಯಸುವಿರ" ಎಂದಾಗ..


ಆತ..ಹಾ ನಿಮ್ಮ ಸೌಲಭ್ಯಗಳು ಬಹಳ ಚೆನ್ನಾಗಿದೆ...ಆದರೆ ನನಗೆ ಯೋಚಿಸಲು ಸ್ವಲ್ಪ ಕಾಲಾವಕಾಶ ಬೇಕು, ಅದು ಅಲ್ಲದೆ ಈಗ ೪ ಗಂಟೆ ನಾನು ಮೀಟಿಂಗ್ ಗೆ ಸ್ವಲ್ಪ ತಯಾರಿ ನಡೆಸಬೇಕು...


ಆದ್ದರಿಂದ ನೀವು ನಾಳೆ ಕರೆ ಮಾಡಿದರೆ ನನ್ನ ನಿರ್ಧಾರ ತಿಳಿಸುತ್ತೇನೆ...ಓ ಹಾಗೆ ಆಗಲಿ ಸರ್ ನಾನು ನಾಳೆ ಕರೆ ಮಾಡುತ್ತೇನೆ...ಧನ್ಯವಾದಗಳು..


 


ಮರುದಿನ, ಆಕೆ ಮಾತೆ ಕರೆ ಮಾಡಿದಾಗ ಈತ ಸರಿ ನಿಮ್ಮ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಹಾಗೂ ಬೇರೆ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಗೆಗಿನ ಸಾಮ್ಯತೆಯನ್ನು ವಿವರಿಸಿ ಎಂದಾಗ ಆಕೆ ಮತ್ತೆ


ಒಂದು ಗಂಟೆಯ ಕಾಲ ಬೇರೆ ಬೇರೆ ವೆಬ್ ಸೈಟ್ ಎಲ್ಲವನ್ನು ನೋಡಿ ಮಾಹಿತಿ ನೀಡಿ...ಕಾರ್ಡ್ ಕೊಳ್ಳುವುದರ ಬಗ್ಗೆ ಕೇಳಿದಾಗ...ಆಗ ನೋಡಿ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ...ಆದರೆ


ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್, ಯಾವುದೇ ವಸ್ತು ಕೊಳ್ಳುವಾಗ ಅದರ ಸಾಧಕ ಬಾಧಕ ಗಳನ್ನೂ ನೋಡಿಯೇ ಕೊಳ್ಳುವುದು...ಆದ್ದರಿಂದ ನೀವು ನಾಳೆ ಮತ್ತೆ ಕರೆ ಮಾಡಿ ಒಂದೆರಡು


ಗಂಟೆ ಅದರ ಬಗ್ಗೆ ಮಾಹಿತಿ ನೀಡುವಿರ?


 


ಹಾಗೆ ಆಗಲಿ ಸರ್, ಖಂಡಿತವಾಗಿ...ಧನ್ಯವಾದಗಳು ಎಂದು ಸ್ವಲ್ಪ ಕೋಪದಿಂದ ಕರೆಯನ್ನು ಕತ್ತರಿಸಿದಳು..


ಓ ದೇವರೇ...ಯಾಕೆ ಈ ಸಾಫ್ಟ್ವೇರ್ ಇಂಜಿನಿಯರ್ ಗಳು ಇಷ್ಟೆಲ್ಲಾ ತಲೆ ತಿನ್ನುತ್ತಾರೆ ಎಂದುಕೊಂಡಳು...


 


ನಂತರದ ಎರಡು ದಿನಗಳು ಹೀಗೆ ಮುಂದುವರಿಯಿತು...ಆತ ಆ ಮಾಹಿತಿ ಬೇಕು ಈ ಮಾಹಿತಿ ಬೇಕು ಎಂದೆಲ್ಲ ಪೀಡಿಸಿದರು ಆಕೆ ಕರೆ ಮಾಡುತ್ತಲೇ ಇದ್ದಳು...


ಕೊನೆಗೆ ಶುಕ್ರವಾರ ಕರೆ ಮಾಡಿ ಕಳೆದ ನಾಲ್ಕು ದಿನದ ಸಾರವನ್ನು ಮತ್ತೊಮ್ಮೆ ಹೇಳಿ "ಸರ್ ಈಗ ಹೇಳಿ ಯಾವಾಗ ಕೊಲ್ಲುವಿರಿ ಕಾರ್ಡನ್ನು" ಎಂದಾಗ


ಆತ " ನೋಡಿ ನೀವು ನೀಡಿದ ಎಲ್ಲ ಮಾಹಿತಿಗಳು ಹಾಗು ನಿಮ್ಮ ಸೌಲಭ್ಯಗಳು ಎಲ್ಲವು ಚೆನ್ನಾಗಿದೆ" ಆದರೆ ಈಗ ನನಗೆ ಅದರ ಬಗ್ಗೆ ಈಗ ಆಸಕ್ತಿ ಇಲ್ಲ ಕ್ಷಮಿಸಿ ಎಂದ..


 


ಸರ್ ಆದರೆ ನೀವು ಮೊದಲು ಬೇಕು ಅಂತ ಹೇಳಿದ್ರಿ...


ನೋಡಿ ಅದು ಸೋಮವಾರ ಹಾಗೆ ಹೇಳಿದ್ದೆ...ದಯವಿಟ್ಟು ಕ್ಷಮಿಸಿ...


 


"ಓ ಓ ಸರಿ ಸರಿ....ಬಹಳ ಬೇಸರವಾಗಿ...ಸರ್ ಹೋಗಲಿ ನಾನು ನಿಮಗೆ ಈ ಮೇಲ್ ನಲ್ಲಿ ಒಂದು ಫಾರಂ ಅನ್ನು ಕಳುಹಿಸುತ್ತೇನೆ ಅದರಲ್ಲಿ "ತಿರಸ್ಕರಿಸಿದ ಕಾರಣ" ಎಂದು ಒಂದು ಸಾಲಿದೆ...


ಅದರಲ್ಲಿ ನಿಮ್ಮ ಕಾರಣವನ್ನು ತಿಳಿಸಿ ವಾಪಾಸ್ ಕಳುಹಿಸಿ...ನಾನು ನಮ್ಮ ಮ್ಯಾನೇಜರ್ ಗೆ ಅದನ್ನು ಕೊಡಬೇಕು..


 


ಸರಿ ಕಳುಹಿಸಿ ಇದು ನನ್ನ ಮೇಲ್ ಐ.ಡಿ xxxxx.xxxx@gmail.com "


ಮರುದಿನ ಆಕೆ ಆ ಫಾರಂ ಅಲ್ಲಿ ತಿರಸ್ಕರಿಸಿದ ಕಾರಣಕ್ಕೆ ಆತ ನೀಡಿದ್ದ ಉತ್ತರ ಕಂಡು "ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತಾಯಿತು" ಆಕೆಯ ಪರಿಸ್ಥಿತಿ..."ನನ್ನ ಹೆಂಡತಿ ತವರಿಂದ


ವಾಪಾಸಾದ ಕಾರಣ ನನಗೆ ಕಾರ್ಡಿನ ಅವಶ್ಯಕತೆ ಇಲ್ಲ" ಎಂದು ಬರೆದಿದ್ದ..


 


ಆತನ ಉತ್ತರದಿಂದ ಕುಪಿತಗೊಂಡ ಆಕೆ ಮತ್ತೆ ಕರೆ ಮಾಡಿ ಸರ್ ನೀವು ನೀಡಿರುವ ಉತ್ತರದ ವಿವರಣೆ ನೀಡುವಿರ ಎಂದು ಕೇಳಿದಾಗ...


ಆತ ಶಾಂತವಾಗಿ " ನೋಡಿ ಅಸಲಿಗೆ ಅದು ಏನೆಂದರೆ ನಾನು ಹೊಸದಾಗಿ ಒಂದು "VIRGIN " ಕಂಪನಿಯ sim card ಕೊಂಡೆ..ಅದರಲ್ಲಿ ಪ್ರತಿ ಒಳಬರುವ ಕರೆಗೆ ಒಂದು ನಿಮಿಷಕ್ಕೆ


೨೦ ಪೈಸೆ ಸಿಗುವುದು...ನೀವು ನನಗೆ ಗಂಟೆಗಟ್ಟಲೆ ಕರೆ ಮಾಡಿ ಮಾತನಾಡಿದ್ದರಿಂದ ಸರಾಸರಿ ದಿನಕ್ಕೆ ೨೦ - ೨೫ ರೂಗಳು ಸಿಗುತ್ತಿತ್ತು...ಅದನ್ನು ಉಪಯೋಗಿಸಿ ನಾನು ನನ್ನ ಹೆಂಡತಿಗೆ


"STD " ಕರೆಗಳನ್ನು ಮಾಡುತ್ತಿದ್ದೆ...ಯಾಕೆಂದರೆ ಆಕೆ ತವರಿಗೆಂದು ಹೊರ ರಾಜ್ಯಕ್ಕೆ ತೆರಳಿದ್ದಳು...ಆದರೆ ಈಗ ಆಕೆ ಮರಳಿ ಬಂದಿರುವುದರಿಂದ ನನಗೆ ಆ ಅವಶ್ಯಕತೆ ಇಲ್ಲ...

ಅದಕ್ಕಾಗಿ ನಾನು ಆ ರೀತಿ ಉತ್ತರ ಕೊಟ್ಟಿದ್ದೆ...ಎಂದಾಗ ಆಕೆಯ ಪರಿಸ್ಥಿತಿ ಊಹಿಸಿ...