ಖಾಸಗಿ ವಲಯದಲ್ಲಿ ಮೀಸಲಾತಿ ಎಷ್ಟು ಸರಿ…?

ಖಾಸಗಿ ವಲಯದಲ್ಲಿ ಮೀಸಲಾತಿ ಎಷ್ಟು ಸರಿ…?

ಬರಹ

ಸ್ನೇಹಿತರೆ, ಇಂದಿನ ರಾಜಕೀಯದ ಈ ದುಸ್ಥಿತಿಗೆ ಮತ್ತು ಈ ನರ ಸತ್ತ ವ್ಯೆವಸ್ಥೆಗೆ ಯಾರನ್ನ ದೋಶಿಸೊದು ಅಂತಾ ತಿಳಿಯದಾಗಿದೆ. ಸ್ವಾತಂತ್ರ ತಂದುಕೊಟ್ಟ ಯೋಧರನ್ನೆ ಅಥವಾ ಈ ದೇಶದ ಕಾನುನನ್ನು ರಚಿಸಿದ ಮತ್ತು ತಿದ್ದುಪಡೆಯನ್ನು ತರುವ ರಾಜಕೀಯ ವ್ಯೆವಸ್ಥೆಯನ್ನೆ…? ಅಥವ ಇದನ್ನ ಸಹಿಸಿಕೊಂಡಿರುವ ಈ ದೇಶದ ಜನಸಾಮಾನ್ಯೆರನ್ನೆ…? ಇದನ್ನ ದೆಶದ ನಾಗರೀಕರಾದ ನೀವೆ ಹೆಳಬೇಕು.

ಇವತ್ತು ಈ ಸಮಸ್ಯೆಯ ಬಗ್ಗೆ ಈ ದೆಶದ ನಾಗರೀಕರಾದ ನಾವು ಗಂಭೀರವಾಗಿ ಯೊಚಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ನಿರ್ಗತಿಕರಾಗುವದರಲ್ಲಿ ಸಂಶಯವಿಲ್ಲ. ಈ ಸಮಸ್ಯೆಯನ್ನ ಮತ್ತು ರಾಜಕೀಯ ವ್ಯೆವಸ್ಥೆಯನ್ನ ಸರಿಪಡಿಸಲು, ೬೦ ವರ್ಷಗಳಷ್ಟು ಹಳೆಯದಾದ ಕಾನೊನು ಮತ್ತು ರಾಜಕೀಯ ವ್ಯೆವಸ್ಥೆಯನ್ನ ಮೊದಲು ಬದಲಿಸುವ ಪ್ರಯತ್ನವನ್ನ ಮಾಡಬೇಕಾಗಿದೆ. ಸ್ನೇಹಿತರೆ ಈ ಲೇಖನದ ಮೂಲಕ ನನ್ನ ಕೆಲವೊಂದು ಅನಿಸಿಕೆಗಳನ್ನ ವ್ಯೆಕ್ತಪಡಿಸೊಕೆ ಬಯಸುತ್ತಿದ್ದೆನೆ ವಿನ: ಯಾರನ್ನು ದೊಶಿಸುವುದಾಗಲಿ ಅಥವಾ ನೊಯಿಸುವುದಾಗಲಿ ಈ ಬರವಣಿಗೇಯ ಉದ್ಧೇಶವಲ್ಲಾ. ಸ್ನೆಹಿತರೆ ಇಂದಿನ ವ್ಯೆವಸ್ತೆಯ ಕೆಲವೊಂದು ಲೊಪದೋಶಗಳನ್ನ ನಾವು ಈ ಕೆಳಗಿನ ಉದಾಹರಣೆಯ ಮೂಲಕ ಅರಿತು ಕೊಳ್ಳಬಹುದಾಗಿದೆ.

ಮೊದಲನೇಯದಾಗಿ ಸರಕಾರಿ ನೌಕರರಿಗೆ ೬೦ ವರ್ಷಗಳ ನಂತರ ನಿವೃತ್ತಿ ಆದರೆ ಸರ್ಕಾರವನ್ನ ರಚಿಸುವ ಮತ್ತು ಈ ದೇಶವನ್ನ ಮುನ್ನಡಿಸುವ ರಾಜಕೀಯ ಪುಡಾರಿಗಳಿಗೆ ಯಾಕಿಲ್ಲ?.

ಎರಡನೇಯದಾಗಿ ಸರಕಾರಿ ಜವಾನನ ಕೆಲಸಕ್ಕೆ ಕಡಿಮೆ ಎಂದರು ಎಳನೇಯ/ಹತ್ತನೇಯ ತರಗತಿಯನ್ನು ಪಾಸಾಗಿರಬೇಕು ಎಂದು ಕೆಳುವ ಸರಕಾರ, ಸರಕಾರವನ್ನು ರಚಿಸುವ ಮತ್ತು ಅದರ ಅಂಗವಾಗಿರಬೇಕಾಗಿರುವ ರಾಜಕೀಯ ಅಭ್ಯೆರ್ತಿಗಳಿಗೆ ಯಾಕಿಲ್ಲ?. ಹಾಗೆಂದರೆ ದೇಶವನ್ನ ಮುನ್ನಡಿಸುವುದು ಜವಾನನ ಕೆಲಸಕ್ಕಿಂತಾ ಕಡಿಮೇಯೆ?, ಅಥವಾ ಜವಾನನೀಗೆ ಇರಬೇಕಾದಷ್ಟು ಜ಼್ನಾನ ಕೂಡಾ ಬೆಡವೇ…?

ಮೂರನೇಯದಾಗಿ ಹಿಂದುಳಿದಿರುವ ಎಲ್ಲ ಜಾತಿಯ ಜನಸಾಮಾನ್ಯೆರನ್ನ ಪರಿಗಣಿಸುವ ಬದಲಾಗಿ ಜಾತಿ ಆಧಾರದಮೆಲೆ ಅವರೆಷ್ಟೆ ಶ್ರೀಮಂತರಾಗಿದ್ದರು ಹಿಂದುಳಿದವರ ವರ್ಗಕ್ಕೆ ಸೇರುವಂತೆ ಇರುವ ಈ ವ್ಯೆವಸ್ತೆ, ಮತ್ತು ಅರ್ಹತೆ ಮತ್ತು ಅವಶ್ಯೆಕತೆ ಇದ್ದರು ಸಿಗಲಾಗದಂತ ಸರಕಾರಿ ಕೇಲಸ ವೆಂಬ ಕನ್ನಡಿಯೊಳಗಿನ ಗಂಟು ಇವತ್ತು ನನ್ನಂತ ಎಷ್ಟೊ ಬಡಮಧ್ಯೆಮ ವರ್ಗಗದ ಕುಟುಂಬಗಳಿಂದ ಬಂದಂತ ಯುವಕರನ್ನ ಕಾಡ್ತಾಇದೆ.

ಹಿಗೇ ನೊಡುತ್ತಾ ಹೋದರೆ ಹತ್ತು ಹಲವು ಉದಾಹರಣೆ ಗಳನ್ನ ನೀವು ಕಾಣಬಹುದು, ಈ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುವಾ ಮತ್ತು ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ, ದೇಶದ ನಾಗರೀಕರಾಗಿರುವ ನಮ್ಮೆಲ್ಲರದ್ದಾಗಿದೆ.

ಮುಂದುವರಿದ ಜನಾಂಗಕ್ಕೆ ಸೆರಿದ ಒಂದೆ ಕಾರಣಕ್ಕೆ ಅರ್ಹತೆ ಇದ್ದರು ಬಯಸಿದಾ ಶಾಲಾ ಕಲೇಜು ಗಳಲ್ಲಿ ಪ್ರೆವೇಶಾತಿ ಪಡೆಯಲು, ಉನ್ನತ ವ್ಯಾಸಾಂಗ ಮಾಡಲು ಯಾವುದೆ ರೀತಿಯ ಸಾಕಷ್ಟು ಆರ್ಥಿಕ ಸಹಾಯವಿಲ್ಲದೆ ಮತ್ತು ಕೆಲಸವನ್ನ ಪಡೆದುಕೊಳ್ಳಲು ಪರದಾಡವಂತೆ ಮಾಡಿರುವ ಇಂದಿನ ಪರಸ್ಥಿತಿ, ತಕ್ಕ ಮಟ್ಟಿಗೆ ಆರ್ಥಿಕ ಸಬಲತೆಯುಳ್ಳ ಎಷ್ಟೊ ಬುದ್ಧಿವಂತ ಯುವಕರನ್ನ ದೇಶವನ್ನ ಬಿಟ್ತುಹೋಗುವಂತೆ ಪ್ರೇರೆಪಿಸುತ್ತಿದೆ. ಇನ್ನೂ ಆರ್ಥಿಕ ಸಬಲತೆಯುಳ್ಳ ಕೆಲವರು ಖಾಸಗಿಯಾಗಿ ವ್ಯೆವಹಾರಗಳನ್ನ ಮಾಡುತ್ತ ಮತ್ತು ಆರ್ಥಿಕ ಸಬಲತೆ ಇಲ್ಲದ ಸಾಮಾನ್ಯೆರು ಇಲ್ಲೆ ಖಾಸಗಿ ವಲಯಗಳಲ್ಲಿ ಕೆಲಸಗಳನ್ನ ಮಾಡಿ ತಮ್ಮ ಬುದ್ಧಿಶಕ್ತಿಯಿಂದ ಖಾಸಗಿವಲಯದ ಈ ವೇಗವಾದ ಬೆಳವಣಿಗೆಗೆ ಪಾತ್ರರಾಗುತಿದ್ದಾರೆ. ಖಾಸಗಿ ವಲಯದಲ್ಲಿ ಸರ್ವರನ್ನು ಸಮಭಾವದಿಂದ ನೋಡುವ ಮತ್ತು ಅರ್ಹತೆ ಆದಾರಿತ ನೇಮಕಾತಿಗಳನ್ನು ಸಹಿಸದ ಕೆಲವೊಂದು ರಾಜಕೀಯ ಮತ್ತು ಜಾತಿ ಆಧಾರಿತ ಪಕ಼್ಗಳು, ತಮ್ಮ ರಾಜಕೀಯದ ಬೇಳೆಯನ್ನ ಬೇಯಿಸಿಕೊಳ್ಳಲು ಇಂಥಾ ಒಂದು ಅವಿವೇಕಿತನಕ್ಕೆ ಕೈಹಕುತ್ತಿವೆ.

ನಿಜವಾಗ್ಲು ಇವರಿಗೆ ಹಿಂದುಳಿದವರನ್ನ ಗುರುತಿಸಿ, ಅವರನ್ನು ಮುಂದೆ ತರುವ ಉದ್ದೇಶವಿದ್ದಲ್ಲಿ, ಹಿಂದುಳಿದವರ್ಗಗಳ ಆರ್ಥಿಕ ಮತ್ತು ಭೌದ್ಧೀಕ ಮಟ್ಟದ ಎಳೀಗೆಗೆ ನಿಜವಾಗಲು ಬೇಕಾಗಿರುವ ಅವಶ್ಯಕ ಸವಲತ್ತುಗಳಾದ, ಉಚಿತ ಮತ್ತು ಉತ್ತಮ ಶಿಕ಼್ಣ ಪದ್ದತಿ ಮತ್ತು ಉಚಿತವಾಗಿ ಹೆಚ್ಚಿನ ಖಾಸಗಿ ಪಾಠಗಳ ವ್ಯೆವಸ್ಥೆ, ವಯಸ್ಸಿನಲ್ಲಿ ಸಡಲಿಕೆ, ಉಚಿತವಾಗಿ ಮನೆ, ವಿದ್ಯುತ್,ಸಾರಿಗೆ ವ್ಯೆವಸ್ಥೆ ಮತ್ತು ಮುಂತಾದ ಮೂಲಭೊತ ಅವಶ್ಯೆಕತೆಗಳನ್ನ ಪೊರೈಸಬೇಕೆ ಹೊರತು ಮೀಸಲಾತಿ ಮೂಲಕ ಅರ್ಹತೆಯಿಇಲ್ಲಿ ಕಡಿತಗೊಳಿಸಿ ಕೆಲಸ ಕೊಡಿಸುವದರಿಂದಲ್ಲ.

ಅಧಿಕಾರದ ಆಸೆಯಿಂದ ಮತ್ತು ತಮ್ಮ ರಾಜಕೀಯ ಬೆಳೆ ಬೇಯಿಸಿ ಕೊಳ್ಳುವ ಉದ್ದೇಶದಿಂದ ಇಂತಹ ನಿರ್ಧಾರವನ್ನ ತೆಗೆದುಕೊಳ್ಳುವದರಿಂದ ಮುಂದಿನ ದಿನಗಳಲ್ಲಿ ಇದು ಭಾರತ ಅಭಿವೃದ್ಧಿ ಪಥದಿಂದ ಅಧಿ:ಪತನದತ್ತ ಸಾಗುವ ಕಾಲದ ದಿನಗಣನೆಯೆಂದೆ ನನ್ನ ಭಾವನೆ. ಇದನ್ನ ಈ ದೇಶದ ನಾಗರೀಕರು,ರಾಜಕೀಯ ನಾಯಕರು ಮತ್ತು ಇಂದಿನ ಯುವಕರು ಅರ್ಥಮಾಡಿಕೊಳ್ಳುವುದು ಒಳಿತು.

ಗೋವರ್ಧನ್ ಗಿರಿ ಜೋಶಿ